ಭಾರತಕ್ಕೂ ಬರ್ತಿದೆ ಲಿಮಿಟೆಡ್ ಎಡಿಷನ್ ಡುಕಾಟಿ ಬೈಕ್; ಈ ರೇಟ್ರೋ ಸುಂದರಿಯ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಾ! | Ducati Formula 73 Limited Edition Bike Launch Features Price India San

ಭಾರತಕ್ಕೂ ಬರ್ತಿದೆ ಲಿಮಿಟೆಡ್ ಎಡಿಷನ್ ಡುಕಾಟಿ ಬೈಕ್; ಈ ರೇಟ್ರೋ ಸುಂದರಿಯ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಾ! | Ducati Formula 73 Limited Edition Bike Launch Features Price India San



ಭಾರತಕ್ಕೂ ಬರ್ತಿದೆ ಲಿಮಿಟೆಡ್ ಎಡಿಷನ್ ಡುಕಾಟಿ ಬೈಕ್; ಈ ರೇಟ್ರೋ ಸುಂದರಿಯ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಾ! | Ducati Formula 73 Limited Edition Bike Launch Features Price India San

ಡುಕಾಟಿ ತನ್ನ 100ನೇ ವರ್ಷಾಚರಣೆಯ ಅಂಗವಾಗಿ, ಐತಿಹಾಸಿಕ ‘ಫಾರ್ಮುಲಾ 73’ ಬೈಕನ್ನು ಪರಿಚಯಿಸಿದೆ. 1970ರ ದಶಕದ ರೇಸಿಂಗ್ ಬೈಕ್‌ನಿಂದ ಸ್ಫೂರ್ತಿ ಪಡೆದ ಈ ಮಾದರಿಯು, ಕ್ಲಾಸಿಕ್ ವಿನ್ಯಾಸ ಮತ್ತು ಆಧುನಿಕ ತಂತ್ರಜ್ಞಾನದ ಸಮ್ಮಿಲನವಾಗಿದೆ. 

ಬೆಂಗಳೂರು (ಫೆ.24): ವಿಶ್ವವಿಖ್ಯಾತ ಬೈಕ್ ತಯಾರಿಕಾ ಸಂಸ್ಥೆ ಡುಕಾಟಿ (Ducati) ತನ್ನ 100ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿ ಕಂಪನಿಯು ತನ್ನ ಐತಿಹಾಸಿಕ ‘ಫಾರ್ಮುಲಾ 73’ (Formula 73) ಬೈಕನ್ನು ಮತ್ತೊಮ್ಮೆ ಪರಿಚಯಿಸಿದೆ. ಇದು 1970ರ ದಶಕದ ಪ್ರಸಿದ್ಧ ರೇಸಿಂಗ್ ಬೈಕ್‌ಗಳನ್ನು ನೆನಪಿಸುವಂತಿದ್ದು, ಕ್ಲಾಸಿಕ್ ಲುಕ್ ಮತ್ತು ಆಧುನಿಕ ತಂತ್ರಜ್ಞಾನದ ಅದ್ಭುತ ಸಮ್ಮಿಲನವಾಗಿದೆ.

ಈ ಬೈಕ್ 1970ರ ದಶಕದ ಐಕಾನಿಕ್ ‘750 ಸೂಪರ್ ಸ್ಪೋರ್ಟ್ ಡೆಸ್ಮೋ’ ರೇಸಿಂಗ್ ಬೈಕ್‌ನಿಂದ ಸ್ಫೂರ್ತಿ ಪಡೆದಿದ್ದು, ಇದಕ್ಕೆ ಸಿಲ್ವರ್ ಮತ್ತು ಅಕ್ವಾ-ಗ್ರೀನ್ (ತಿಳಿ ಹಸಿರು-ನೀಲಿ) ಬಣ್ಣಗಳನ್ನು ನೀಡಲಾಗಿದ್ದು, ವಿಂಟೇಜ್ ಲುಕ್ ನೀಡುತ್ತದೆ. ಇದರ ಪೆಟ್ರೋಲ್ ಟ್ಯಾಂಕ್ ಮೇಲೆ ಲಂಬವಾದ ಗೋಲ್ಡನ್ ಗೆರೆಯನ್ನು (Stripe) ನೀಡಲಾಗಿದೆ. ಹಳೆಯ ಕಾಲದ ರೇಸರ್‌ಗಳು ಟ್ಯಾಂಕ್‌ನಲ್ಲಿ ಎಷ್ಟು ಪೆಟ್ರೋಲ್ ಬಾಕಿ ಇದೆ ಎಂದು ತಿಳಿಯಲು ಈ ಗೆರೆಯನ್ನು ಬಳಸುತ್ತಿದ್ದರು. ಕೆಳಗಿರುವ ಹ್ಯಾಂಡಲ್‌ಬಾರ್‌ಗಳು ಮತ್ತು ದುಂಡಗಿನ ಲೈಟ್‌ಗಳು ಇದಕ್ಕೆ ಸ್ಪೋರ್ಟಿ ‘ಕೆಫೆ ರೇಸರ್’ ಲುಕ್ ನೀಡುತ್ತವೆ.

ಎಂಜಿನ್ ಮತ್ತು ಪವರ್

ಡುಕಾಟಿ ಈ ಬೈಕನ್ನು ಕೇವಲ ವೇಗಕ್ಕಾಗಿ ಮಾತ್ರವಲ್ಲದೆ, ರೈಡಿಂಗ್‌ನ ಸ್ಮರಣೀಯ ಅನುಭವಕ್ಕಾಗಿ ವಿನ್ಯಾಸಗೊಳಿಸಿದೆ. ಇದರಲ್ಲಿ 803 ಸಿಸಿ ಏರ್-ಕೂಲ್ಡ್ ಎಂಜಿನ್ ಬಳಸಲಾಗಿದೆ. ಇದು 73 ಹೆಚ್‌ಪಿ ಪವರ್ ಮತ್ತು 65.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಸುಗಮ ಚಾಲನೆಗಾಗಿ 6-ಸ್ಪೀಡ್ ಗೇರ್‌ಬಾಕ್ಸ್ ಮತ್ತು ಸ್ಲಿಪ್ಪರ್ ಕ್ಲಚ್ ನೀಡಲಾಗಿದೆ.

ಹಗುರ ಹಾಗೂ ಬಲಿಷ್ಠ ವಿನ್ಯಾಸ

ಹಳೆಯ ನೋಟವಿದ್ದರೂ ಇದರ ಭಾಗಗಳು ಅತ್ಯಾಧುನಿಕವಾಗಿವೆ. ಅಕ್ವಾ-ಗ್ರೀನ್ ಬಣ್ಣದ ಸ್ಟೀಲ್ ಟ್ರೆಲ್ಲಿಸ್ ಫ್ರೇಮ್ ಬೈಕಿನ ವಿಂಟೇಜ್ ಲುಕ್ ಪೂರ್ಣಗೊಳಿಸುತ್ತದೆ. ಇಂಧನ ರಹಿತವಾಗಿ ಇದರ ತೂಕ ಕೇವಲ 183 ಕೆಜಿ. ಇದರಿಂದಾಗಿ ಬೈಕ್ ಹ್ಯಾಂಡಲ್ ಮಾಡುವುದು ತುಂಬಾ ಸುಲಭ. 17 ಇಂಚಿನ ಸ್ಪೋಕ್ ಅಲ್ಯೂಮಿನಿಯಂ ವೀಲ್ಸ್ ಮತ್ತು ಪಿರೆಲ್ಲಿ (Pirelli) ಪ್ರೀಮಿಯಂ ಟೈರ್‌ಗಳನ್ನು ಅಳವಡಿಸಲಾಗಿದೆ. ಹೈ-ಸ್ಪೀಡ್‌ನಲ್ಲಿ ಸುರಕ್ಷತೆಗಾಗಿ ಬ್ರೆಂಬೊ (Brembo) ಡಿಸ್ಕ್ ಬ್ರೇಕ್‌ಗಳಿವೆ.

ಬೆಲೆ ಮತ್ತು ಲಭ್ಯತೆ

ಇದು ಲಿಮಿಟೆಡ್ ಎಡಿಷನ್ ಬೈಕ್ ಆಗಿರುವುದರಿಂದ ಎಲ್ಲರಿಗೂ ಖರೀದಿಸಲು ಸಾಧ್ಯವಿಲ್ಲ. ವಿಶ್ವದಾದ್ಯಂತ ಕೇವಲ 873 ಬೈಕ್‌ಗಳನ್ನು ಮಾತ್ರ ಉತ್ಪಾದಿಸಲಾಗುತ್ತದೆ. ಪ್ರತಿ ಬೈಕ್ ಮೇಲೂ ಒಂದು ವಿಶಿಷ್ಟ ಸಂಖ್ಯೆಯನ್ನು ನಮೂದಿಸಲಾಗುತ್ತದೆ ಮತ್ತು ಮಾಲೀಕರಿಗೆ ವಿಶೇಷ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಇದರ ಬೆಲೆ ಅಂದಾಜು 17 ಲಕ್ಷ ರೂಪಾಯಿ (£15,095) ಎಂದು ಹೇಳಲಾಗಿದೆ.

ಮುಂದಿನ ಕೆಲವೇ ತಿಂಗಳುಗಳಲ್ಲಿ ಇದು ಯುರೋಪ್ ತಲುಪಲಿದ್ದು, 2026ರ ಅಂತ್ಯದ ವೇಳೆಗೆ ಭಾರತ ಸೇರಿದಂತೆ ವಿಶ್ವದ ಇತರ ಭಾಗಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.



Source link

Leave a Reply

Your email address will not be published. Required fields are marked *