ತನ್ನ ಪತ್ನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ತನ್ನ ಮನೆಯಲ್ಲಿ ಇರುವುದನ್ನು ಕಂಡು 37 ವರ್ಷದ ವ್ಯಕ್ತಿಯೊಬ್ಬರು ತೀವ್ರದಿಂದ ಸ್ಥಳದಲ್ಲಿಯೇ ತಪ್ಪಿ ಬಿದ್ದಿದ್ದಾನೆ ಎಂದು ಹೇಳಲಾದ ವಿಡಿಯೋವೊಂದು ಎಕ್ಸ್ ಖಾತೆಯಲ್ಲಿ ವೈರಲ್ ಆಗಿದೆ. ಪತಿಯು ಕೆಲಸ ಮುಗಿಸಿ ಮನೆಗೆ ಮರಳಿದಾಗ ತನ್ನ 25 ವರ್ಷದ ಪತ್ನಿ ಬೇರೊಬ್ಬ ವ್ಯಕ್ತಿಯನ್ನು ಇರುವುದನ್ನು ಕಂಡಿದ್ದಾನೆ ಎಂದು ಹೇಳಲಾಗಿದೆ. ಅತಿಯಾದ ಮಾನಸಿಕ ಒತ್ತಡ ಮತ್ತು ಭಾವನಾತ್ಮಕ ನೋವಿನಿಂದ ಆತನ ಮೇಲೆ ಏರುಪೇರಾಗಿ, ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಗಂಡ ಬಿದ್ದಿರುವುದನ್ನು ಕಂಡು ಹೆಂಡತಿ ನನ್ನನ್ನು ಕ್ಷಮಿಸು ಎಂದು ಗೋಳಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಈ ಘಟನೆ ಎಲ್ಲಿ ನಡೆದಿದೆ ಎಂದು ತಿಳಿದಿಲ್ಲ. ನೋಡಿದಾಗ ಇದು ಉತ್ತರ ಭಾರತದ ಘಟನೆ ಎಂದು ತಿಳಿಯುತ್ತದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ