Headlines

ಮೇ ತಿಂಗಳೊಳಗೆ ಹಸಿರುಮಕ್ಕಿ ಸೇತುವೆ ಉದ್ಘಾಟನೆ : ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ | Hasirumakki Bridge To Be Inaugurated By May Minister Satish Jarkiholi

ಮೇ ತಿಂಗಳೊಳಗೆ ಹಸಿರುಮಕ್ಕಿ ಸೇತುವೆ ಉದ್ಘಾಟನೆ : ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ | Hasirumakki Bridge To Be Inaugurated By May Minister Satish Jarkiholi



ಮೇ ತಿಂಗಳೊಳಗೆ ಹಸಿರುಮಕ್ಕಿ ಸೇತುವೆ ಉದ್ಘಾಟನೆ : ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ | Hasirumakki Bridge To Be Inaugurated By May Minister Satish Jarkiholi

ಸಾಗರ ತಾಲೂಕಿನ ಹಸಿರುಮಕ್ಕಿ ಬಳಿ ಶರಾವತಿ ನದಿ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ಅಂದಾಜು 125.67 ಕೋಟಿ ರು. ವೆಚ್ಚದ ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಮೇ ತಿಂಗಳೊಳಗೆ ಜನಸಂಚಾರಕ್ಕೆ ಮುಕ್ತಗೊಳಿಸಿ ಕೊಡಲಾಗುವುದು ಎಂದು ರಾಜ್ಯದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಶಿವಮೊಗ್ಗ : ಸಾಗರ ತಾಲೂಕಿನ ಹಸಿರುಮಕ್ಕಿ ಬಳಿ ಶರಾವತಿ ನದಿ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ಅಂದಾಜು 125.67 ಕೋಟಿ ರು. ವೆಚ್ಚದ ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಮೇ ತಿಂಗಳೊಳಗೆ ಜನಸಂಚಾರಕ್ಕೆ ಮುಕ್ತಗೊಳಿಸಿ ಕೊಡಲಾಗುವುದು ಎಂದು ರಾಜ್ಯದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಹಸಿರುಮಕ್ಕಿ ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ

ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಸೋಮವಾರ ಹಸಿರುಮಕ್ಕಿ ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ, ಹಿನ್ನೀರಿನ ಲಾಂಚ್‌ನಲ್ಲಿ ಪ್ರಯಾಣಿಸಿ, ಕಾಮಗಾರಿಗಳನ್ನು ಖುದ್ದಾಗಿ ವೀಕ್ಷಿಸಿ ನಂತರ ಮಾತನಾಡಿ, ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿಗೆ ಅಗತ್ಯವಿರುವ 56.14 ಕೋಟಿ ರು. ಅನುದಾನ ಬಿಡುಗಡೆಗೊಳಿಸಿ, ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮೇ ಮಾಹೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಅಮೃತ ಹಸ್ತದಿಂದ ಉದ್ಘಾಟಿಸಲಾಗುವುದು ಎಂದರು.

ಶರಾವತಿ ಸಂತ್ರಸ್ತ ಗ್ರಾಮಗಳಿರುವ ಆರು ಪಂಚಾಯಿತಿಗಳ ನಿವಾಸಿಗಳಿಗೆ ಅಂತರ ಕಡಿತ

ಈ ಸೇತುವೆಯ ನಿರ್ಮಾಣದಿಂದಾಗಿ ಶರಾವತಿ ಸಂತ್ರಸ್ತ ಗ್ರಾಮಗಳಿರುವ ಆರು ಪಂಚಾಯಿತಿಗಳ ನಿವಾಸಿಗಳಿಗೆ ಹಾಗೂ ಸಾಗರ ಪಟ್ಟಣದಿಂದ ಕೊಲ್ಲೂರಿಗೆ 32ಕೀ. ಮೀ. ಅಂತರ ಕಡಿತಗೊಳ್ಳಲಿದೆ ಎಂದರು.

ಪ್ರಸ್ತುತ ಪ್ರಗತಿಯಲ್ಲಿರುವ ಕಾಮಗಾರಿಯಲ್ಲಿ ಬಳಸಲಾಗುತ್ತಿರುವ ದೈತ್ಯ ಕಾಂಕ್ರೀಟ್ ಬ್ಲಾಕ್ ಗಳಲ್ಲಿ ಗುಣಮಟ್ಟದ ಕೊರತೆ ಹಾಗೂ ಬ್ಲಾಕ್ ನ ಕ್ಷಮತೆಯಲ್ಲಿ ನ್ಯೂನತೆಗಳಿದ್ದಿದ್ದರಿಂದಾಗಿ ಬದಲಿ ವ್ಯವಸ್ಥೆ ಕಲ್ಪಿಸುವಲ್ಲಿ ವಿಳಂಬವಾಗಿದೆ. ಇನ್ನೂ ವಿಳಂಬಕ್ಕೆ ಅವಕಾಶವಿಲ್ಲದಂತೆ ಸೇತುವೆ ಲೋಕಾರ್ಪಣೆಗೊಳಿಸಲು ಕ್ರಮ ವಹಿಸಲಾಗುವುದು ಎಂದರು.

ಸಾಗರ ಪಟ್ಟಣದ ರಸ್ತೆ ಅಗಲೀಕರಣ ಕಾಮಗಾರಿ ಕೈಗೆಟ್ಟಿಕೊಂಡಿದ್ದು, ಈಗಾಗಲೇ ಎರಡು ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ. ಭೂ ಪರಿಹಾರ ಮೊತ್ತ ಉಳಿಕೆ 11ಕೋಟಿ ರು.ಗಳನ್ನು ಈ ಕೂಡಲೇ ಮಂಜೂರು ಮಾಡಲಾಗುವುದು ಎಂದರು.

ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಈ ಸೇತುವೆ ನಿರ್ಮಾಣ ಕಾರ್ಯದಲ್ಲಿ ಹಸಿರುಮಕ್ಕಿ ಭಾಗದ ನಿವಾಸಿಗಳು ಅತಿ ಹೆಚ್ಚು ಕಾತರರಾಗಿದ್ದಾರೆ ಎಂದರು.ಸದರಿ ಸೇತುವೆ ನಿರ್ಮಿಸುವುದರಿಂದ ಮದ್ಯ ಕರ್ನಾಟಕ, ಉತ್ತರ ಕರ್ನಾಟಕ ಭಾಗದಿಂದ ಕರಾವಳಿ ಭಾಗಕ್ಕೆ ಸಂಪರ್ಕ ಏರ್ಪಡ ಲಿದೆ. ಸಾಗರದಿಂದ ಕೊಲ್ಲೂರು, ಉಡುಪಿ, ಮುಂತಾದ ಯಾತ್ರಾ ಸ್ಥಳಗಳಿಗೆ ತೆರಳುವ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಮಂಗಳೂರು ಪಟ್ಟಣ, ಮಂಗಳೂರು ಬಂದರು ಮತ್ತು ಕುಂದಾಪುರ ಪಟ್ಟಣಗಳಿಗೆ ಸಮೀಪವಾಗಲಿದೆ ಎಂದರು.



Source link

Leave a Reply

Your email address will not be published. Required fields are marked *