Headlines

ರೈಲ್ವೆ ರಕ್ಷಣೆ ತರಬೇತಿ ಕಲಿಯಲು ಬೆಂಗಳೂರಿನ ಭಾರತೀಯ ರೈಲ್ವೆ ವಿಭಾಗಕ್ಕೆ ಬಂದ ತಾಂಜೇನಿಯಾ ಸಿಬ್ಬಂದಿಗಳು | Indian Railways Trains Tanzanian Emergency Personnel In Railway Disaster Management In Bengaluru

ಬೆಂಗಳೂರಿನಲ್ಲಿರುವ ಭಾರತೀಯ ರೈಲ್ವೆ ವಿಪತ್ತು ನಿರ್ವಹಣಾ ಸಂಸ್ಥೆಯು, ತಾಂಜೇನಿಯಾದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಗೆ ರೈಲ್ವೆ ಅಪಘಾತದ ತುರ್ತು ಪರಿಸ್ಥಿತಿ ನಿರ್ವಹಣೆ ಕುರಿತು ಎರಡು ವಾರಗಳ ತರಬೇತಿ ನೀಡುತ್ತಿದೆ. ಈ ಶಿಬಿರದಲ್ಲಿ ಪ್ರಾಯೋಗಿಕ ಕೌಶಲ್ಯಗಳನ್ನು ಕಲಿಸಲಾಗುತ್ತಿದೆ.

ಬೆಂಗಳೂರು: ನಗರದಲ್ಲಿರುವ ಭಾರತೀಯ ರೈಲ್ವೆ ವಿಪತ್ತು ನಿರ್ವಹಣಾ ಸಂಸ್ಥೆಯಿಂದ (ಐಆರ್‌ಐಡಿಎಂ) ತಾಂಜೇನಿಯಾದ ಪ್ರತಿನಿಧಿಗಳಿಗೆ ರೈಲ್ವೆ ಅಪಘಾತದ ತುರ್ತು ಪರಿಸ್ಥಿತಿ ಎದುರಿಸುವ ಎರಡು ವಾರಗಳ ತರಬೇತಿ ಶಿಬಿರ ಸೋಮವಾರದಿಂದ ಆರಂಭವಾಗಿದೆ.

ರೈಲ್ವೆ ತುರ್ತು ಪರಿಸ್ಥಿತಿ ನಿರ್ವಹಣೆಯ ಕೌಶಲ್ಯ

ವಿದೇಶಾಂಗ ಸಚಿವಾಲಯದ ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಯೋಗ ಕಾರ್ಯಕ್ರಮದಡಿ ಈ ತರಬೇತಿ ನೀಡಲಾಗುತ್ತಿದೆ. ಮೊದಲ ಬ್ಯಾಚ್‌ನಲ್ಲಿ ತಾಂಜೇನಿಯಾದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ 15 ಸಿಬ್ಬಂದಿ ಪಾಲ್ಗೊಂಡಿದ್ದು, ಎರಡು ವಾರಗಳ ರೈಲ್ವೆ ತುರ್ತು ಪರಿಸ್ಥಿತಿ ನಿರ್ವಹಣೆಯ ಕೌಶಲ್ಯ ಪಡೆಯಲಿದ್ದಾರೆ.

ಪ್ರಾಯೋಗಿಕ ತರಬೇತಿ

ರೈಲ್ವೆ ಅಪಘಾತಗಳು, ವಿಶೇಷವಾಗಿ ಸೇತುವೆಗಳ ಮೇಲೆ ಅಥವಾ ನದಿ, ಸಮುದ್ರದ ಬಳಿ ಸಂಭವಿಸುವ ತುರ್ತು ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ. ಜತೆಗೆ ರೈಲ್ವೆ ಅಪಘಾತಗಳ ಸಮಯದಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ಅವರ ತಿಳಿವಳಿಕೆಯನ್ನು ಹಚ್ಚಿಸಲಾಗುತ್ತದೆ.

ತರಬೇತಿಯನ್ನು ರೈಲ್ವೆ ಮಂಡಳಿಯ (ಸುರಕ್ಷತೆ) ಮಹಾನಿರ್ದೇಶಕ ಹಿತೇಂದ್ರ ಮಲ್ಹೋತ್ರಾ ಉದ್ಘಾಟಿಸಿದರು. ನೈಋತ್ಯ ರೈಲ್ವೆಯ ಮುಖ್ಯ ಭದ್ರತಾ ಅಧಿಕಾರಿ ರಾಮಕೃಷ್ಣ, ತಾಂಝಾನಿಯಾದ ಅಬ್ರಾಮ್‌ ಜಿ. ನೆಟ್ಝಿದ್ಯೋ ಸೇರಿ ಇತರರಿದ್ದರು.

Source link

Leave a Reply

Your email address will not be published. Required fields are marked *