ಬಿಗ್ ಬಾಸ್ ಕನ್ನಡ ಸೀಸನ್ 12 ರನ್ನರ್ ಅಪ್ ರಕ್ಷಿತಾ ಶೆಟ್ಟಿ ಅವರು ನಾನು ಮದುವೆ ಆಗುವ ಹುಡುಗ, ಕಾಮಿಡಿ ಮಾಡಬೇಕು, ಆರಾಮ್ ಆಗಿರಬೇಕು ಎಂದು ಹೇಳಿದ್ದರು. ಆದರೆ ಮದುವೆ ವಿಷಯ ಮಾತಾಡಿದರೆ ಅವರ ತಾಯಿ ಬೈತಾರಂತೆ. ಈ ಬಗ್ಗೆ ಮಾಧ್ಯಮದ ಜೊತೆ ಅವರು ಮಾತನಾಡಿದ್ದಾರೆ.

ನಾನು ನಾರ್ಮಲ್ ಲೈಫ್‌ಗೆ ಬಂದಿಲ್ಲ, ಇಂಟರ್‌ವ್ಯೂಗಳನ್ನು ಮಾಡುತ್ತ, ಇವೆಂಟ್‌ಗಳಲ್ಲಿ ಭಾಗವಹಿಸುತ್ತ ಅದರಲ್ಲಿಯೇ ಬ್ಯುಸಿ ಇದ್ದೇನೆ. ಹೀಗಾಗಿ ನಾನು ಹಸು ತಗೊಂಡಿಲ್ಲ ಎಂದು ರಕ್ಷಿತಾ ಶೆಟ್ಟಿ ಅವರು ಹೇಳಿದ್ದಾರೆ.

ನನಗೆ ಹುಡುಗರು ಫ್ರೆಂಡ್ಸ್ ಇದ್ದಾರೆ. ನಾನು ಮದುವೆ ಆಗೋಕೆ ಟೈಮ್ ಇದೆ, ನಾನು ಮದುವೆ ಎಂದರೆ ನನ್ನ ತಾಯಿ ಬೈತಾರೆ. ನಾನು ನನ್ನ ಗಂಡ ಹಾಗೆ ಇರಬೇಕು, ಹೀಗೆ ಇರಬೇಕು ಎಂದರೆ ಈ ವಯಸ್ಸಿನಲ್ಲಿ ಎಂಥ ಮದುವೆ ಎಂದು ಬೈತಾರೆ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

ನಾನು ಮದುವೆ ಎಂದರೆ ನನ್ನ ತಾಯಿ ಕಣ್ಣು ದೊಡ್ಡ ಮಾಡ್ತಾರೆ. ಮದುವೆ ಆಗದೆ ಹಾಗೆ ಇದ್ದರೂ ಕೂಡ ನನ್ನ ತಾಯಿ ಖುಷಿಯಿಂದ ಇರುತ್ತಾರೆ ಎಂದು ರಕ್ಷಿತಾ ಶೆಟ್ಟಿ ಅವರು ಹೇಳಿದ್ದಾರೆ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

ನಾನು ಸ್ವಲ್ಪ ಜೋರು, ಮದುವೆ ಆಗಿ ಆಮೇಲೆ ಗಲಾಟೆ ಮಾಡಿಕೊಂಡು ಏನಾದರೂ ಮಾಡ್ತೀನಿ ಎಂದು ಅಮ್ಮನಿಗೆ ಟೆನ್ಶನ್ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

Source link
ಮದುವೆ ವಿಷಯ ಮಾತಾಡಿದ್ರೆ ಅಮ್ಮ ಬೈತಾರೆ, ನಾನು ಮದುವೆ ಆಗದಿದ್ರೆ ಖುಷಿಯಂತೆ: Rakshita Shetty