ನವದೆಹಲಿ, ಫೆಬ್ರುವರಿ 24: ಐಪಿಎಫ್ಒದಲ್ಲಿ (ಇಪಿಎಫ್ಒ) ನಿಷ್ಕ್ರಿಯವಾಗಿರುವ ಪಿಎಫ್ ಅಕೌಂಟ್ಗಳ ಸಂಖ್ಯೆ ಬಹಳಷ್ಟಿದೆ. ಹೊಸ ಪಿಎಫ್ ಖಾತೆಗೆ ವರ್ಗಾವಣೆ ಆಗಿದ್ದು, ಮೂರು ವರ್ಷಗಳಿಂದ ಪ್ರೀಮಿಯಂ ಸಂದಾಯ ಆಗದೇ ಇರುವ ಖಾತೆಗಳು ಇನ್ಯಾಕ್ಟಿವ್ ಎನಿಸಿಕೊಳ್ಳುತ್ತವೆ. ಈ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಮಹತ್ವದ ತೀರ್ಮಾನವನ್ನು ಕೈಗೊಂಡಿದೆ, ಒಂದು ಸಾವಿರ ರೂವರೆಗೆ ಬ್ಯಾಲನ್ಸ್ ಇರುವ ನಿಷ್ಕ್ರಿಯ ಐಪಿಎಫ್ ಖಾತೆಯಲ್ಲಿರುವ ಹಣವನ್ನು ನೇರವಾಗಿ ರೀಫಂಡ್ ಮಾಡಲಿದೆ.
ಸರ್ಕಾರದ ಈ ಆಲೋಚನೆ ಉಪಯುಕ್ತವೆನಿಸಬಹುದು. ಒಂದು ಸಾವಿರ ರೂವರೆಗೆ ಬ್ಯಾಲನ್ಸ್ ಇರುವ ಇನಾಪರೇಟಿವ್ ಅಕೌಂಟ್ಗಳ ಸಂಖ್ಯೆ 6 ಲಕ್ಷ ಹೆಚ್ಚಾಗಿದೆ. ಅವು ನಿರುಪಯುಕ್ತವಾಗಿ ಇರುವುದರ ಬದಲು ರೀಫಂಡ್ ಪಡೆದರೆ ಐಪಿಎಫ್ ಸದಸ್ಯರಿಗೆ ಅಲ್ಪ ಸಹಾಯ ಮಾಡಬಹುದು.
ಇದನ್ನೂ ಓದಿ: ಷೇರುಪೇಟೆ ಕುಸಿತ; ಹೂಡಿಕೆದಾರರಿಗೆ 4 ಲಕ್ಷ ಕೋಟಿ ನಷ್ಟ; ಮಾರುಕಟ್ಟೆ ಕುಸಿಯಲು ಏನು ಕಾರಣ?
ರೀಫಂಡ್ ಪಡೆಯಲು ಏನೂ ಮಾಡಬೇಕಾಗಿಲ್ಲ…
ನಿಮ್ಮ ನಿಷ್ಕ್ರಿಯ ಐಪಿಎಫ್ ಅಕೌಂಟ್ನಲ್ಲಿ ಹಣದ ಬ್ಯಾಲನ್ಸ್ 1,000 ರೂಗಿಂತ ಕಡಿಮೆ ಇದ್ದಲ್ಲಿ ಯೋಚನೆ ಬೇಡ. ತನ್ನಂತಾನೆ ಹಣವು ನಿಮ್ಮ ಬ್ಯಾಂಕ್ ಖಾತೆಗೆ ಬಂದು ಬೀಳುತ್ತದೆ. ನಿಮ್ಮ ಐಪಿಎಫ್ ಅಕೌಂಟ್ಗೆ ಜೋಡಿಯಾದ ಬ್ಯಾಂಕ್ ಅಕೌಂಟ್ಗೆ ಆ ಹಣ ಹೋಗುತ್ತದೆ. ಆ ಬ್ಯಾಂಕ್ ಅಕೌಂಟ್ಗೆ ಆಧಾರ್ ಲಿಂಕ್ ಆಗಿರಬೇಕು.
ಐಪಿಎಫ್ ಅಕೌಂಟ್ನಲ್ಲಿ ಹಣವು ಒಂದು ಸಾವಿರ ರೂಗಿಂತ ಹೆಚ್ಚಿದ್ದರೆ ಆಟೊಮ್ಯಾಟಿಕ್ ರೀಫಂಡ್ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ನೀವು ಹಣ ವಿತರಣಾ ಅರ್ಜಿ ಸಲ್ಲಿಸಬಹುದು. ನೀವು ಸಕ್ರಿಯ ಐಪಿಎಫ್ ಅಕೌಂಟ್ ಅನ್ನು ಹಳೆಯ ನಿಷ್ಕ್ರಿಯ ಅಕೌಂಟ್ ಅಕೌಂಟ್ ವಿಲೀನಗೊಳಿಸಬಹುದು.
ಇದನ್ನೂ ಓದಿ: ಐಡಿಯಾ ಯಾರದು ಅನ್ನೋದು ಮುಖ್ಯ ಅಲ್ಲ, ಅದನ್ನು ಜಾರಿಗೆ ತರೋನೇ ಜಾಣ: ಚಾಟ್ಜಿಪಿಟಿ ರೂವಾರಿ ಸ್ಯಾಮ್ ಆಲ್ಟ್ ಮ್ಯಾನ್ ಸಲಹೆ ಕೇಳಿ
ನಿಮ್ಮ ಐಪಿಎಫ್ ಖಾತೆ ನಿಷ್ಕ್ರಿಯವಾಗಿದೆ, ಪರಿಶೀಲಿಸುವ ಕ್ರಮ
- ಐಪಿಎಫ್ ಒ ವೆಬ್ ಸೈಟ್ಗೆ ಹೋಗಿ ‘ಸರ್ವಿಸಸ್’ – ‘ಫಾರ್ ಎಂಪ್ಲಾಯೀಸ್’ ಆಯ್ಕೆ ಮಾಡಿ.
- ಯುಎನ್ ಮತ್ತು ಪಾಸ್ವರ್ಡ್ ಮೂಲಕ ಲಾಗಿನ್ ಆಗಿ
- ‘ವ್ಯೂ ಪಾಸ್ಬುಕ್’ ನೋಡಿ.
ಇಲ್ಲಿ ಮೂರು ವರ್ಷ ಕಾಲ ಕಂಪನಿ ಯಾವುದಾದರು ಪ್ರೀಮಿಯಮ್ ಕೊಡುಗೆ ಬಂದಿಲ್ಲ ಎಂದಾದರೆ ಅದು ಇನಾಪರೇಟಿವ್ ಎನಿಸುತ್ತದೆ.
ಹಾಗೆಯೇ, ಉಮಾಂಗ್ ಆಯಪ್ನಲ್ಲೂ ನೀವು ಪಾಸ್ಬುಕ್ ವೀಕ್ಷಿಸಬಹುದು.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ