ಬಾಗಲಕೋಟೆ, (ಫೆಬ್ರವರಿ 24): ಅಪ್ರಾಪ್ತೆ ಮೇಲೆ ಅಪರಾಧ ಎಸಗಿದ ಆರೋಪದ ಮೇಲೆ ಪೋಕ್ಸೋ ಪ್ರಕರಣದಲ್ಲಿ (ಪೋಕ್ಸೋ ಪ್ರಕರಣ) ಜೈಲು ಸೇರಿದ್ದ ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ ಮ್ಯೂಸಿಕ್ ಮೈಲಾರಿಗೆ (ಗಾಯಕ ಸಂಗೀತ ಮೈಲಾರಿ) ಜಾಮೀನು ಸಿಕ್ಕಿದೆ. ಅಪ್ರಾಪ್ತೆಯ ಮೇಲೆ ಅತ್ಯಾಚಾರ ಆರೋಪಿ ಮ್ಯೂಸಿಕ್ ಮೈಲಾರಿಗೆ ಬಾಗಲಕೋಟೆ ಕೋರ್ಟ್ ನ್ಯಾಯಾಧೀಶರಾದ ಪ್ರೀತಿ ಸಾಗರ ಜೋಷಿ ಅವರು ಕೆಲವು ಷರತ್ತುಗಳನ್ನು ವಿಧಿಸಿ ಇಂದು (ಫೆಬ್ರವರಿ 24) ಜಾಮೀನು ಆದೇಶವನ್ನು ಹೊರಡಿಸಿದ್ದಾರೆ. ಒಂದು ಲಕ್ಷ ಶ್ಯುರಿಟಿ ಬಾಂಡ್,ಪ್ರಾಶಿಕ್ಯೂಷನ್ ಮೇಲೆ ಪ್ರಭಾವ ಬೀರಬಾರದು, ಇದೇ ತರಹದ ಅಪರಾಧ ಮತ್ತೆ ಮಾಡಬಾರದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ಇದರೊಂದಿಗೆ ಕಳೆದ ಡಿಸೆಂಬರ್ನಿಂದ ಜೈಲು ಪಾಲಾಗಿದ್ದ ಮೈಲಾರಿಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ.