ಬೆಂಗಳೂರು, ಫೆಬ್ರವರಿ 24: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿಭಟನೆ ಅಂದ್ರೆ ನೆನಪಾಗೋದೇ ಫ್ರೀಡಂ ಪಾರ್ಕ್. ರಾಜಕೀಯ ಪಕ್ಷಗಳಿಂದ ಹಿಡಿದು, ಸಂಘ ಸಂಸ್ಥೆಗಳು ಕೂಡ ಇದೇ ಜಾಗದಲ್ಲಿ ಪ್ರತಿಭಟನೆ ನಡೆಸುತ್ತವೆ. ಹೀಗಾಗಿ ಯಾವಾಗ ನೋಡಿದರೂ ಫ್ರೀಡಂ ಪಾರ್ಕ್ ನಲ್ಲಿ ಒಂದಿಲ್ಲೊಂದು ಪ್ರತಿಭಟನೆ ಇದ್ದೇ ಇರುತ್ತೆ. ಆದರೆ ಸದ್ಯದ ಮಾಹಿತಿ ಪ್ರಕಾರ ಇಡೀ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡೋದಕ್ಕೆ ಇರುವ ಈ ಜಾಗವನ್ನೂ ಹಣ ಸಂಪಾದನೆಗೆ ಬಳಕೆ ಮಾಡಿಕೊಳ್ಳಲು ತಯಾರಿ ನಡೆಸಿದೆ, ಫ್ರೀಡಂ ಪಾರ್ಕ್ನ ಬಾಡಿಗೆಗೆ ಜಿಬಿಎ ಮುಂದಾಗಿದೆ.
ಜಿಬಿಎ ಅಡಿಯ 5 ನಗರ ಪಾಲಿಕೆಗಳಿಗೆ ಆದಾಯ ಕೊರತೆ ನೀಗಿಸಲು ಹಲವು ಯೋಜನೆಗಳನ್ನು ಹಾಕಿಕೊಳ್ಳಬಹುದು, ಅದರಲ್ಲಿ ಇದೂ ಒಂದು ಬಾಕಿ. ಲೆವೆಲ್ ಪಾರ್ಕಿಂಗ್ ನಿರ್ಮಾಣಕ್ಕೂ ಮೊದಲೇ ಈ ಭಾಗದ ಪ್ರತಿಭಟನೆಗೆ ಮಾತ್ರ ಸೀಮಿತ ಸೀಮಿತಗೊಳಿಸಬೇಕು ಎಂಬ ಒಪ್ಪಂದವಾಗಿತ್ತು. ಹೀಗಾಗಿ 10 ಸಾವಿರ ಮಂದಿ ಕೂರಬಹುದಾದ ಸಭಾಂಗಣವೂ ನಿರ್ಮಾಣವಾಗಿತ್ತು. ಆದರೀಗ ಈ ಜಾಗವನ್ನು ವಾಣಿಜ್ಯ ಬಳಕೆಗೆ ನೀಡಲು ಜಿಬಿಎ ಮುಂದಾಗಿರುವುದು ಪ್ರತಿಭಟನೆಕಾರರನ್ನು ಕೇರಳಿಸಿದೆ. ಉಚಿತ ಡಂ ಪಾರ್ಕ್ ಪ್ರತಿಭಟನಾಕಾರರಿಗೆ ಕುಡಿಯುವ ನೀರು, ಶೌಚಾಲಯ ಸೇರಿ ಮೂಲಸೌಕರ್ಯಗಳಿಲ್ಲ. ಆದರೆ ಈ ಹೊಸ ಸಭಾಂಗಣ ಸುಸಜ್ಜಿತವಾಗಿದೆ. ಈಗ ಇದನ್ನೂ ದೂರ ಮಾಡಲು ಹೊರಟಿರುವ ಜಿಬಿಎ ನಡೆಗೆ ವ್ಯಾಪಕ ವಿರೋಧ ಕೇಳಿಬಂದಿದೆ.
ಇದನ್ನೂ ಓದಿ: ಬೆಂಗಳೂರು ಫ್ರೀಡಂ ಪಾರ್ಕ್ ಕ್ಲೋಸ್, ಹೋರಾಟಗಾರರ ಪರದಾಟ; ಕಾರಣ ಏನು ಗೊತ್ತೇ?
ಪಾರ್ಕ್ನ ಪಾರ್ಕ್ನ ಪಾರ್ಕ್ನ ಜಾಗ ಬಾಡಿಗೆಗೆ ಉಚಿತ ಚಿಂತನೆ ನಡೆದಿದೆ. ಆದರೆ ಪ್ರತಿಭಟನೆ ಮಾಡಲು ಫ್ರೀಡಂ ಪಾರ್ಕ್ ಆವರಣದಲ್ಲಿ ಕಿರಿದಾಗಿದ್ದರೆ, ಹಲವು ಪ್ರತಿಭಟನೆಗಳ ವೇಳೆ ಸ್ಥಳಾವಕಾಶ ಕೊರತೆ ಪ್ರತಿಭಟನಾಕಾರರು ಪರದಾಟ ನಡೆಸಿದ ಉದಾಹರಣೆಗಳಿವೆ. ಹೀಗಿರುವಾಗ ಆದಾಯದ ಕೊರತೆ ನೆಪವೊಡ್ಡಿ ಪ್ರತಿಭಟನೆಗೆ ಇರುವ ಜಾಗ ಬಾಡಿಗೆಗೆ ಕೊಡಲು ಹೊರಟ ಜಿಬಿಎ ನಿರ್ಧಾರದ ವಿರುದ್ಧ ಫ್ರೀಡಂ ಪಾರ್ಕ್ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಪ್ರತಿಭಟನಾ ಸ್ಥಳವನ್ನು ವಾಣಿಜ್ಯ ಉದ್ದೇಶಕ್ಕೆ ಬಿಟ್ಟು ಕೊಡುವುದಕ್ಕೆ ನಾವು ಒಪ್ಪಲ್ಲ ಎಂದು ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ ಹೇಳಿದ್ದಾರೆ.
ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 6:26 pm, ಮಂಗಳವಾರ, 24 ಫೆಬ್ರವರಿ 26