ವಿಜಯ್ ದೇವರಕೊಂಡ (ವಿಜಯ್ ದೇವರಕೊಂಡ) ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ ವಿವಾಹವಾಗುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಇದೀಗ ತಮ್ಮ ಪ್ರೀತಿಗೆ ಮದುವೆಯ ಮೊಹರು ಒತ್ತುತ್ತಿದೆ. ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಶ್ಮಿಕಾ ಮತ್ತು ವಿಜಯ್ ಫೆಬ್ರವರಿ 26 ರಂದು ವಿವಾಹವಾಗಲಿದ್ದಾರೆ. ವಿವಾಹವು ಉದಯಪುರದ ಅತ್ಯಂತ ಖಾಸಗಿ ಮತ್ತು ಐಶಾರಾಮಿ ರೆಸಾರ್ಟ್‌ನಲ್ಲಿ ನಡೆಯುತ್ತಿದೆ. ಕೆಲವು ದಿನಗಳ ಹಿಂದೆಯೇ ಈ ಜೋಡಿ ಮತ್ತು ಅವರ ಆಪ್ತರು, ಕುಟುಂಬದವರು ರೆಸಾರ್ಟ್ ತಲುಪಿದ್ದು ಮದುವೆ ಕಾರ್ಯ ಆರಂಭವಾಗಿದೆ. ಇವರ ಮದುವೆಯಲ್ಲಿ ಕೆಲವು ವಿಶೇಷತೆಗಳು ಇರಲಿ.
ರಶ್ಮಿಕಾ ಮತ್ತು ವಿಜಯ್ ಅವರ ಮದುವೆ ಹಲವು ಸಂಪ್ರದಾಯಗಳ ಮಿಶ್ರಣ ಆಗಲಿದೆ. ಇವರ ಮದುವೆ ಉತ್ತರ ಭಾರತ ಮತ್ತು ದಕ್ಷಿಣ ಭಾರತ ಸಂಪ್ರದಾಯಗಳು ಮಿಳಿತವಾಗಿರಲಿದೆ. ಉತ್ತರ ಭಾರತದ ಮದುವೆಗಳಂತೆ ಹಳದಿ, ಮೆಹಂದಿ, ಸಂಗೀತಗಳನ್ನು ಆಚರಣೆ ಮಾಡಲಾಗುತ್ತಿದೆ. ಮದುವೆಗೆ ಮುಂಚೆಯೇ ಎಲ್ಲಾ ಕುಟುಂಬಗಳನ್ನು ಒಟ್ಟಿಗೆ ಸೇರಿಸಿ ಹಲವು ಆಟಗಳನ್ನು ಸಹ ಆಡಿಸಲಾಗುತ್ತಿದೆ. ಎರಡೂ ಕುಟುಂಬದವರ ನಡುವೆ ಬೆಸುಗೆ ಹೆಚ್ಚುವಂತೆ ಮಾಡುವ ಯೋಜನೆ ಇದೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಫೆಬ್ರವರಿ 26 ರಂದು ನಡೆಯಲಿದೆ, ಈ ಮದುವೆ ಸಹ ತೆಲಂಗಾಣ ಮತ್ತು ಕೊಡವ ಸಂಸ್ಕೃತಿಯಂತೆ. ವಿಜಯ್ ದೇವರಕೊಂಡ ತೆಲಂಗಾಣದ ತೆಲಂಗಾಣ ಸಮುದಾಯಕ್ಕೆ ಸೇರಿದವರು ಪದ್ಮಸಾಲಿ ಸಮುದಾಯಕ್ಕೆ ಸೇರಿದವರು, ಅವರ ಸಮುದಾಯಕ್ಕೆ ಸೇರಿದ ಸಂಪ್ರದಾಯ ಮತ್ತು ರಶ್ಮಿಕಾ ಮಂದಣ್ಣ ಕೊಡವತಿ ಆಗಿದ್ದು, ಅವರ ಕೊಡವ ಸಮುದಾಯದ ಆಚರಣೆಗಳೆರಡನ್ನೂ ಸೇರಿಸಿ ಮದುವೆ ಮಾಡಲಾಗುತ್ತಿರುವುದು ವಿಶೇಷ. ಈ ಮದುವೆ ಸಂಪ್ರದಾಯಗಳ ಮಿಶ್ರಣ ಆಗಿರುತ್ತದೆ.
ಇದನ್ನೂ ಓದಿ:ಅವರು ರಾಶಿ, ಇವರು ವಿಜು: ರಶ್ಮಿಕಾ, ವಿಜಯ್ ದೇವರಕೊಂಡ ಪರಸ್ಪರ ಕರೆಯೋದು ಹೀಗೆ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿವಾಹವು ಭಾರಿ ಅದ್ಧೂರಿಯಾಗಿ ನಡೆಯುತ್ತಿದ್ದ ರಾಜಸ್ಥಾನದ ಉದಯಪುರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಅರಾವಳಿ ಬೆಟ್ಟಗಳಲ್ಲಿ ಈ ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆ ಸಮಾರಂಭ ನಡೆಯುತ್ತದೆ. ಈ ರೆಸಾರ್ಟ್ ಬರೋಬ್ಬರಿ 117 ಖಾಸಗಿ ವಿಲ್ಲಾಗಳು, ನದಿ-ಕೊಳ, ಖಾಸಗಿ ಹೆಲಿಪ್ಯಾಡ್ ಹೊಂದಿದೆ. ಮದುವೆ ಸಮಾರಂಭದಲ್ಲಿ ವಿಜಯ್ ದೇವರಕೊಂಡ ಅವರ ಕುಟುಂಬದವರು ಅತ್ಯಾಪ್ತ ಸಂಬಂಧಿಗಳು ಮತ್ತು ರಶ್ಮಿಕಾ ಮಂದಣ್ಣ ಅವರ ಕುಟುಂಬದವರು ಮತ್ತು ಅತ್ಯಾಪ್ತ ಸಂಬಂಧಿಗಳು ಹಾಗೂ ಕೆಲವು ಸ್ನೇಹಿತರಷ್ಟೇ ಭಾಗಿ ಆಗಿದ್ದಾರೆ. ಮಾರ್ಚ್ 04 ರಂದು ಹೈದರಾಬಾದ್ ನ ತಾಜ್ ಕೃಷ್ಣನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ಯೋಜನೆ ಮಾಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ