ಅ-19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಟಾಟಾ, ಈ ವಿಶೇಷ ಕಾರು ಉಡುಗೊರೆ ವಿಶ್ವಕಪ್ ಗೆಲುವಿನ ಪರ್ಫಾಮೆನ್ಸ್‌ಗೆ ಅಲ್ಲ. ಇದು ಕಳೆದ ವರ್ಷದ ಪ್ರದರ್ಶನಕ್ಕೆ ಈಗ ಸಿಕ್ಕ ಉಡುಗೊರೆಯಾಗಿದೆ.

ವೈಭವ್ ಸೂರ್ಯವಂಶಿ ಭಾರತೀಯ ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ಇದೀಗ ವಿಶ್ವ ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ ಕೌಶಲ್ಯ, ಪ್ರತಿಭೆ ಬಗ್ಗೆ ಚರ್ಚೆ ನಡೆಯುತ್ತಿದೆ. 15ರ ಪೋರನ ಅಬ್ಬರದ ಬ್ಯಾಟಿಂಗ್‌ಗೆ ದಿಗ್ಗಜರು ಮನಸೋತಿದ್ದಾರೆ. 2026ರ ಅಂಡರ್ 19 ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ವೈಬವ್ ಸೂರ್ಯವಂಶಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಗೆಲುವು ಕೊಟ್ಟಿದ್ದರು. ಇದೀಗ ವೈಬವ್ ಸೂರ್ಯವಂಶಿಗೆ ದುಬಾರಿ ಮೌಲ್ಯದ ಕಾರು ಉಡುಗೊರೆಯಾಗಿ ಬಂದಿದೆ.

ವೈಭವ್ ಸೂರ್ಯವಂಶಿ ಅಂಡರ್ 19 ಟೂರ್ನಿಯಲ್ಲಿ ನೀಡಿದ ಪ್ರದರ್ಶನಕ್ಕೆ ಸಿಕ್ಕ ಗಿಫ್ಟ್ ಇದಲ್ಲ. ಇದು 2025ರಲ್ಲಿ ನೀಡಿದ ಪ್ರದರ್ಶನಕ್ಕೆ ಸಿಕ್ಕ ಗಿಫ್ಟ್, ಆದರೆ ಕಾರು ಉಡುಗೊರೆಯಾಗಿ ಕೈ ಸೇರುವಾಗ ವಿಳಂಬವಾಗಿದೆ ಮಾತ್ರ. ಅಷ್ಟಕ್ಕೂ ವೈಭವ್ ಸೂರ್ಯವಂಶಿ ಈ ಗಿಫ್ಟ್ ಬಂದಿರೋದು 2025ರಲ್ಲಿ ಐಪಿಎಲ್ ಟೂರ್ನಿಯಲ್ಲಿ ನೀಡಿದ ಪ್ರದರ್ಶನಕ್ಕೆ ಸಿಕ್ಕ ಉಡುಗೊರೆ.

2025ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ವೈಭವ್ ಸೂರ್ಯವಂಶಿ ಅದ್ಭುತ ಪ್ರದರ್ಶನ ನೀಡಿದ್ದರು. ಭರ್ಜರಿ ಸೆಂಚುರಿ, ಗರಿಷ್ಠ ಸ್ಟ್ರೈಕ್ ರೇಟ್ ಸೇರಿದಂತೆ ಹಲವು ದಾಖಲೆ ಬರೆದಿದ್ದರು. ಇದರ ಪರಿಣಾಮ ವೈಭವ್ ಸೂರ್ಯವಂಶಿ ಟಾಟಾ ಮೋಟಾರ್ಸ್ ಕರ್ವ್ ಕಾರು ಉಡುಗೊರೆಯಾಗಿ ಪಡೆದಿದ್ದರು. ಇದೀಗ ಟಾಟಾ ಮೋಟಾರ್ಸ್ ವೈಭವ್‌ಗೆ ಕಾರು ನೀಡಿದೆ.

ವೈಭವ್ ಸೂರ್ಯವಂಶಿ ಟಾಟಾ ಕರ್ವ್ ಕಾರು ಉಡುಗೊರೆಯಾಗಿ ಪಡೆದಿದ್ದಾರೆ. ಇದರ ಟಾಪ್ ಮಾಡೆಲ್ ಬೆಲೆ 22 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಆದರೆ ವೈಭವ್ ಸೂರ್ಯವಂಶಿ ವಯಸ್ಸು ಕೇವಲ 15. ಭಾರತದಲ್ಲಿ ಕಾರು ಸೇರಿದಂತೆ ಮೋಟಾರು ವಾಹನ ಲೈಸೆನ್ಸ್ ಪಡೆಯಲು ಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು. ಹೀಗಾಗಿ ಕಾರು ಸಿಕ್ಕರೂ ವೈಭವ್‌ಗೆ ಡ್ರೈವ್ ಮಾಡುವಂತಿಲ್ಲ.

2025ರ ಐಪಿಎಲ್ ಟೂರ್ನಿಯಲ್ಲಿ ವೈಭವ್ 35 ಎಸೆತದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬೆರೆದಿದ್ದರು. ಐಪಿಎಲ್‌ನಲ್ಲಿ ಶತಕ ಸಿಡಿಸಿದ ಅತೀ ಕಿರಿಯ, ಭಾರತೀಯನ ಅತೀ ವೇಗದ ಶತಕ ಸೇರಿದಂತೆ ಹಲವು ದಾಖಲೆ ನಿರ್ಮಾಣವಾಗಿತ್ತು. ಇದೇ ಟೂರ್ನಿಯಲ್ಲಿ ವೈಭವ್ 206.56 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದರು. ಪರಿಣಾಮ ಸ್ಟ್ರೈಕರ್ ಆಫ್ ದಿ ಟೂರ್ನಿ ಪ್ರಶಸ್ತಿ ಪಡೆದಿದ್ದರು. ಈ ಪ್ರಶಸ್ತಿಯಲ್ಲಿ ಕರ್ವ್ ಕಾರು ಪಡೆದಿದ್ದಾರೆ.

ಬಿಳಿ ಬಣ್ಣದ ಕರ್ವ್ ಕಾರನ್ನು ವೈಭವ್ ಉಡುಗೊರೆಯಾಗಿ ಪಡೆದಿದ್ದಾರೆ. ವೈಭವ್ ಸೂರ್ಯವಂಶಿ ಪೋಷಕರು ಸೇರಿದಂತೆ ಆಪ್ತರು ಈ ಸಮಾರಂಭದಲ್ಲಿ ಹಾಜರಿದ್ದರು. ವೈಭವ್ ಸೂರ್ಯವಂಶಿಗೆ ಕಾರು ಉಡುಗೊರೆ ಮಾಹಿತಿ ಸಿಕ್ಕ ಬೆನ್ನಲ್ಲೇ ಹಲವು ಅಭಿಮಾನಿಗಳು ಜಮಾಯಿಸಿದ್ದರು.

Source link
ಅ-19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಟಾಟಾ