Karna Serial: ನಿಧಿಗೆ ಸ್ವಲ್ಪನೂ ಬುದ್ಧಿ ಇಲ್ವಾ? ಜೈಲಿಗೆ ಬಂದು ಹೀಗ್ಯಾಕೆ ಮಾಡಿದ್ಲು? ಸೀರಿಯಲ್​ ಪ್ರೇಮಿಗಳು ಗರಂ

Karna Serial: ನಿಧಿಗೆ ಸ್ವಲ್ಪನೂ ಬುದ್ಧಿ ಇಲ್ವಾ? ಜೈಲಿಗೆ ಬಂದು ಹೀಗ್ಯಾಕೆ ಮಾಡಿದ್ಲು? ಸೀರಿಯಲ್​ ಪ್ರೇಮಿಗಳು ಗರಂ

Karna Serial: ನಿಧಿಗೆ ಸ್ವಲ್ಪನೂ ಬುದ್ಧಿ ಇಲ್ವಾ? ಜೈಲಿಗೆ ಬಂದು ಹೀಗ್ಯಾಕೆ ಮಾಡಿದ್ಲು? ಸೀರಿಯಲ್​ ಪ್ರೇಮಿಗಳು ಗರಂ
ಮಾಡದ ತಪ್ಪಿಗೆ ಕರ್ಣ ಜೈಲು ಸೇರಿದ್ದು, ಆತನ ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ. ಈ ವಿಷಯವನ್ನು ಪತ್ನಿ ನಿಧಿ ಜೈಲಿನಲ್ಲಿರುವ ಕರ್ಣನಿಗೆ ತಿಳಿಸಿದಾಗ ಆತ ಕುಸಿದು ಹೋಗುತ್ತಾನೆ. ಈ ಬೆಳವಣಿಗೆಯು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.
ಕರ್ಣ ಸೀರಿಯಲ್​ (Karna Serial)ನಲ್ಲಿ ಸದ್ಯ ತಾನು ಮಾಡದ ತಪ್ಪಿಗೆ ಕರ್ಣ ಜೈಲುಪಾಲಾಗಿದ್ದಾನೆ. ಡೇಟ್​ ಬಾರ್​ ಆಗಿರೋ ಮೆಡಿಸಿನ್​ ಆಸ್ಪತ್ರೆಯಲ್ಲಿ ವಿಲನ್ಸ್​ ತಂದಿಟ್ಟು ರೋಗಿಗಳ ಪ್ರಾಣಕ್ಕೆ ಕುತ್ತಾಗಿದ್ದರಿಂದ ಕರ್ಣನನ್ನು ಅರೆಸ್ಟ್​ ಮಾಡಲಾಗಿದೆ.

ಅದೇ ಇನ್ನೊಂದೆಡೆ, ಆಸ್ಪತ್ರೆಯನ್ನು ಸೀಜ್​ ಮಾಡಲಾಗಿದೆ. ಎಲ್ಲಾ ಪೇಷಂಟ್​ಗಳನ್ನು ಬೇರೆ ಕಡೆ ಶಿಫ್ಟ್​ ಮಾಡಲಾಗಿದೆ. ಅಜ್ಜಿಯ ಆರೋಗ್ಯವೂ ಹಾಳಾಗಿ ಆಸ್ಪತ್ರೆ ಸೇರಿದ್ದಾಳೆ.

ಒಮ್ಮೆ ಅಜ್ಜಿಯನ್ನು ಮಾತನಾಡಿಸುವುದಾಗಿ ಕರ್ಣ ಪೊಲೀಸ್​ ಬಳಿ ಕೇಳಿಕೊಂಡರೂ ಅದು ನಿಯಮದ ಉಲ್ಲಂಘನೆ ಆಗಿರುವ ಕಾರಣ ಫೋನ್​ ಕೊಟ್ಟಿಲ್ಲ.

ಇದೀಗ, ನಿಧಿ ಕರ್ಣನನ್ನು ನೋಡಲು ಆಸ್ಪತ್ರೆಗೆ ಬಂದಿದ್ದಾಳೆ. ಅಜ್ಜಿಯ ವಿಷಯವನ್ನು ಕರ್ಣ ಕೇಳಿದಾಗ, ಅವರು ಚೆನ್ನಾಗಿದ್ದಾರೆ ಎಂದು ಹೇಳಿದ್ದಾಳೆ ನಿಧಿ.

ಆದರೆ, ಇದೇ ವೇಳೆ ಆಸ್ಪತ್ರೆ ಸೀಜ್​ ಆಗಿದ್ದು, ಪೇಷಂಟ್​ಗಳನ್ನು ಬೇರೆ ಕಡೆ ಶಿಫ್ಟ್​ ಮಾಡಿರೋ ವಿಷಯಗಳನ್ನೆಲ್ಲಾ ಕರ್ಣನಿಗೆ ಹೇಳಿದಾಗ ಆತ ಕುಸಿದು ಹೋಗಿದ್ದಾನೆ.

ಇದನ್ನು ನೋಡಿ ಸೀರಿಯಲ್​ ಪ್ರೊಮೋ ವೀಕ್ಷಕರು ನಿಧಿಯ ಕ್ರಮಕ್ಕೆ ಗರಂ ಆಗಿದ್ದಾರೆ. ಇಂಥ ಸ್ಥಿತಿಯಲ್ಲಿ ಇದನ್ನೆಲ್ಲಾ ಕರ್ಣನಿಗೆ ನಿಧಿ ಯಾಕೆ ಹೇಳಬೇಕಿತ್ತು ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ನಿಧಿ ಕರ್ಣನನ್ನು ಕಾಪಾಡ್ತಾಳಾ ನೋಡಬೇಕಿದೆ.

Source link

Leave a Reply

Your email address will not be published. Required fields are marked *