ಗಂಡಾಗಿ ಹುಟ್ಟಿ ಅಪ್ಸರೆಯಾಗಿ ಬದಲಾದ: ಮೊದಲು ಹಾಗೂ ನಂತರದ ಫೊಟೋಗೆ ಶಾಕ್ ಆದ ನೆಟ್ಟಿಗರು | Male To Female Transformation Story Boy Changed His Gender Turned A Gorgeous Woman

ಗಂಡಾಗಿ ಹುಟ್ಟಿ ಅಪ್ಸರೆಯಾಗಿ ಬದಲಾದ: ಮೊದಲು ಹಾಗೂ ನಂತರದ ಫೊಟೋಗೆ ಶಾಕ್ ಆದ ನೆಟ್ಟಿಗರು | Male To Female Transformation Story Boy Changed His Gender Turned A Gorgeous Woman



ಗಂಡಾಗಿ ಹುಟ್ಟಿ ಅಪ್ಸರೆಯಾಗಿ ಬದಲಾದ: ಮೊದಲು ಹಾಗೂ ನಂತರದ ಫೊಟೋಗೆ ಶಾಕ್ ಆದ ನೆಟ್ಟಿಗರು | Male To Female Transformation Story Boy Changed His Gender Turned A Gorgeous Woman

ಗಂಡಾಗಿ ಹುಟ್ಟಿ ಶಸ್ತ್ರಚಿಕಿತ್ಸೆಯ ಮೂಲಕ ಸುಂದರ ಯುವತಿಯಾಗಿ ಬದಲಾದ ವ್ಯಕ್ತಿಯೊಬ್ಬರು ತಮ್ಮ ಹಿಂದಿನ ಮತ್ತು ಇಂದಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. nakshathra_speaks ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಈ ಫೋಟೋಗಳು ವೈರಲ್ ಆಗಿದ್ದು, ಅವರ ಸೌಂದರ್ಯಕ್ಕೆ ನೆಟ್ಟಿಗರು ಬೆರಗಾಗಿದ್ದಾರೆ.

ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾದ 

ಬದುಕಿನಲ್ಲಿ ಎಲ್ಲರ ಅದೃಷ್ಟ ಹಣೆಬರಹ ಒಂದೇ ರೀತಿ ಇರುವುದಿಲ್ಲ, ಕೆಲವರು ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾಗುತ್ತಾರೆ. ಮತ್ತೆ ಕೆಲವರು ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾಗುತ್ತಾರೆ. ಖ್ಯಾತ ಕ್ರಿಕೆಟರ್ ಪುತ್ರ ಸಂಜಯ್ ಬಂಗಾರ್ ಅವರ ಪುತ್ರ ಆರ್ಯನ್ ಬಂಗಾರ್ ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸುಂದರ ಹೆಣ್ಣಾಗಿ ಬದಲಾಗಿದ್ದನ್ನು ನೀವೆಲ್ಲರೂ ನೋಡಿರಬಹುದು. ಅವರು ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಹಾಗೆಯೇ ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾದವರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೊದಲಿನ ಜೀವನ ಹಾಗೂ ನಂತರದ ಕ್ಷಣದ ಫೋಟೋಗಳನ್ನು ಹಂಚಿಕೊಂಡಿದ್ದು, ಹೆಣ್ಣಾಗಿ ಬದಲಾದ ನಂತರ ಅದ್ಭುತ ಸ್ತ್ರೀಯಾಗಿ ಬದಲಾದ ಅವರ ಸೌಂದರ್ಯವನ್ನು ನೋಡಿ ಅನೇಕರು ಬೆರಗಾಗಿದ್ದಾರೆ.

ಹೌದು ಅನೇಕರು ಹುಟ್ಟುತ್ತಾ ಹೆಣ್ಣಾಗಿಯೋ ಅಥವಾ ಗಂಡಾಗಿಯೋ ಹುಟ್ಟಿದರೂ ಹದಿ ಹರೆಯಕ್ಕೆ ಬರುತ್ತಿದ್ದಂತೆ ಅವರಿಗೆ ಗಂಡಾಗಿದ್ದಾರೆ ಹೆಣ್ಣಿನಂತೆ ಹೆಣ್ಣಾಗಿದ್ದರೆ ಗಂಡಿನಂತೆ ಭಾವನೆಗಳು ಬರುವುದಕ್ಕೆ ಶುರುವಾಗುತ್ತದೆ. ಗಂಡಿನ ದೇಹದಲ್ಲಿ ಹೆಣ್ಣಿನ ಮನಸ್ಥಿತಿ ಅಥವಾ ಹೆಣ್ಣಿನ ದೇಹದಲ್ಲಿ ಗಂಡಿನ ಮನಸ್ಥಿತಿಯಿಂದಾಗಿ ಅನೇಕರಿಗೆ ಮನದೊಳಗೆ ತೊಳಲಾಟಗಳು ಶುರುವಾಗುವುದಕ್ಕೆ ಶುರುವಾಗುತ್ತದೆ. ಹೀಗಾಗಿ ಅನೇಕರು ಮನೆ ಬಿಟ್ಟು ಹೋಗುತ್ತಾರೆ. ಮತ್ತೆ ಅನೇಕರು ಶಸ್ತ್ರಚಿಕಿತ್ಸೆಗೆ ಒಳಗಾಗಿ ಮನಸಾಕ್ಷಿಗೆ ತಕ್ಕಂತೆ ಬದುಕಲು ಆರಂಭಿಸುತ್ತಾರೆ. ಇಂತಹ ಸಂದರ್ಭದಲ್ಲಿ ಮನೆಯವರು ಹಾಗೂ ಸಮಾಜದ ತಿರಸ್ಕಾರಕ್ಕೆ ಅವರು ತುತ್ತಾಗುತ್ತಾರೆ. ಹೆತ್ತವರೇ ಅವರನ್ನು ಮಕ್ಕಳೆಂದು ಸ್ವೀಕರಿಸುವುದಕ್ಕೆ ಸಿದ್ಧರಿರುವುದಿಲ್ಲ, ಆದರೂ ಧೈರ್ಯ ಮಾಡಿ ಅವರು ತಮ್ಮ ಮನಸಾಕ್ಷಿಗೆ ವಿರುದ್ಧವಾಗಿ ಬದುಕಲಾಗದೇ ಶಸ್ತ್ರಚಿಕಿತ್ಸೆಯ ಮೊರೆ ಹೋಗುತ್ತಾರೆ.

ಇದನ್ನೂ ಓದಿ: ಜಾರ್ಖಂಡ್ ಏರ್ ಆಂಬುಲೆನ್ಸ್ ದುರಂತ: ಡಾಕ್ಟರ್ ಆಗಿದ್ದ ಒಬ್ಬನೇ ಒಬ್ಬ ಮಗನನ್ನೂ ಕಳೆದುಕೊಂಡು ಗೋಳಾಡಿದ ಅಪ್ಪ

ಹಾಗೆಯೇ ಇಲ್ಲಿ nakshathra_speaks ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಯುವತಿಯಾಗಿ ಬದಲಾದವರೊಬ್ಬರು ತಮ್ಮ ಮೊದಲ ಹಾಗೂ ನಂತರ ಫೋಟೋಗಳನ್ನು ಹಂಚಿಕೊಂಡಿದ್ದು, ಅವರ ಈ ಪೋಸ್ಟ್ ಈಗ ಸಾಕಷ್ಟು ವೈರಲ್ ಆಗಿದೆ. ನನಗೆ ಇಷ್ಟು ಸುಂದರವಾದ ಪುನರ್ಜನ್ಮ ನೀಡಿದ ನನ್ನ ಹಳೆಯ ರೂಪವನ್ನು ನಾನು ಗೌರವಿಸುತ್ತೇನೆ ಎಂದು ಬರೆದುಕೊಂಡು ಅವರು ತಮ್ಮ ಹಳೆಯ ಹಾಗೂ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿ ಅನೇಕರು ಶಾಕ್ ಆಗಿದ್ದಾರೆ. ನಿಮ್ಮ ವೈದ್ಯರು ಬಹಳ ಅದ್ಭುತವಾದ ಕೆಲಸ ಮಾಡಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಯಾಕೆ ಎಲ್ಲಾ ಸುಂದರವಾದ ಹೆಣ್ಣು ಮಕ್ಕಳು ಗಂಡು ಮಕ್ಕಳಾಗಿದ್ದರು ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. ಅವರು ಮೊದಲೇ ಚೆನ್ನಾಗಿದ್ದರು ಈಗ ಇನ್ನಷ್ಟು ಚೆನ್ನಾಗಿ ಕಾಣುತ್ತಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವ್ವಾ ಸೋ ಕ್ಯೂಟ್ ಲವ್ಲಿ ಆಗಿ ಕಾಣಿಸ್ತಿದ್ದಿರಿ ಅಕ್ಕ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಡ್ರಗ್ ಲಾರ್ಡ್‌ ಹತ್ಯೆಯ ಬಳಿಕ ಬೆಂಕಿಯುಂಡೆಯಾದ ಮೆಕ್ಸಿಕೋ: ಉದ್ಯೋಗಿ ರಕ್ಷಣೆಗೆ ಪ್ರತಿ ವಿಮಾನವನ್ನು ಬುಕ್ ಮಾಡಿದ ಅಮೆರಿಕ ಕಂಪನಿ



Source link

Leave a Reply

Your email address will not be published. Required fields are marked *