
ನಿನ್ನೆಯ ಗಣಿತ ವಿಷಯದ ಸ್ಪೆಷಲ್ ಕ್ಲಾಸ್‌ನಲ್ಲಿ 33 ವಿದ್ಯಾರ್ಥಿಗಳಿದ್ರು. ಶಾಲೆಯ ಕಾಂಪೌಂಡ್‌ನಿಂದ ಹೊರ ಹೋದ್ಮೇಲೆ ಈ ಘಟನೆ ನಡೆದಿದೆ. ಹಲ್ಲೆ ಮಾಡಿದವರ ಪೈಕಿ ಓರ್ವ SSLC ಫೇಲ್ ಆಗಿಲ್ಲ ಮತ್ತೊಮ್ಮೆ ಪರೀಕ್ಷೆಗೆ ಬರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದನು. ಇನ್ನೊಬ್ಬ 9ನೇ ತರಗತಿ ಫೇಲಾಗಿರುವ ವಿದ್ಯಾರ್ಥಿ. ಮತ್ತೋರ್ವ ನಮ್ಮ ವಿದ್ಯಾರ್ಥಿ ಅಲ್ಲ. ಶಾಲೆಯ ಪಕ್ಕದಲ್ಲಿಯೇ ಮೈದಾನವಿದ್ದು, ಮನೆಗೆ ಸಮೀಪವಾಗುವ ಕಾರಣ ಮಕ್ಕಳು ಇಲ್ಲಿಂದಲೇ ಹೋಗುತ್ತಾರೆ ಎಂದು ಮುಖ್ಯೋಪಾಧ್ಯಯ ಶಿವರಾಂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗದಲ್ಲಿ ಸ್ಪೆಷಲ್ ಕ್ಲಾಸ್ ಬಳಿಕ ಸಹಪಾಠಿಯನ್ನ ಕೊಂದ ಅನ್ಯಕೋಮಿನ ಮೂವರು ವಿದ್ಯಾರ್ಥಿಗಳು