ಧಾರವಾಡ, (ಫೆಬ್ರವರಿ 24): ತಾಳ್ಮೆ ಕಟ್ಟೆಯೊಡೆದಿದೆ. ಆಕ್ರೋಶ ಭುಗಿಲೆದ್ದಿದೆ.. ಉದ್ಯೋಗಾಕಾಂಕ್ಷಿಗಳು (ಉದ್ಯೋಗ ಆಕಾಂಕ್ಷಿಗಳು) ಕಿಚ್ಚು ಕ್ಷಣ ಕ್ಷಣಕ್ಕೂ ಕಾವೇರುತ್ತಿದೆ. ಹೀಗಾಗಿ ಧಾರವಾಡದಲ್ಲಿ (ಧಾರವಾಡ) ರೋಷಾಗ್ನಿ ಧಗಧಗ ಹೊತ್ತಿ ಉರಿಯುತ್ತಿದೆ. ಹೌದು…ವಿದ್ಯಾಕಾಶಿ ಧಾರವಾಡದಲ್ಲಿ ಉದ್ಯೋಗಕಾಂಕ್ಷಿಗಳು ಸರ್ಕಾರದ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತಿರುವಾಗ, ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಸಲ್ಲಿಸಿದ್ದಾರೆ.
ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಇಂದು (ಫೆಬ್ರವರಿ 24) ಧಾರವಾಡದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಶ್ರೀನಗರ ವೃತ್ತದಿಂದ ಜುಬ್ಲಿ ಸರ್ಕಲ್ -ವರೆಗೆ ಪ್ರತಿಭಟನಾ ರ್ಯಾಲಿಗೆ ಕರೆ ನೀಡಿದ್ರು. ಆದರೆ ಬಿಜೆಪಿ ಪ್ರತಿಭಟನೆಯನ್ನೇ ಹೈಜಾಕ್ ಮಾಡಿ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಬೀದಿಗಿಳಿದಿದ್ದು, ಬ್ಯಾರಿಕೇಡ್‌ಗಳನ್ನ ತಳ್ಳಿ ಮುನ್ನುಗ್ಗಿದ್ರು. ಈ ವೇಳೆ ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ ನೂಕಾಟ ನಡೀತು.