ಜಾರ್ಖಂಡ್ ಏರ್ ಆಂಬುಲೆನ್ಸ್ ದುರಂತ: ಡಾಕ್ಟರ್ ಆಗಿದ್ದ ಒಬ್ಬನೇ ಒಬ್ಬ ಮಗನನ್ನೂ ಕಳೆದುಕೊಂಡು ಗೋಳಾಡಿದ ಅಪ್ಪ | Father Inconsolable After His Only Son Lost Life In Jharkhand Air Ambulance Tragedy

ಜಾರ್ಖಂಡ್ ಏರ್ ಆಂಬುಲೆನ್ಸ್ ದುರಂತ: ಡಾಕ್ಟರ್ ಆಗಿದ್ದ ಒಬ್ಬನೇ ಒಬ್ಬ ಮಗನನ್ನೂ ಕಳೆದುಕೊಂಡು ಗೋಳಾಡಿದ ಅಪ್ಪ | Father Inconsolable After His Only Son Lost Life In Jharkhand Air Ambulance Tragedy



ಜಾರ್ಖಂಡ್ ಏರ್ ಆಂಬುಲೆನ್ಸ್ ದುರಂತ: ಡಾಕ್ಟರ್ ಆಗಿದ್ದ ಒಬ್ಬನೇ ಒಬ್ಬ ಮಗನನ್ನೂ ಕಳೆದುಕೊಂಡು ಗೋಳಾಡಿದ ಅಪ್ಪ | Father Inconsolable After His Only Son Lost Life In Jharkhand Air Ambulance Tragedy

ಜಾರ್ಖಂಡ್‌ನಲ್ಲಿ ಏರ್ ಆಂಬುಲೆನ್ಸ್ ಪತನಗೊಂಡು ವೈದ್ಯರೂ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ಮೃತಪಟ್ಟ ವೈದ್ಯ ವಿಕಾಸ್ ಕುಮಾರ್ ಗುಪ್ತಾ ಅವರ ತಂದೆ,  ಒಬ್ಬನೇ ಒಬ್ಬನನ್ನು ಕಳೆದುಕೊಂಡು ಬಿಕ್ಕಳಿಸಿ ಅತ್ತಿದ್ದಾರೆ. ಅವರ ಗೋಳಾಟದ ವೀಡಿಯೋ ಎಂತಹಾ ಕಲ್ಲು ಹೃದಯಗಳನ್ನು ಕರಗುವಂತೆ ಮಾಡಿದೆ.

ಇದೊಬ್ಬ ಮಗನನ್ನು ಕಳೆದುಕೊಂಡು ಗೋಳಾಡಿದ ವೈದ್ಯನ ತಂದೆ:

ಜಾರ್ಖಂಡ್‌ನಲ್ಲಿ ಏರ್ ಆಂಬುಲೆನ್ಸ್ ದುರಂತದಲ್ಲಿ ಮೃತಪಟ್ಟ 7 ಜನರಲ್ಲಿ ಒಬ್ಬರು ವೈದ್ಯರು ಕೂಡ ಸೇರಿದ್ದಾರೆ. ತಮ್ಮ ವೈದ್ಯ ಪುತ್ರನನ್ನು ಹಠಾತ್ ಆಗಿ ಕಳೆದುಕೊಂಡ ಅವರ ತಂದೆಯ ದುಃಖ ಹೇಳತೀರದಾಗಿದೆ. ಮಾಧ್ಯಮಗಳ ಕ್ಯಾಮರಾ ಮುಂದೆಯೇ ಅವರು ತಮ್ಮ ಏಕೈಕ ಪುತ್ರನನ್ನು ಕಳೆದುಕೊಂಡು ಕಣ್ಣೀರಿಟ್ಟಿದ್ದು, ಮಗನ ಸಾವಿನಿಂದ ತಾನು ಸರ್ವನಾಶ ಆದೆ ಎಂದು ಕಣ್ಣೀರಿಟ್ಟಿದ್ದು, ಎಂಥಾ ಕಟುಕರ ಹೃದಯವನ್ನು ಕರಗುವಂತೆ ಮಾಡಿದೆ. ಜಾರ್ಖಂಡ್‌ನ ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಿಂದ ದೆಹಲಿಗೆ ಹೋಗುವುದಕ್ಕಾಗಿ ಈ ಬೀಚ್‌ ಕ್ರಾಫ್ಟ್ ಸಿ90 ಏರ್ ಆಂಬುಲೆನ್ಸ್ ಟೇಕಾಫ್ ಆಗಿದ್ದು ಹೊರಟ ಕೆಲವೇ ನಿಮಿಷದಲ್ಲಿ ರಾಡಾರ್ ಸಂಪರ್ಕ ಕಳೆದುಕೊಂಡು ಅಪಘಾತಕ್ಕೀಡಾಗಿದೆ.

ಜಾರ್ಖಂಡ್‌ನ ಛಾತ್ರಾ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಈ ಏರ್‌ ಆಂಬುಲೆನ್ಸ್‌ ದುರಂತದಲ್ಲಿ ಮೃತಪಟ್ಟ 7 ಜನರಲ್ಲಿ ಈ ವೈದ್ಯರು ಕೂಡ ಸೇರಿದ್ದಾರೆ. ಈ ಏರ್ ಆಂಬುಲೆನ್ಸ್ ಸಂಜಯ್‌ ಕುಮಾರ್ ಎಂಬ 41 ವರ್ಷದ ರೋಗಿಯನ್ನು ಕರೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಈ ವಿಮಾನದಲ್ಲಿ ವೈದ್ಯ ವಿಕಾಸ್‌ ಕುಮಾರ್ ಗುಪ್ತಾ ಕೂಡ ಇದ್ದರು. ಆದರೆ ವಿಮಾನ ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲ ಸಮಯದಲ್ಲೇ ರಾಡರ್ ಸಂಪರ್ಕ ಕಳೆದುಕೊಂಡು ಅಪಘಾತಕ್ಕೀಡಾಗಿದೆ. ಈ ವಿಮಾನವೂ ಕೋಲ್ಕತಾ ರಾಡಾರ್ ಸಂಪರ್ಕ ಕೇಂದ್ರದಿಂದ ಸಂಪರ್ಕ ಕಳೆದುಕೊಂಡಿತ್ತು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯವು ಹೇಳಿದೆ.

ಈ ದುರಂತದಲ್ಲಿ ವೈದ್ಯ ಹಾಗೂ ರೋಗಿ ಸೇರಿ ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ. ಇತ್ತ ಮಗನ ಘಟನೆಯ ನಂತರ ಅವರ ತಂದೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ದುಃಖ ತಡೆಯಲಾಗದೇ ಕಣ್ಣೀರಿಟ್ಟಿದ್ದಾರೆ. ನನ್ನ ಮಗ ವೈದ್ಯನಾಗಿದ್ದ. ಅವನು ರೋಗಿಗಳೊಂದಿಗೆ ದೆಹಲಿಗೆ ಹೋಗುತ್ತಿರುವುದಾಗಿ ಹೇಳಿದನು, ಆದರೆ ನಂತರ ವಿಮಾನ ಅಪಘಾತಕ್ಕೀಡಾಗಿದೆ ಮತ್ತು ನನ್ನ ಮಗ ಇನ್ನಿಲ್ಲ ಎಂದು ನನಗೆ ತಿಳಿಯಿತು. ಅವನಿಗೆ ಶಿಕ್ಷಣ ನೀಡಲು ನಾನು ನನ್ನ ಕೃಷಿ ಭೂಮಿಯನ್ನು ಮಾರಿಬಿಟ್ಟೆ ಎಂದು ವಿಕಾಸ್ ಕುಮಾರ್ ಗುಪ್ತಾ ಅವರ ತಂದೆ ಪಿಟಿಐ ಸುದ್ದಿ ಸಂಸ್ಥೆಗೆ ಕಣ್ಣೀರಿಡುತ್ತಲೇ ಹೇಳಿದ್ದಾರೆ.

ಇದನ್ನೂ ಓದಿ: ಡ್ರಗ್ ಲಾರ್ಡ್‌ ಹತ್ಯೆಯ ಬಳಿಕ ಬೆಂಕಿಯುಂಡೆಯಾದ ಮೆಕ್ಸಿಕೋ: ಉದ್ಯೋಗಿ ರಕ್ಷಣೆಗೆ ಪ್ರತಿ ವಿಮಾನವನ್ನು ಬುಕ್ ಮಾಡಿದ ಅಮೆರಿಕ ಕಂಪನಿ

ರಾಂಚಿಯ ದೇವಕಮಲ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಿಇಒ ಕೂಡ ವಿಮಾನ ಅಪಘಾತದಲ್ಲಿ ವೈದ್ಯರ ಸಾವಿಗೆ ಪ್ರತಿಕ್ರಿಯಿಸಿದ್ದಾರೆ. ದುರದೃಷ್ಟವಶಾತ್, ವಿಮಾನ ಅಪಘಾತಕ್ಕೀಡಾಗಿದೆ ಎಂಬ ಸುದ್ದಿ ನಮಗೆ ಸಿಕ್ಕಿತು ಡಾ. ವಿಕಾಸ್ ಗುಪ್ತಾ ನಮಗೆ ಹತ್ತಿರವಾಗಿದ್ದರು, ದುರದೃಷ್ಟವಶಾತ್ ಅವರು ಕೂಡ ನಿಧನರಾದರು ಎಂದು ಡಾ. ಅನಂತ್ ಸಿನ್ಹಾ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ವಿಮಾನದಲ್ಲಿ ಕರೆದೊಯ್ಯಲಾಗುತ್ತಿದ್ದ ರೋಗಿ ಸಂಜಯ್ ಕುಮಾರ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶೇ. 60 ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದರು. ನಾವು ಅವರನ್ನು ಐಸಿಯುನಲ್ಲಿ ಇರಿಸಿದ್ದೆವು ಕೆಲವು ಸಂಬಂಧಿಕರು ಅವರನ್ನು ಉತ್ತಮ ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದೊಯ್ಯಬೇಕೆಂದು ಸೂಚಿಸಿದ್ದರು. ಹೀಗಾಗಿ ಅವರೇ ಮಾತುಕತೆ ನಡೆಸಿ ಏರ್ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು ಎಂದು ಆಸ್ಪತ್ರೆಯ ಸಿಇಒ ಸಿನ್ಹಾ ಹೇಳಿದರು.

ಇದನ್ನೂ ಓದಿ: ಮಗನ ಜೀವಕ್ಕಿಂತ ಸೀರೆ ಅಷ್ಟೊಂದು ಮುಖ್ಯ ಆಯ್ತಾ: ಅಪಾರ್ಟ್‌ಮೆಂಟ್‌ನಿಂದ ಕೆಳಗೆ ಜಾರಿದ ಸೀರೆಗಾಗಿ ಮಹಿಳೆ ಮಾಡಿದ್ದೇನು ನೋಡಿ?

ಈ ಅಪಘಾತದಲ್ಲಿ ಸಾವನ್ನಪ್ಪಿದ ಇತರರನ್ನು ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್, ಕ್ಯಾಪ್ಟನ್ ಸವ್ರಜ್‌ದೀಪ್ ಸಿಂಗ್, ಸಂಜಯ್ ಕುಮಾರ್, ಸಚಿನ್ ಕುಮಾರ್ ಮಿಶ್ರಾ, ಅರ್ಚನಾ ದೇವಿ ಮತ್ತು ಧುರು ಕುಮಾರ್ ಎಂದು ಗುರುತಿಸಲಾಗಿದೆ. ಅಪಘಾತದ ಕಾರಣದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ, ಆದರೆ ಕೆಲವು ಅಧಿಕಾರಿಗಳು ಇಲ್ಲಿಯವರೆಗೆ ಪ್ರತಿಕೂಲ ಹವಾಮಾನ ಮತ್ತು ಗುಡುಗು ಸಹಿತ ಮಳೆ ಕಾರಣವಾಗಿರಬಹುದು ಎಂದು ಸೂಚಿಸಿದ್ದಾರೆ.

ದೆಹಲಿ ಮೂಲದ ರೆಡ್‌ಬರ್ಡ್ ಏರ್‌ವೇಸ್‌ VT-AJV ಎಂಬ ಟೈಲ್ ಸಂಖ್ಯೆಯೊಂದಿಗೆ ಈ ಏರ್ ಆಂಬ್ಯುಲೆನ್ಸ್ ನಿರ್ವಹಿಸಲ್ಪಡುತ್ತಿತ್ತು. ವಾರಣಾಸಿಯಿಂದ ಸುಮಾರು 100 ನಾಟಿಕಲ್ ಮೈಲ್ ದೂರದಲ್ಲಿ ಆಗ್ನೇಯದಲ್ಲಿ ಕೋಲ್ಕತ್ತಾದ ರಾಡಾರ್ ಜೊತೆ ಸಂಪರ್ಕ ಕಳೆದುಕೊಂಡು ಸ್ವಲ್ಪ ಸಮಯದ ನಂತರ ಜಾರ್ಖಂಡ್‌ನ ಸಿಮಾರಿಯಾದ ಕಾಡಿನಲ್ಲಿ ಅಪಘಾತಕ್ಕೀಡಾಯಿತು ಎಂದು ವರದಿಯಾಗಿದೆ.

Scroll to load tweet…



Source link

Leave a Reply

Your email address will not be published. Required fields are marked *