ರಾಜಮೌಳಿ (ರಾಜಮೌಳಿ) ನಿರ್ದೇಶನದ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ‘ವಾರಣಾಸಿ’ ಸಿನಿಮಾ ವಿಶ್ವದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ರಾಜಮೌಳಿ ರಾಮಾಯಣದ ಕಥೆಯ ಫ್ಯಾಂಟಸಿ, ಆಕ್ಷನ್ ಥ್ರಿಲ್ಲರ್ ಕಥೆಯೊಟ್ಟಿಗೆ ಬೆಸೆದು ಅದ್ಧೂರಿಯಾಗಿ ಸಿನಿಮಾವನ್ನು ಚಿತ್ರೀಕರಿಸಿ, ಸಿನಿಮಾವನ್ನು ಭಾರತ ಮಾತ್ರವೇ ಅಲ್ಲದೆ ವಿವಿಧ ದೇಶಗಳಲ್ಲಿಯೂ ಚಿತ್ರ ಮಾಡುತ್ತಿದ್ದಾರೆ. ಸಿನಿಮಾವನ್ನು ಮಸೈಮಾರಾ ಸೇರಿದಂತೆ ಇನ್ನೂ ಕೆಲವು ಪ್ರಮುಖ ತಾಣಗಳಲ್ಲಿ ಚಿತ್ರಿಸಲಾಗಿದೆ. ಇದೀಗ ರಾಜಮೌಳಿ ಅವರು ತಮ್ಮ ತಂಡವನ್ನು ಕಡೆದುಕೊಂಡು ಯೂರೋಪಿನ ಸುಂದರ ದೇಶಕ್ಕೆ ಹೋಗಿದ್ದಾರೆ.
ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಸುಕುಮಾರ್ ಅವರ ನಡುವಿನ ಭರ್ಜರಿ ಆಕ್ಷನ್ ಸೀಕ್ವೆನ್ಸ್ ಚಿತ್ರಕ್ಕಾಗಿ ರಾಜಮೌಳಿ ಅವರು ಇದೀಗ ಜಾರ್ಜಿಯಾ ದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರನ್ನು ಬಿಟ್ಟು ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಸುಕುಮಾರ್ ಅವರು ಮಾತ್ರವೇ ಜಾರ್ಜಿಗೆ ಹೋಗಿದ್ದಾರೆ. ಜಾರ್ಜಿಯಾ ದೇಶದ ನಾಯಕ ಹಾಗೂ ವಿಲನ್ ನಡುವ ಭರ್ಜರಿ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ನಡೆಯಲಿದೆ. ಅದಕ್ಕಾಗಿ ನಟರುಗಳ ಜೊತೆಗೆ ದೊಡ್ಡ ತಾಂತ್ರಿಕ ವರ್ಗವನ್ನು ರಾಜಮೌಳಿ ಕರೆದುಕೊಂಡು ಹೋಗುತ್ತಿದ್ದಾರೆ.
ವಾರಣಾಸಿಯಲ್ಲಿ ಪ್ರಮುಖ ದೃಶ್ಯಗಳ ಚಿತ್ರೀಕರಣ ಮುಗಿಸಿರುವ ರಾಜಮೌಳಿ, ಮುಂದಿನ ಚಿತ್ರೀಕರಣಕ್ಕಾಗಿ ಜಾರ್ಜಿಯಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲಿನ ಕಡಿದಾದ ಬೆಟ್ಟಗಳು ಮತ್ತು ಸುಂದರ ಪರಿಸರದಲ್ಲಿ ಭರ್ಜರಿ ಆಕ್ಷನ್ ಸೀಕ್ವೆನ್ಸ್ಗಳನ್ನು ಚಿತ್ರೀಕರಿಸಲು ಯೋಜಿಸಲಾಗಿದೆ. ವಿಶೇಷವೆಂದರೆ, ಮಲೆಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ, ಅವರ ಮತ್ತು ಮಹೇಶ್ ನಡುವಿನ ಜಿದ್ದಾಜಿನ ದೃಶ್ಯಗಳು ಜಾರ್ಜಿಯಾದಲ್ಲಿ ಸೆರೆಯಾಗಲಿವೆ.
ಇದನ್ನೂ ಓದಿ:ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಈ ಚಿತ್ರವು ಜಾಗತಿಕ ಮಟ್ಟದ ಅಡ್ವೆಂಚರ್ ಥ್ರಿಲ್ಲರ್ ಆಗಿರುತ್ತದೆ, ಹಾಲಿವುಡ್ನ ‘ಇಂಡಿಯಾನಾ ಜೋನ್ಸ್’ ಮಾದರಿಯಲ್ಲಿ ಮೂಡಿಬರಲಿದೆ ಎಂಬ ವದಂತಿಗಳಿವೆ. ಕಾಡಿನ ಸಾಹಸಗಳು, ಗುಪ್ತ ನಿಧಿ ಮತ್ತು ಸಾಹಸಮಯ ಪಯಣ ಈ ಸಿನಿಮಾದ ಹೈಲೈಟ್ ಆಗಿರುತ್ತದೆ. ಇದಕ್ಕಾಗಿ ಮಹೇಶ್ ಬಾಬು ತಮ್ಮ ಲುಕ್ ಅನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ, ಉದ್ದನೆಯ ಕೂದಲು ಮತ್ತು ಗಡ್ಡದೊಂದಿಗೆ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ‘ಆರ್ಆರ್ಆರ್’ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತೀಯ ಸಿನಿಮಾದ ತಾಕತ್ತಿದ್ದ ರಾಜಮೌಳಿ, ಈ ಚಿತ್ರವನ್ನು ಅದ್ಧೂರಿಯಾಗಿ ತೆರೆಗೆ ತರಲು ಸಜ್ಜಾಗುತ್ತಿದ್ದಾರೆ. ಜಾರ್ಜಿಯಾದಲ್ಲಿ ನಡೆಯಲಿರುವ ಈ ಶೆಡ್ಯೂಲ್ ಚಿತ್ರದ ಅತ್ಯಂತ ಕಠಿಣ ಮತ್ತು ಪ್ರಮುಖ ಭಾಗ.
‘ವಾರಣಾಸಿ’ ಸಿನಿಮಾವು 2027ರ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಸಿನಿಮಾದ ಅರ್ಧ ಭಾಗದ ಚಿತ್ರೀಕರಣ ಮುಗಿಸಲಾಗಿದೆ. ಸಿನಿಮಾವನ್ನು ಹಾಲಿವುಡ್ ಗುಣಮಟ್ಟಕ್ಕೆ ಸರಿ ಸಮವಾಗಿ ಚಿತ್ರೀಕರಣ ಮಾಡಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ