Deepika Das: ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚಿದ ಜನಪ್ರಿಯ ನಟಿ ದೀಪಿಕಾ ದಾಸ್ ಇಂದು ಅಂದ್ರೆ ಫೆಬ್ರುವರಿ 23ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಸರ್ಪ್ರೈಸ್ ಫೋಟೋಗಳ ಜೊತೆಗೆ ನಟಿ ತಮ್ಮ ವಯಸ್ಸನ್ನು ಸಹ ರಿವೀಲ್ ಮಾಡಿದ್ದಾರೆ.

ನಾಗಿಣಿ ಧಾರಾವಾಹಿಯಲ್ಲಿ ಅಮೃತಾ ಪಾತ್ರದ ಮೂಲಕ ಪರಿಚಿತರಾದ ನಟಿ ದೀಪಿಕಾ ದಾಸ್. ನಟಿಸಿದ ಮೊದಲ ಸೀರಿಯಲ್ ಸೂಪರ್ ಹಿಟ್. ಹಾಗಾಗಿ ಜನರು ಅಮೃತಾ ಎಂದೇ ಗುರುತಿಸುತ್ತಿದ್ದರು. ನಂತರ ಇವರಿಗೆ ಜನಪ್ರಿಯತೆ ತಂದುಕೊಟ್ಟದ್ದು ಬಿಗ್ ಬಾಸ್ ಸೀಸನ್ 7.

ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ದೀಪಿಕಾ ದಾಸ್ ಗೆ ಹೆಚ್ಚು ಜನಪ್ರಿಯತೆ ಸಿಕ್ಕಿತು. ಬಿಗ್ ಬಾಸ್ ಸ್ಟ್ರಾಂಗ್ ಸ್ಪರ್ಧಿಯಾಗಿ ದೀಪಿಕಾ ದಾಸ್ ಗುರುತಿಸಿಕೊಂಡರು. ಬಳಿಕ ಸೀಸನ್ 9ರಲ್ಲೂ ಸಹ ಭಾಗವಹಿಸಿದ್ದರು ದೀಪಿಕಾ ದಾಸ್.

ಇದೀಗ ದೀಪಿಕಾ ಇಂದು ಅಂದರೆ ಫೆಬ್ರುವರಿ 23ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂಭ್ರಮದಲ್ಲಿ ನಟಿ ಒಂದಷ್ಟು ಫೋಟೊಗಳನ್ನು ಪೋಸ್ಟ್ ಮಾಡಿದ್ದು ಅದರ ಜೊತೆಗೆ ತಮ್ಮ ವಯಸ್ಸನ್ನೂ ಸಹ ರಿವೀಲ್ ಮಾಡಿದ್ದಾರೆ.

ದೀಪಿಕಾ ದಾಸ್ ಗೆ ಇದೀಗ 30 ವರ್ಷ ತುಂಬಿದ್ದು, ದುಬೈನಲ್ಲಿ ತಮ್ಮ ಗಂಡನ ಜೊತೆಗೆ ತಮ್ಮ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಕಳೆದ ವರ್ಷ ಕೂಡ ನಟಿ ಅದ್ಧೂರಿಯಾಗಿ ಹುಟ್ಟುಹಬ್ಬ ಸೆಲೆಬ್ರೇಟ್ಮಾಡಿದ್ದರು.

ದೀಪಿಕಾ ದಾಸ್ ಸದ್ಯ ಕಿರುತೆರೆಯಿಂದ ದೂರವೇ ಉಳಿದಿದ್ದಾರೆ. ಇತ್ತೀಚೆಗೆ ನಟಿ ‘ ಪಾರು ಪಾರ್ವತಿ’ ಎನ್ನುವ ಟ್ರಾವೆಲ್ ಸಿನಿಮಾ ಒಂದರಲ್ಲಿ ನಟಿಸಿದ್ದರು. ಆದರೆ ಸಿನಿಮಾ ಅಷ್ಟಾಗಿ ಸದ್ದು ಮಾಡಿಲ್ಲ. ಈಗಂತೂ ನಟನೆಯಿಂದ ದೂರ ಉಳಿದಿದ್ದಾರೆ.

ಸದ್ಯ ದುಬೈನಲ್ಲಿ ನೆಲೆಸಿರುವ ದೀಪಿಕಾ ದಾಸ್, ದೇಶ ವಿದೇಶ ಸುತ್ತುತ್ತಾ ಎಂಜಾಯ್ ಮಾಡ್ತಿದ್ದಾರೆ. ಇದರ ಜೊತೆಗೆ ಗಂಡನಾ ಬ್ಯುಸಿನೆಸ್ ನಲ್ಲಿ ಬೆಂಬಲವಾಗಿ ನಿಂತಿದ್ದಾರೆ. ಅಲ್ಲದೇ ತಮ್ಮದೇ ಆದ ಬಟ್ಟೆಯ ಬ್ರ್ಯಾಂಡ್ ಕೂಡ ಹೊಂದಿದ್ದಾರೆ ದೀಪಿಕಾ ದಾಸ್.

Source link
Deepika Das ಹುಟ್ಟುಹಬ್ಬ… ಫೋಟೊ ಜೊತೆ ವಯಸ್ಸಿನ ಗುಟ್ಟು ರಟ್ಟು ಮಾಡಿದ ನಟಿ