ನಮ್ಮ ಮೆಟ್ರೋ (ಸಾಂದರ್ಭಿಕ ಚಿತ್ರ)ಚಿತ್ರದ ಕ್ರೆಡಿಟ್ ಮೂಲ: tv9
ಬೆಂಗಳೂರು, ಫೆಬ್ರವರಿ 24: ಕಳೆದ ಬಾರಿ ಮೆಟ್ರೋ ಟಿಕೆಟ್ ದರ (ಮೆಟ್ರೋ ಟಿಕೆಟ್ ದರ) ಶೇ 5ರಷ್ಟು ಏರಿಕೆ ಮಾಡಿ ನಂತರ ತಾತ್ಕಾಲಿಕವಾಗಿ ತಡೆ ನೀಡಲಾಯಿತು. ನಂತರ, ಮೆಟ್ರೋ ಖರ್ಚು ವೆಚ್ಚಗಳ ಬಗ್ಗೆ ಆಡಿಟ್ ಮಾಡಿ ಎಂದು ಬಿಎಂಆರ್ ಸಿಎಲ್ ಗೆ (BMRCL) ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದರು. ಅದರಂತೆ, ಬಿಎಂಆರ್‌ಸಿಎ ಆಂತರಿಕ ಅಡಿಟ್ ಮಾಡಿದೆ. ಮೆಟ್ರೋ ನಿರ್ವಹಣೆ, ಖರ್ಚು ವೆಚ್ಚ, ಸಿಬ್ಬಂದಿ ಸಂಬಳ, ಇಂಧನ ವೆಚ್ಚ ಎಲ್ಲದರ ಬಗ್ಗೆ ಆಡಿಟ್ ಮುಗಿದಿದೆ, ಡಿಸಿಎಂ ಅವರ ಗಮನಕ್ಕೆ ತರಲು ಬಿಎಂಆರ್ಎಸ್ ಮುಂದಾಗಿದೆ. ಆಡಿಟ್ ಮುಗಿದ ಹಿನ್ನೆಲೆ ಮತ್ತೆ ದರ ಏರಿಕೆ ಚರ್ಚೆ ಮುನ್ನೆಲೆಗೆ ಬಂದಿದೆ. ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಿಗದಿತ ಶೇ 5 ರ ದರದ ಬದಲು ತುಸು ಕಡಿಮೆ ಏರಿಕೆಯಾಗಬಹುದು ಅಥವಾ ಹೆಚ್ಚಾಗಬಹುದು ಆದರೂ ಆಗಬಹುದು. ಆದರೆ, ಮೆಟ್ರೋ ಪ್ರಯಾಣಿಕರು ಟಿಕೆಟ್ ದರ ಏರಿಕೆ ಮಾಡಬಾರದು ಎಂದು ಹೇಳಿದ್ದಾರೆ.
ನಿಗದಿ ಆಗಿದ್ದ ಶೇ 5 ರ ದರದಲ್ಲಿ ಶೇ 1 ಅಥವಾ 2 ರ ದರ ನಿಗದಿ ಮಾಡಬಹುದು ಎಂದು ಅಂದಾಜಿಸಲಾಗಿದೆ. ಅಥವಾ ನಿಗದಿ ಮಾಡಿದ್ದಕ್ಕಿಂತ ಜಾಸ್ತಿ ಆದರೂ ಆಗಬಹುದು ಎಂಬ ಚರ್ಚೆ ಇದೆ. ಆದರೆ ದರ ಇಳಿಕೆ ಅಥವಾ ಏರಿಕೆ ಆಗಬೇಕು ಅಂದರೆ ಹೊಸ ದರ ನಿಗದಿ ಸಮಿತಿ ರಚನೆ ಆಗಬೇಕು. ಇದೀಗ ಆಡಿಟ್ ಮುಕ್ತಾಯ ಆದ ಹಿನ್ನೆಲೆ, ಮೆಟ್ರೋ ಬೋರ್ಡ್ ಮೀಟಿಂಗ್ ಸಮಯ ನಿಗದಿ ಮಾಡುವ ವಿಚಾರದ ಬಗ್ಗೆ ಬಿಎಂಆರ್ ಸಿಎಲ್ ಎಂಡಿ ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಮನವಿ ಮಾಡಲಿದ್ದಾರೆ. ಬೋರ್ಡ್ ಮೀಟಿಂಗ್ ನಂತರ ಎಷ್ಟು ದರ ಏರಿಕೆಯಾಗುತ್ತದೆ ಎಂಬ ಸ್ಪಷ್ಟತೆ ಸಿಗಲಿದೆ. ಒಟ್ಟಿನಲ್ಲಿ ದರ ಏರಿಕೆ ಆಗುವುದು ನಿಶ್ಚಿತ ಎನ್ನಲಾಗುತ್ತಿದೆ.
ಇದನ್ನೂ ಓದಿ: ಹೇಗೆ ನಿಗದಿಯಾಗುತ್ತೆ ನಮ್ಮ ಮೆಟ್ರೋ ಟಿಕೆಟ್ ದರ? ಯಾರು ಚೆನ್ನಾಗಿ ಮಾಡ್ತಾರೆ? ಇಲ್ಲಿದೆ ವಿವರ
ಒಟ್ಟಿನಲ್ಲಿ ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆಯಿಂದ ರಿಲೀಫ್ ಸಿಗುತ್ತದೆ ಎಂದುಕೊಂಡಿದ್ದವರಿಗೆ ಶಾಕ್. ಟಿಕೆಟ್ ದರ ಏರಿಕೆ ಆದರೆ ಮತ್ತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಸಂಘರ್ಷ ಏರ್ಪಡುವುದಂತೂ ಗ್ಯಾರಂಟಿ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ