‘ಧುರಂಧರ’ (ಧುರಂಧರ) ಸಿನಿಮಾ 2025ರ ವರ್ಷದ ಅತಿದೊಡ್ಡ ಬ್ಲಾಕ್ ಬಸ್ಟರ್ ಎನಿಸಿಕೊಂಡಿತು. ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಈ ಸಿನಿಮಾ ಕೂಡ ಇತಿಹಾಸ ಕಂಡಿದೆ. ಇದೀಗ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ‘ಧುರಂಧರ’ ಸಿನಿಮಾ ಮತ್ತೆ ಭಾರೀ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ನಡೆದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯೊಂದರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಿತ್ರತಂಡ ಗೈರಾಗುವ ಮೂಲಕ ಎಲ್ಲರ ಗಮನ ಸೆಳೆದಿದೆ.
ಸಿನಿಮಾ ಪತ್ರಿಕೋದ್ಯಮದಲ್ಲಿ ಪ್ರಮುಖ ಮಾಧ್ಯಮ ಸಂಸ್ಥೆ ಎನಿಸಿಕೊಂಡಿರುವ ‘ಹಾಲಿವುಡ್ ರಿಪೋರ್ಟರ್ ಇಂಡಿಯಾ’ ಪ್ರಸ್ತುತ ನಡೆಯುತ್ತಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಧುರಂಧರ’ ಚಿತ್ರಕ್ಕೆ ಪ್ರಕಟಿಸಲಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಚಿತ್ರ ಮಾಡಿದ ಅದ್ಭುತ ಸಾಧನೆಗಾಗಿ ಈ ಗೌರವವನ್ನು ನೀಡಲಾಯಿತು. ಆದರೆ, ಅಚ್ಚರಿಯೆಂಬಂತೆ ಚಿತ್ರತಂಡದ ಯಾವೊಬ್ಬ ಸದಸ್ಯರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ ಮತ್ತು ಪ್ರಶಸ್ತಿಯನ್ನು ಸ್ವೀಕರಿಸಲಿಲ್ಲ!
ಚಿತ್ರತಂಡದ ಗೈರಿಗೆ ಕಾರಣವೇನು? ಚಿತ್ರತಂಡದ ಈ ನಡೆಯ ಹಿಂದೆ ಅಚ್ಚರಿಯ ಹಿನ್ನೆಲೆಯೊಂದಿದೆ. ಚಿತ್ರ ಬಿಡುಗಡೆಯ ಸಮಯದಲ್ಲಿ ‘ಹಾಲಿವುಡ್ ರಿಪೋರ್ಟರ್’ನ ಪ್ರಮುಖ ವಿಮರ್ಶಕಿ ಅನುಪಮಾ ಚೋಪ್ರಾ ಅವರು ಈ ಚಿತ್ರದ ಬಗ್ಗೆ ವಿವಾದಾತ್ಮಕ ವಿಮರ್ಶೆ ಮಾಡಿದರು. ‘ಧುರಂಧರ ಚಿತ್ರವು ಉದ್ದೇಶಪೂರ್ವಕವಾಗಿ ಪಾಕಿಸ್ತಾನ ವಿರೋಧಿ ನಿರೂಪಣೆಯನ್ನು ಹೊಂದಿದೆ’ ಎಂದು ಅವರು ಟೀಕಿಸಿದರು.
ವಿಮರ್ಶಕಿಯ ಈ ಮಾತುಗಳು ಚಿತ್ರತಂಡದ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ, ತಮ್ಮ ಸಿನಿಮಾವನ್ನ ಟೀಕಿಸಿದ ಅದೇ ಮಾಧ್ಯಮ ಸಂಸ್ಥೆ ನೀಡಿದ ಪ್ರಶಸ್ತಿಯನ್ನು ಬಹಿಷ್ಕರಿಸುವ ಮೂಲಕ ‘ಧುರಂಧರ’ ತಂಡವು ಅಂದಿನ ವಿಮರ್ಶೆಗೆ ತಕ್ಕ ತಿರುಗೇಟು ನೀಡಿದೆ. ಸಮಾರಂಭವನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುವ ಮೂಲಕ ಚಿತ್ರತಂಡವು ಮಾಧ್ಯಮ ಸಂಸ್ಥೆಗೆ ತಕ್ಕ ಪ್ರತ್ಯುತ್ತರ ನೀಡಿದ್ದು, ಇದು ಪ್ರಶಸ್ತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಧುರಂಧರ 2 Vs ಟಾಕ್ಸಿಕ್: 10 ಕೋಟಿ ಮಂದಿ ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ
‘ಧುರಂಧರ’ ಚಿತ್ರದ ಭಾರಿ ಯಶಸ್ಸಿನ ಬಳಿಕ ಸೀಕ್ವೆಲ್ ಮೇಲೆ ನಿರೀಕ್ಷೆ ಹೆಚ್ಚಿದೆ. ಮಾರ್ಚ್ 19 ರಂದು ‘ಧುರಂಧರ 2’ ಸಿನಿಮಾ ರಿಲೀಸ್ ಆಗಲಿದೆ. ಹಾಗಾದರೆ ‘ಧುರಂಧರ 2’ ಸಿನಿಮಾಗೆ ‘ಹಾಲಿವುಡ್ ರಿಪೋರ್ಟರ್ ಇಂಡಿಯಾ’ ಯಾವ ರೀತಿ ವಿಮರ್ಶೆ ನೀಡಲಿದೆ ಎಂಬ ಕುತೂಹಲ ಸಿನಿಪ್ರಿಯರಿಗೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.