ನಿಧಿಯನ್ನು ಈಸಿಯಾಗಿ ಎತ್ತಿ ಮುದ್ದಾಡಿದ ಕರ್ಣ: ದಂಗಾದ ಶೂಟಿಂಗ್​ ಟೀಮ್​- ವಿಡಿಯೋ ವೈರಲ್

ನಿಧಿಯನ್ನು ಈಸಿಯಾಗಿ ಎತ್ತಿ ಮುದ್ದಾಡಿದ ಕರ್ಣ: ದಂಗಾದ ಶೂಟಿಂಗ್​ ಟೀಮ್​- ವಿಡಿಯೋ ವೈರಲ್

ನಿಧಿಯನ್ನು ಈಸಿಯಾಗಿ ಎತ್ತಿ ಮುದ್ದಾಡಿದ ಕರ್ಣ: ದಂಗಾದ ಶೂಟಿಂಗ್​ ಟೀಮ್​- ವಿಡಿಯೋ ವೈರಲ್

’ಕರ್ಣ’ ಸೀರಿಯಲ್‌ನ ಮೇಕಿಂಗ್ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ನಾಯಕ ಕಿರಣ್ ರಾಜ್ ಯಾವುದೇ ಸಹಾಯವಿಲ್ಲದೆ ನಾಯಕಿ ಭವ್ಯಾ ಗೌಡ ಅವರನ್ನು ಸಲೀಸಾಗಿ ಎತ್ತಿಕೊಳ್ಳುತ್ತಾರೆ. ಈ ದೃಶ್ಯವು ಚಿತ್ರತಂಡವನ್ನೇ ಅಚ್ಚರಿಗೊಳಿಸಿದೆ.

ಸಾಮಾನ್ಯವಾಗಿ ಶೂಟಿಂಗ್​ ಸಮಯದಲ್ಲಿ ನಾಯಕಿಯನ್ನು ನಾಯಕ ಎತ್ತುವ ಸೀನ್​ ಇದ್ದಾಗ ಅದಕ್ಕಾಗಿಯೇ ಹಲವಾರು ರೀತಿಯ ಪ್ರಾಪರ್ಟಿಗಳನ್ನು ರೆಡಿ ಮಾಡಲಾಗುತ್ತದೆ. ಖುರ್ಚಿಯ ಮೇಲೆ ನಾಯಕಿಯನ್ನು ಮಲಗಿಸಿ ಇಡಲಾಗುತ್ತದೆ. ನಾಯಕ ಆಕೆಯನ್ನು ಎತ್ತಿಕೊಂಡಂತೆ ಹಿಡಿದುಕೊಂಡಿರುತ್ತಾನೆ. ಬಳಿಕ ಕೆಳಗೆ ಇರುವ ಗಾಲಿ ಖುರ್ಚಿಗಳನ್ನು ಎಳೆಯಲಾಗುತ್ತದೆ. ಅಂತಿಮವಾಗಿ ಎಡಿಟಿಂಗ್​ನಲ್ಲಿ ಅದ್ಯಾವುದೂ ವಸ್ತುಗಳು ನಮಗೆ ಕಾಣಿಸುವುದಿಲ್ಲ. ನಾಯಕ ಸಲೀಸಾಗಿ ನಾಯಕಿಯನ್ನು ಎತ್ತುಕೊಂಡು ಹೋಗುವಂತೆ ಕಾಣಿಸುತ್ತದೆ. ಸಾಮಾನ್ಯವಾಗಿ ಇದು ಎಲ್ಲಾ ಸೀರಿಯಲ್​, ಸಿನಿಮಾಗಳಲ್ಲಿಯೂ ಮಾಡುವುದು ಮಾಮೂಲು.

ಆದರೆ ಕರ್ಣ ಸೀರಿಯಲ್​ (Karna Serial) ಶೂಟಿಂಗ್​ನ ವಿಡಿಯೋ ಒಂದು ವೈರಲ್​ ಆಗಿದೆ. bannihiremathofficial ಎನ್ನು ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ ಮಾಡಲಾಗಿದೆ. ಇದರಲ್ಲಿ ಮಾತ್ರ ನೋಡುಗರಿಗೆ ಅಚ್ಚರಿ ಆಗುವಂಥ ದೃಶ್ಯ ಕಾಣಬಹುದು.

ಅದೇನೆಂದರೆ, ಸೀರಿಯಲ್​ನಲ್ಲಿ ಕರ್ಣ ಸರ್​ಪ್ರೈಸ್​ ಆಗಿ ನಿಧಿಯನ್ನು ಎತ್ತಿಕೊಳ್ಳುವ ದೃಶ್ಯ ಬರುತ್ತದೆ. ತಾನು ಟಾಪ್​ ಬಂದಿರುವ ಕಾರಣ, ನನಗೆ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಬೇಕು ಎಂದು ನಿಧಿ ಕರ್ಣನಿಗೆ ಹೇಳಿದಾಗ, ಕರ್ಣ ಅತ್ತ ಕಡೆ ನೋಡುವಂತೆ ಹೇಳುತ್ತಾನೆ. ನಿಧಿ ಆ ಕಡೆ ನೋಡಿದಾಗ ಕರ್ಣ ಆಕೆಯನ್ನು ಎತ್ತಿಕೊಂಡು ಮುದ್ದಾಡುತ್ತಾನೆ.

ಇದರ ಮೇಕಿಂಗ್​ ವಿಡಿಯೋ ವೈರಲ್​ ಆಗಿದೆ. ಇದರಲ್ಲಿ ಕರ್ಣನ ರೋಲ್​ ಮಾಡ್ತಿರೋ ನಟ ಕಿರಣ್​ ರಾಜ್​ (Kiran Raj) ನಿಧಿ ಪಾತ್ರಧಾರಿ ಭವ್ಯಾ ಗೌಡ (Bhavya Gowda) ಅವರನ್ನು ಯಾವುದೇ ಪ್ರಾಪರ್ಟಿ ಇಲ್ಲದೇ ಸಲೀಸಾಗಿ ಎತ್ತಿಕೊಳ್ಳುವುದನ್ನು ನೋಡಬಹುದು.

ಇದನ್ನು ನೋಡಿದ ಕ್ಯಾಮೆರಾಮನ್​ಗಳು ಕೂಡ ಅಚ್ಚರಿ ಪಟ್ಟುಕೊಳ್ಳುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಅಷ್ಟಕ್ಕೂ ನಾಯಕಿಯನ್ನು ಇಷ್ಟು ಈಸಿಯಾಗಿ ಅದೂ ಹಲವಾರು ಟೇಕ್​ ಪಡೆದುಕೊಳ್ಳುವಾಗ ಸುಲಭದಲ್ಲಿ ಎತ್ತಿಕೊಳ್ಳುವುದು ಕಷ್ಟವೇ. ಆದರೆ ಆ ಸಾಹಸವನ್ನು ಕಿರಣ್​ ರಾಜ್​ ಮಾಡಿದ್ದಾರೆ.

ಇದಕ್ಕೆ ಕಮೆಂಟ್​ಗಳ ಸುರಿಮಳೆಯೇ ಬರುತ್ತಿದೆ. ಹೀಗೆ ನೀವಿಬ್ಬರೂ ಮುದ್ದಾಡುತ್ತಲೇ ಇರಿ. ನಿಮ್ಮ ಜೋಡಿ ನೋಡಲು ತುಂಬಾ ಚೆನ್ನಾಗಿದೆ ಎನ್ನುತ್ತಿದ್ದಾರೆ. ಅಷ್ಟಕ್ಕೂ ಕಿರಣ್​ ರಾಜ್​ ಮತ್ತು ಭವ್ಯಾ ರಿಯಲ್​ ಲೈಫ್​ನಲ್ಲೂ ಅವಿವಾಹಿತರಾಗಿರುವ ಕಾರಣ, ಇನ್ನು ಅಭಿಮಾನಿಗಳು ಕೇಳಬೇಕೆ? ಜೋಡಿ ಮಾಡುವುದರದಲ್ಲಿ ಅವರದ್ದು ಎತ್ತಿದ ಕೈ.

Source link

Leave a Reply

Your email address will not be published. Required fields are marked *