Headlines

ಮದುವೆಗೂ ಮುನ್ನ ಉದಯ್‌ಪುರದಲ್ಲಿ ವಾಲಿಬಾಲ್‌ ಆಡಿ ಸಂಭ್ರಮಿಸಿದ ವಿಜಯ್‌ ದೇವರಕೊಂಡ!

ಮದುವೆಗೂ ಮುನ್ನ ಉದಯ್‌ಪುರದಲ್ಲಿ ವಾಲಿಬಾಲ್‌ ಆಡಿ ಸಂಭ್ರಮಿಸಿದ ವಿಜಯ್‌ ದೇವರಕೊಂಡ!

ಮದುವೆಗೂ ಮುನ್ನ ಉದಯ್‌ಪುರದಲ್ಲಿ ವಾಲಿಬಾಲ್‌ ಆಡಿ ಸಂಭ್ರಮಿಸಿದ ವಿಜಯ್‌ ದೇವರಕೊಂಡ!
ಸೌತ್ ಸಿನಿ ಲೋಕದ ಜನಪ್ರಿಯ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹವು ಫೆಬ್ರವರಿ 26 ರಂದು ಉದಯಪುರದ ಐಷಾರಾಮಿ ಹೋಟೆಲ್‌ನಲ್ಲಿ ನಡೆಯಲಿದೆ. ‘ವಿರೋಶ್’ ಎಂದು ಖ್ಯಾತರಾದ ಈ ಜೋಡಿಯ ಮದುವೆಯು ಅತ್ಯಂತ ಖಾಸಗಿಯಾಗಿದ್ದು, ಕೇವಲ 100 ಆಪ್ತರು ಮಾತ್ರ ಭಾಗವಹಿಸುತ್ತಿದ್ದಾರೆ.
ಸೌತ್ ಸಿನಿ ಲೋಕದ ಮೋಸ್ಟ್ ಅಡ್ಮೈರ್ಡ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಮಹೋತ್ಸವವು ಇಂದಿನಿಂದ (ಫೆಬ್ರವರಿ 24) ಅಧಿಕೃತವಾಗಿ ಪ್ರಾರಂಭವಾಗಿದೆ. ಅಭಿಮಾನಿಗಳು ಪ್ರೀತಿಯಿಂದ ಕರೆದ ‘ವಿರೋಶ್’ ಹೆಸರಿನಲ್ಲೇ ಈ ಜೋಡಿ ಹಸೆಮಣೆ ಏರುತ್ತಿದೆ.

ಇಂದಿನಿಂದ ವಿವಾಹ ಪೂರ್ವ ಶಾಸ್ತ್ರಗಳು ಆರಂಭವಾಗಿದ್ದು, ಫೆಬ್ರವರಿ 26 ರಂದು ವಿಜಯ್ ಮತ್ತು ರಶ್ಮಿಕಾ ವಿವಾಹವಾಗಲಿದ್ದಾರೆ. ಉದಯಪುರದಿಂದ 25 ಕಿ.ಮೀ ದೂರದಲ್ಲಿರುವ ಆವಳಿ ಪರ್ವತ ಶ್ರೇಣಿಯ ನಡುವೆ ಇರುವ ಐಷಾರಾಮಿ ಹೋಟೆಲ್ ‘ITC ಮೆಮೆಂಟೋಸ್’ (ITC Mementos) ಈ ಅದ್ಧೂರಿ ಮದುವೆಗೆ ಸಾಕ್ಷಿಯಾಗುತ್ತಿದೆ.

ಈ ಮದುವೆಯನ್ನು ಅತ್ಯಂತ ಖಾಸಗಿಯಾಗಿ ಇರಿಸಲಾಗಿದ್ದು, ಕೇವಲ ಆಪ್ತರು ಮತ್ತು ಕುಟುಂಬದ ಸದಸ್ಯರನ್ನು ಮಾತ್ರ ಆಹ್ವಾನಿಸಲಾಗಿದೆ. ಒಟ್ಟು ಅತಿಥಿಗಳ ಸಂಖ್ಯೆ ಕೇವಲ 100 ಕ್ಕೆ ಸೀಮಿತವಾಗಿದೆ ಎಂದು ವರದಿಯಾಗಿದೆ.

ವಿಜಯ್ ದೇವರಕೊಂಡ ಅವರು ಸ್ವಿಮ್ಮಿಂಗ್ ಪೂಲ್‌ನಲ್ಲಿ ವಾಲಿಬಾಲ್ ಆಡುತ್ತಿರುವ ಫೋಟೋ ಮತ್ತು ಪೂಲ್ ಸೈಡ್‌ನಲ್ಲಿ ತೇಲುವ ಡ್ರಿಂಕ್ ಸ್ಟೇಷನ್‌ನ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ‘ರಿಲ್ಯಾಕ್ಸ್ಡ್’ ಸಂಭ್ರಮದ ಸುಳಿವು ನೀಡಿದ್ದಾರೆ.

ರಶ್ಮಿಕಾ ಅವರು ಮದುವೆಯ ಮಂಟಪದ ಒಳಗಿನ ವಿನ್ಯಾಸವನ್ನು ಹಂಚಿಕೊಂಡಿದ್ದಾರೆ. ಗ್ರೀನ್‌ ಆಫಲ್ಸ್‌, ದ್ರಾಕ್ಷಿ ಗೊಂಚಲುಗಳು ಮತ್ತು ಗುಲಾಬಿ ಲಿಲಿ ಹೂವುಗಳಿಂದ ಟೇಬಲ್ ಅನ್ನು ಅತ್ಯಂತ ನೈಸರ್ಗಿಕವಾಗಿ ಮತ್ತು ಐಷಾರಾಮಿಯಾಗಿ ಅಲಂಕರಿಸಲಾಗಿದೆ.

ಮದುವೆಯ ಅತಿಥಿಗಳಿಗಾಗಿ ವಿಶೇಷವಾಗಿ ಜಪಾನೀಸ್ ಶೈಲಿಯ (Japanese Delicacy) ಊಟವನ್ನು ಸಿದ್ಧಪಡಿಸಲಾಗಿದೆ ಎಂಬುದು ಟೇಬಲ್ ಮೇಲಿದ್ದ ಮೆನು ಕಾರ್ಡ್‌ನಿಂದ ತಿಳಿದುಬಂದಿದೆ.

ಈ ಹೋಟೆಲ್ ಇಡೀ ಬೆಟ್ಟದ ಮೇಲೆಯೇ ಹರಡಿಕೊಂಡಿದ್ದು, ಸಾರ್ವಜನಿಕರ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧವಿದೆ. ಇಲ್ಲಿ 117 ಖಾಸಗಿ ವಿಲ್ಲಾಗಳಿವೆ, ಜೊತೆಗೆ ಹೋಟೆಲ್ ಆವರಣದೊಳಗೆ ನದಿ ಮತ್ತು ಸಣ್ಣ ಸರೋವರವೂ ಇದೆ. ಗಣ್ಯರಿಗಾಗಿ ಪ್ರತ್ಯೇಕ ಹೆಲಿಪ್ಯಾಡ್ ವ್ಯವಸ್ಥೆಯೂ ಇಲ್ಲಿದೆ. ಚಿತ್ರರಂಗದ ದೊಡ್ಡ ತಾರೆಗಳಿಗೆ ಇಲ್ಲಿ ಆಹ್ವಾನವಿಲ್ಲ ಎನ್ನಲಾಗಿದ್ದು, ಕೇವಲ ತೆಲಂಗಾಣದ ಕೆಲ ರಾಜಕಾರಣಿಗಳು ಮತ್ತು ಕೆಲವು ಚಿತ್ರ ನಿರ್ದೇಶಕರು ಮಾತ್ರ ಭಾಗವಹಿಸುತ್ತಿದ್ದಾರೆ.

ಕಳೆದ ವರ್ಷ ಅಕ್ಟೋಬರ್ 3 ರಂದು ಹೈದರಾಬಾದ್‌ನಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಭಾನುವಾರ ಜಂಟಿ ಪ್ರಕಟಣೆ ನೀಡಿದ್ದ ದಂಪತಿ, "ನೀವು ನಮಗಿಂತ ಮೊದಲೇ ನಮಗೊಂದು ಹೆಸರು ಕೊಟ್ಟಿದ್ದೀರಿ, ಅದುವೇ ‘ವಿರೋಶ್’. ನಿಮ್ಮ ಪ್ರೀತಿಯ ಹಾರೈಕೆ ನಮ್ಮ ಜೊತೆಗಿರಲಿ" ಎಂದು ಮದುವೆಯನ್ನು ಖಚಿತಪಡಿಸಿದ್ದರು.

Source link

Leave a Reply

Your email address will not be published. Required fields are marked *