ಯಶ್ ‘ಟಾಕ್ಸಿಕ್’ ಕಲೆಕ್ಷನ್ ಪ್ಲ್ಯಾನ್ ಹೇಗಿದೆ? ವಾರಕ್ಕೆ ಎಷ್ಟಾಗುತ್ತದೆ ಗಳಿಕೆ?

ಯಶ್ ‘ಟಾಕ್ಸಿಕ್’ ಕಲೆಕ್ಷನ್ ಪ್ಲ್ಯಾನ್ ಹೇಗಿದೆ? ವಾರಕ್ಕೆ ಎಷ್ಟಾಗುತ್ತದೆ ಗಳಿಕೆ?


ಯಶ್ (ಯಶ್) ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇವೆ. ಮಾರ್ಚ್ 19ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಬಿಡುಗಡೆ ಹಕ್ಕು ಮಾರಾಟ, ಡಿಜಿಟಲ್ ಹಕ್ಕು ಮಾರಾಟ ಮುಂತಾದವುಗಳನ್ನು ಇತ್ತೀಚೆಗಷ್ಟೇ ಚಿತ್ರತಂಡ ಮುಗಿಸಿದೆ. ‘ಟಾಕ್ಸಿಕ್’ ಸಿನಿಮಾದ ಪ್ರಚಾರಕ್ಕಾಗಿ ಯಶ್ ಇನ್ನೂ ಹೊರಬಂದಿಲ್ಲ ಆದರೂ ಸಹ ‘ಟಾಕ್ಸಿಕ್’ ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ ಎನಿಸಿಕೊಂಡಿದೆ. ಪ್ರಚಾರವನ್ನು ಇನ್ನೂ ಆರಂಭಿಸದಿದ್ದರೂ ಸಹ ಸಿನಿಮಾದ ಯಶಸ್ಸಿಗೆ ದೊಡ್ಡ ಯೋಜನೆಯೇ ಯಶ್ ಹಾಕಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಕೇವಲ ಒಂದು ವಾರದಲ್ಲಿ ಅಷ್ಟೂ ಬಜೆಟ್ ರಿಕವರಿ ಮಾಡಿ ದೊಡ್ಡ ಲಾಭವನ್ನೂ ಸಹ ದುಡಿದುಕೊಳ್ಳುವಂತೆ ಪ್ಲ್ಯಾನ್ ಮಾಡಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಪ್ರೀ ರಿಲೀಸ್ ಸೇಲ್ಸ್ ಅನ್ನು ಯಶ್ ಮತ್ತು ಕೆವಿಎನ್ ಅವರು ಅದ್ಧೂರಿಯಾಗಿ ಮಾಡಿದ್ದಾರೆ. ‘ಧುರಂಧರ 2’ ಸಿನಿಮಾ ಎದುರಾಳಿಯಾಗಿ ಬರುತ್ತಿದ್ದರೂ ಸಹ ‘ಟಾಕ್ಸಿಕ್’ ಸಿನಿಮಾವನ್ನು ಸುಮಾರು 5000 ರಿಂದ 600000 ವರೆಗೆ ಬಿಡುಗಡೆ ಮಾಡಲು ಯೋಜಿಸಿರುವುದು ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಭಾರಿ ಪರಿಣಾಮ ಬೀರಲಿದೆ. ‘ಧುರಂಧರ 2’ ಸಿನಿಮಾ ಇನ್ನೂ ಪ್ರೀ ರಿಲೀಸ್ ಅಥವಾ ಇನ್ನೇನು ಶುರುವಾಗುವ ಮುನ್ನವೇ ‘ಟಾಕ್ಸಿಕ್’ ಸಿನಿಮಾ ಚಿತ್ರಮಂದಿರಗಳ ಬುಕಿಂಗ್ ವರೆಗೂ ಕೆಲಸ ಮುಗಿಸಿರುವುದು ಸಿನಿಮಾಕ್ಕೆ ಭಾರೀ ದೊಡ್ಡ ಮುನ್ನಡೆಯನ್ನು ದಕ್ಕಿಸಿಕೊಟ್ಟಂತಾಗಿದೆ.

ಕಲೆಕ್ಷನ್ ಪ್ರಿಡಿಕ್ಷನ್ ವಿಚಾರಕ್ಕೆ ಬರುವುದಾದರೆ ಲೆಕ್ಕ ಸುಲಭವಿದೆ. ಚಿತ್ರತಂಡ 6000 ತೆರೆಯಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ. ಒಂದೊಮ್ಮೆ ಕನಿಷ್ಠ 5000 ತೆರೆಯಲ್ಲಿ ಬಿಡುಗಡೆಯಾದರೂ ಸಹ ಭಾರಿ ದೊಡ್ಡ ಮೊತ್ತವನ್ನೇ ಸಿನಿಮಾ ಪಡೆಯಲಿದೆ. ಅದರ ಲೆಕ್ಕಾಚಾರ ಇಲ್ಲಿದೆ, ಒಂದು ಪರದೆಯಲ್ಲಿ ಸರಾಸರಿ 250 ಮಂದಿ ಸಿನಿಮಾ ನೋಡುತ್ತಾರೆ. ಒಂದು ಟಿಕೆಟ್‌ನ ಸರಾಸರಿ ಬೆಲೆ ಕೇವಲ 200 ರೂಪಾಯಿಗಳು (ಅಸಲು ಬೆಲೆ ಇನ್ನೂ ಹೆಚ್ಚಿರುತ್ತದೆ) ಎಂದು ಲೆಕ್ಕ ಹಾಕಿದರೆ ಒಂದು ಸ್ಕ್ರೀನಿನ ಒಂದು ಶೋಗೆ ಒಟ್ಟಾಗುವ ಮೊತ್ತ 50,000 ರೂಪಾಯಿಗಳು. ಅಲ್ಲಿಗೆ 5000 ಪರದೆಗಳಿಗೆ ಒಂದು ಶೋಗೆ ಕಲೆಕ್ಟ್ ಆಗುವ ಮೊತ್ತ 25 ಕೋಟಿ ರೂಪಾಯಿಗಳು. ಅಲ್ಲಿಗೆ 5000 ಪರದೆಗಳಲ್ಲಿ ದಿನಕ್ಕೆ ನಾಲ್ಕು ಶೋ ಮಾತ್ರ ನಡೆದರೂ ಸಹ ದಿನದ 100 ಕೋಟಿ ರೂಪಾಯಿಗಳಾಗುತ್ತವೆ. ನೆನಪಿರಲಿ ಯಶ್ ಅವರ ‘ಕೆಜಿಎಫ್ 2’ ಸಿನಿಮಾ ಮೊದಲ ದಿನ 132 ಕೋಟಿಗೂ ಹೆಚ್ಚು ಗಳಿಕೆ ಮಾಡಿತ್ತು. ‘ಟಾಕ್ಸಿಕ್’ ಸಿನಿಮಾ ಅದ ಹೆಚ್ಚಿನ ಗಳಿಕೆಯನ್ನೇ ಮಾಡುವ ನಿರೀಕ್ಷೆ ಇದೆ.

ಇದನ್ನೂ ಓದಿ:ಯಶ್ ‘ಟಿಕೆಟ್’ ಲುಕ್ ಎಐ ಎಂದವರಿಗೆ ಸಿಕ್ತು ಉತ್ತರ; ಯಶ್ ಮೇಕೋವರ್ ನೋಡಿ

‘ಟಾಕ್ಸಿಕ್’ ಸಿನಿಮಾಕ್ಕೆ ಸುಮಾರು 500 ಕೋಟಿ ರೂಪಾಯಿ ಬಜೆಟ್ ಹಾಕಲಾಗಿದೆ. ಆದರೆ ಈ ಹಣ ಕೇವಲ ಮೂರು-ನಾಲ್ಕು ದಿನಗಳಲ್ಲಿ ಮರಳಿ ಬರಲಿದೆ. ಯಶ್ ಅವರ ಕ್ರೇಜ್ ಅದ್ಯಾವ ಮಟ್ಟಿಗಿದೆ ಎಂದರೆ ಮೊದಲ ಮೂರು ದಿನ ಸಿನಿಮಾ ಚೆನ್ನಾಗಿಲ್ಲವೆಂದರೂ ಹೌಸ್ ಫುಲ್ ಆಗುವುದು ಪಕ್ಕಾ. ಅದು ಮಾತ್ರವೇ ಅಲ್ಲದೆ, ಸಿನಿಮಾದ ಆಡಿಯೋ ಹಕ್ಕುಗಳು, ಡಿಜಿಟಲ್ ಹಕ್ಕುಗಳ ಹಿಂದೆಂದೂ ಕೇಳಿರದ ಭಾರಿ ಮೊತ್ತಕ್ಕೆ ಮಾರಾಟ ಆಗುತ್ತಿವೆ. ಅಲ್ಲಿಗೆ ಸಿನಿಮಾದ ಒಟ್ಟು ಗಳಿಗೆ ಸುಲಭವಾಗಿ 1500 ಕೋಟಿ ದಾಟುವುದು ಖಾತ್ರಿ. ಒಂದೊಮ್ಮೆ ಸಿನಿಮಾ ಅವರ ಜೊತೆಗೆ ತುಸುವೇ ಚೆನ್ನಾಗಿದ್ದರೂ ಸಾಕು ‘ದಂಗಲ್’, ‘ಬಾಹುಬಲಿ 2’ ದಾಖಲೆಗಳು ಸಹ ಮುರಿದು ಬೀಳುವುದು ಖಾತ್ರಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *