ಭಾರತದ ವ್ಯಾಟ್ಸಾಪ್ ಬಳಕೆದಾರರಿಗೆ ಸಿಮ್ ಬೈಡಿಂಗ್ ರೂಲ್ಸ್, ಏನಿದು ಹೊಸ ನಿಯಮ? ಕೇಂದ್ರ ಸರ್ಕಾರದ ಡಿಜಿಟಲ್ ಸುರಕ್ಷತೆ ಹಾಗೂ ಸೈಬರ್ ವಂಚನೆ ತಡೆಗಟ್ಟಲು ಕಟ್ಟುನಿಟ್ಟಿನ ನಿಯಮ ತರುತ್ತಿದೆ.

ವ್ಯಾಟ್ಸಾಪ್ ಭಾರತದಲ್ಲಿ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್. ಇದಕ್ಕೆ ಪ್ರತಿಯಾಗಿ ಕೆಲ ಆ್ಯಪ್‌ಗಳಿದ್ದರೂ ವ್ಯಾಟ್ಸಾಪ್ ನಂಬರ್ 1 ಆ್ಯಪ್ ಆಗಿ ಹೊರಹೊಮ್ಮಿದೆ. ಭಾರತದ ಐಟಿ ನಿಯಮಗಳು ಕಠಿಣಗೊಳ್ಳುತ್ತಿದೆ. ಡಿಜಿಟಲ್ ಸುರಕ್ಷತೆ ಒದಗಿಸಲು ಕೇಂದ್ರ ಸರ್ಕಾರ ನಿಯಮ ಬಿಗಿಗೊಳಿಸುತ್ತಿದೆ. ಇದರ ಪರಿಣಾಮ ವ್ಯಾಟ್ಸಾಪ್ ಮೇಲೂ ಬೀಳಲಿದೆ. ಹೀಗಾಗಿ ವ್ಯಾಟ್ಸಾಪ್ ಇದೀಗ ಸಿಮ್ ಬೈಡಿಂಗ್ ನಿಯಮ ಜಾರಿಗೆ ತರಲು ಮುಂದಾಗಿದೆ.

ಕೇಂದ್ರ ಸರ್ಕಾರ ಸೈಬರ್ ವಂಚನೆ, ಡಿಜಿಟಲ್ ಸುರಕ್ಷತೆಯ ಭಾಗವಾಗಿ ವ್ಯಾಟ್ಸಾಪ್ ಸಿಮ್ ಬೈಡಿಂಗ್ ನಿಯಮ ಜಾರಿಗೆ ತುರುತ್ತಿದೆ. ಈ ನಿಯಮ ಜಾರಿಯಾದರೆ ಬಳಕೆದಾರರು ವ್ಯಾಟ್ಸಾಪ್ ಬಳಸುತ್ತಿರುವ ಫೋನ್‌ನಲ್ಲಿ ನಿಮ್ಮ ನೋಂದಾಯಿತ ಸಿಮ್ ಕಾರ್ಡ್ ಇರಲೇಬೇಕು. ಸದ್ಯ ವ್ಯಾಟ್ಸಾಪ್‌ಗೆ ಫೋನ್ ನಂಬರ್ ನೀಡಿ ನೋಂದಣಿ ಮಾಡಿಕೊಂಡ ಬಳಿಕ ಫೋನ್‌ನಲ್ಲಿ ಅದೇ ಸಿಮ್ ಇಲ್ಲದಿದ್ದರೂ ವ್ಯಾಟ್ಸಾಪ್ ಕಾರ್ಯನಿರ್ವಹಿಸುತ್ತದೆ. ಆದರೆ ಸಿಮ್ ಬೈಡಿಂಗ್ ನಿಯಮ ಜಾರಿಯಾದರೆ ಇದು ಸಾಧ್ಯವಿಲ್ಲ.

ಸಿಮ್ ಬೈಡಿಂಗ್ ನಿಯಮ ಜಾರಿಯಾದ ಬಳಿಕ ಫೋನ್‌ನಿಂದ ಸಿಮ್ ತೆಗೆದರೆ ನಿಮ್ಮ ವ್ಯಾಟ್ಸಾಪ್ ಕೆಲಸ ಮಾಡುವುದಿಲ್ಲ. ಹೊಸ ಸಿಮ್ ಹಾಕಿದರೂ ಹಳೇ ಸಿಮ್‌ನಲ್ಲಿರುವ ಅಥವಾ ಬೇರೆ ಸಿಮ್‌ನಲ್ಲಿ ನೋಂದಣಿಗೊಂಡಿರುವ ವ್ಯಾಟ್ಸಾಪ್ ಖಾತೆ ನಿರ್ವಹಿಸುವುದಿಲ್ಲ. ವ್ಯಾಟ್ಸಾಪ್ ಆಟೋಮ್ಯಾಟಿಕ್ ಆಗಿ ಈ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ.

ಸೈಬರ್ ಅಪರಾದ, ಸೈಬರ್ ವಂಚನೆಗಳನ್ನು ತಡೆಯಲು ಇದು ಅನಿವಾರ್ಯವಾಗಿದೆ. ಹೆಚ್ಚಿನ ಡಿಜಿಟಲ್ ಸುರಕ್ಷತೆ ಮೂಲಕ ವಂಚನೆಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದ್ದಾರೆ. ಕೇಂದ್ರ ಸರ್ಕಾರದ ನಿಯಮದ ಅನುಸಾರ ವ್ಯಾಟ್ಸಾಪ್ ಸಿಮ್ ಬೈಡಿಂಗ್ ನಿಯಮ ಜಾರಿಗೆ ತರಲಿದೆ.

ಸದ್ಯ ಸಿಮ್ ಬೈಡಿಂಗ್ ನಿಯಮ ಪರಿಶೀಲನೆ ಹಂತದಲ್ಲಿದೆ. ಶೀಘ್ರದಲ್ಲೇ ಹೊಸ ನಿಯಮ ಜಾರಿಯಾಗಲಿದೆ. ಸಕ್ರಿಯ ಸಿಮ್ ಕಾರ್ಡ್ ನಿಮ್ಮ ಫೋನ್‌ನಲ್ಲೇ ಇರುವಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ವ್ಯಾಟ್ಸಾಪ್ ಮಾತ್ರವಲ್ಲ ಇತರ ಸೇವೆಗಳು ಲಭ್ಯವಾಗುವುದಿಲ್ಲ.

Source link
ಭಾರತದ ವ್ಯಾಟ್ಸಾಪ್ ಬಳಕೆದಾರರಿಗೆ ಸಿಮ್ ಬೈಡಿಂಗ್ ರೂಲ್ಸ್, ಏನಿದು ಹೊಸ ನಿಯಮ?