ಶಾರಂಗ್ ಶಕ್ತಿ ಖರೀದಿಸಿದ ಎಲ್​ಎಟಿ ಏರೋಸ್ಪೇಸ್; ಅಗ್ಗದ ವಿಮಾನ ತಯಾರಿಸುವ ಹಾದಿಯಲ್ಲಿ ಜೊಮಾಟೊ ಸಂಸ್ಥಾಪಕ

ಶಾರಂಗ್ ಶಕ್ತಿ ಖರೀದಿಸಿದ ಎಲ್​ಎಟಿ ಏರೋಸ್ಪೇಸ್; ಅಗ್ಗದ ವಿಮಾನ ತಯಾರಿಸುವ ಹಾದಿಯಲ್ಲಿ ಜೊಮಾಟೊ ಸಂಸ್ಥಾಪಕ


ನವದೆಹಲಿ, ಫೆಬ್ರುವರಿ 24: ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಮಾಲಕತ್ವದ ಮತ್ತೊಂದು ಕಂಪನಿಯಾದ ಎಲ್ ಎಟಿ ಏರೋಸ್ಪೇಸ್ ಇದೀಗ ಡಿಫೆನ್ಸ್ ಸೆಕ್ಟರ್ನ ಸ್ಟಾರ್ಟ್ಯಾಪ್ ಅನ್ನು ಖರೀದಿಸಿದೆ. ಗುರುಗ್ರಾಮದಲ್ಲಿರುವ ಶಾರಂಗ್ ಶಕ್ತಿ ಎಂಬ ಹೊಸ ಡಿಫೆನ್ಸ್ ರೋಬೋಟಿಕ್ಸ್ ಸ್ಟಾರ್ಟಪ್ ಅನ್ನು ಖರೀದಿಸಲಾಗಿದೆ. ಮುಂದಿನ ತಲೆಮಾರಿನ ನಾಗರಿಕ ವಿಮಾನಯಾನ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸುವ ದೂರಗಾಮಿ ಗುರಿ ಹೊಂದಿರುವ ಎಲ್ ಎಟಿ ಏರೋಸ್ಪೇಸ್‌ಗೆ ಇದು ಮಹತ್ವದ ಹೆಜ್ಜೆಯಾಗಿದೆ.

ಡಿಫೆನ್ಸ್ ಏವಿಯೇಷನ್‌ನಲ್ಲಿರುವ ಕಂಪನಿಗಳು ಸಿವಿಲ್ ಏವಿಯೇಷನ್‌ಗೆ ಬರುವುದು ಕಡಿಮೆ. ದೀಪಿಂದರ್ ಗೋಯಲ್ ಅವರ ಮಹತ್ವಾಕಾಂಕ್ಷೆಯ ಎಲ್ ಎಟಿ ಏರೋಸ್ಪೇಸ್ ಇಂತಹದ್ದೊಂದು ರಿಸ್ಕ್ ತೆಗೆದುಕೊಂಡಿದೆ. ಗೋಯಲ್ ಪ್ರಕಾರ, ವಿಮಾನಯಾನದ ಪ್ರಮುಖರು ಎರಡಕ್ಕೂ ಸಾಮಾನ್ಯ ತಂತ್ರಜ್ಞಾನ.

ಶಾರಂಗ್ ಶಕ್ತಿ ಕಂಪನಿ 2023ರಲ್ಲಿ ಆರಂಭವಾಗಿದೆ. ಇದು ಇನ್ನೂ ಆರಂಭದಲ್ಲಿದ್ದು, ಕೆಲವು ತಂತ್ರಜ್ಞಾನಗಳನ್ನು ಸ್ವಂತವಾಗಿ ಅಭಿವೃದ್ದಿಪಡಿಸಲಾಗಿದೆ. ಈ ಹಂತದಲ್ಲಿ ಎಲ್ ಎಟಿ ಎರೋಸ್ಪೇಸ್ ಈ ಸ್ಟಾರ್ಟಪ್ ಅನ್ನು ಖರೀದಿಸಿರುವುದು ಗಮನಾರ್ಹವಾಗಿದೆ. ಈ ತಂತ್ರಜ್ಞಾನವನ್ನು ಬಳಸಿ ಡಿಫೆನ್ಸ್ ಮತ್ತು ಸಿಲಿಲ್ ಏವಿಯೇಶನ್ ವಿಮಾನಗಳನ್ನು ತಯಾರಿಸುವ ಆಶಯವನ್ನು ಹೊಂದಿದೆ.

ದೀಪಿಂದರ್ ಗೋಯಲ್ ಅವರು ಜೊಮಾಟೊದ ಸಂಸ್ಥಾಪಕರು. ಬ್ಲಿಂಕಿಟ್ ಇತ್ಯಾದಿ ಕಂಪನಿಗಳನ್ನೂ ಖರೀದಿಸಿದ್ದಾರೆ. ಎಟರ್ನಲ್ ಅಡಿಯಲ್ಲಿ ಈ ಕಂಪನಿಗಳಿವೆ. ದೀಪಿಂದರ್ ಅವರು ಎಟರ್ನಲ್ ಸಿಐಒ ಸ್ಥಾನಕ್ಕೆ ರಾಜೀನಾಮೆ ನೀಡಿ, ಎಲ್ ಎಟಿ ಏರೋಸ್ಪೇಸ್ ಮತ್ತು ಇತರ ಪ್ರಾಜೆಕ್ಟ್‌ಗಳಲ್ಲಿ ನಿರತರಾಗಿದ್ದಾರೆ.

ಸಣ್ಣ ಗಾತ್ರದ ಎಲಿಕಲ್ ವಿಮಾನಗಳನ್ನು ನಿರ್ಮಿಸಿ, ಅಗ್ಗದ ದರಕ್ಕೆ ಪ್ರಯಾಣಾವಕಾಶ ಕಲ್ಪಿಸುವುದು ದೀಪಿಂದರ್ ಗೋಯಲ್ ಅವರಿಗಿರುವ ಮಹತ್ವಾಕಾಂಕ್ಷೆ. ಸಣ್ಣ ಪುಟ್ಟ ಪಟ್ಟಣಗಳ ನಡುವೆ ವಿಮಾನ ಹಾರಾಟ ಆರಂಭಿಸುವುದು ಅವರ ಗುರಿ. ಬಸ್ಸು, ಕ್ಯಾಬ್‌ಗಳಂತಹ ಸಾಮಾನ್ಯ ಜನರು ವಿಮಾನಗಳನ್ನು ಬಳಸಬೇಕು ಎಂಬುದು ಅವರ ಉದ್ದೇಶ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *