ವಯಸ್ಸು 90 ಆದ್ರೂ ತರುಣರ ನಾಚಿಸುವಂತೆ ಬಿಂದಾಸ್ ಆಗಿ ಕಾರು ಡ್ರೈವ್ ಮಾಡ್ತಾರೆ ಈ ಅಜ್ಜಿ | 90 Year Old Elderly Woman Driving Car Like A Pro Video Viral

ವಯಸ್ಸು 90 ಆದ್ರೂ ತರುಣರ ನಾಚಿಸುವಂತೆ ಬಿಂದಾಸ್ ಆಗಿ ಕಾರು ಡ್ರೈವ್ ಮಾಡ್ತಾರೆ ಈ ಅಜ್ಜಿ | 90 Year Old Elderly Woman Driving Car Like A Pro Video Viral


ಜಮ್ಮು ಕಾಶ್ಮೀರದಲ್ಲಿ 90 ವರ್ಷದ ಅಜ್ಜಿಯೊಬ್ಬರು ಆತ್ಮವಿಶ್ವಾಸದಿಂದ ಕಾರು ಚಲಾಯಿಸುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಈ ದೃಶ್ಯವನ್ನು ನೋಡಿದ ವ್ಲಾಗರ್ ಒಬ್ಬರು ವಿಡಿಯೋ ಮಾಡಿ ಹಂಚಿಕೊಂಡಿದ್ದು, ಅಜ್ಜಿಯ ಜೀವನೋತ್ಸಾಹಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಬಿಂದಾಸ್ ಆಗಿ ಕಾರು ಚಲಾಯಿಸುವ ಅಜ್ಜಿ:

ಧೈರ್ಯ ಹಾಗೂ ಕಲಿಯುವ ಮನಸ್ಸಿದ್ದರೆ ಯಾವುದು ಅಸಾಧ್ಯವಲ್ಲ ಎಂಬುದಕ್ಕೆ ಈ ಘಟನೆಯೊಂದು ಸಾಕ್ಷಿಯಾಗಿದೆ. ಸಾಮಾನ್ಯವಾಗಿ ವಾಹನ ಚಾಲನೆ ಕಲಿಯುವವರೆಗೆ ಕಷ್ಟ ಕಲಿತ ನಂತರ ಬಹಳ ಸಲೀಸು ಆದರೂ ಅನೇಕ ಹದಿಹರೆಯದವರೇ ವಾಹನ ಚಾಲನೆಗೆ ಭಯ ಪಡ್ತಾರೆ ಹಾಗೆಯೇ ಕೆಲವರಿಗೆ ವಾಹನ ಚಾಲನೆಯನ್ನು ಬಹಳ ಕಷ್ಟಪಟ್ಟು ಕಲಿತರು ರಸ್ತೆಗಳಲ್ಲಿ ಓಡಿಸುವುದಕ್ಕೆ ಭಯ ಪಡುತ್ತಾರೆ. ಆದರೆ ಇಲ್ಲೊಂದು ಕಡೆ 90 ವರ್ಷದ ಅಜ್ಜಿಯೊಬ್ಬರು ಬಿಂದಾಸ್ ಆಗಿ ಕಾರು ಓಡಿಸುವ ಮೂಲಕ ವೈರಲ್ ಆಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ 90ರ ವಯಸ್ಸಿನವರೆಗೆ ಅನೇಕರು ಬದುಕುವುದೇ ಡೌಟ್, ಬದುಕಿದ್ದರು ಅನೇಕರಿಗೆ ವಾಹನ ಚಾಲನೆ ಸಾಧ್ಯವಿಲ್ಲ, ಅನೇಕರಿಗೆ ಎದ್ದು ನಡೆದಾಡುವುದಕ್ಕೇ ಯಾರದಾದರು ಸಹಾಯ ಬೇಕಾಗುತ್ತದೆ. ಕೈ ಕಾಲು ನಡುಗುತ್ತದೆ. ಊಟ ತಿಂಡಿಗೂ ಬೇರೆಯವರನ್ನು ಅವಲಂಬಿಸುವ ವಯಸ್ಸು ಅದಾಗಿರುತ್ತದೆ. ಆದರೆ ಈ 90 ವರ್ಷದ ವೃದ್ಧೆಗೆ ಬಾಯಲ್ಲಿ ಹಲ್ಲಿಲ್ಲ, ಹಾಗಂತ ಅವರ ಹುಮ್ಮಸ್ಸಿಗೇನು ಕಡಿಮೆ ಇಲ್ಲ. ಯುವ ತರುಣರಿಗೆ ಕಡಿಮೆ ಇಲ್ಲದಂತೆ ಅವರು ಬಿಂದಾಸ್ ಆಗಿ ಕಾರು ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಇವರನ್ನು ನೋಡಿ ವ್ಲಾಗರ್‌ ಒಬ್ಬರು ಶಾಕ್ ಆಗಿದ್ದು, ಅವರನ್ನು ಹಿಂಬಾಲಿಸಿಕೊಂಡು ಹೋಗಿ ವೀಡಿಯೋ ಮಾಡಿದ್ದು, ಅಜ್ಜಿಯ ವಿಡಿಯೋ ವೈರಲ್ ಆಗಿದೆ.

vishal__riderz_jk14 ಎಂಬ ಖಾತೆ ಹೊಂದಿರುವ ವಿಶಾಲ್ ಲಲೋತ್ರ ಎಂಬುವವರು ಈ ಅಜ್ಜಿಯ ವೀಡಿಯೋನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವಯಸ್ಸು ಕೇವಲ ನಂಬರ್ ಅಷ್ಟೇ ಎಂದು ಬರೆದಿದ್ದಾರೆ. ಅಂದಹಾಗೆ ಅವರಿಗೆ ಈ ಅಪರೂಪದ ದೃಶ್ಯ ನೋಡುವುದಕ್ಕೆ ಸಿಕ್ಕಿದ್ದು, ಜಮ್ಮು ಕಾಶ್ಮೀರದಲ್ಲಿ. ಇಲ್ಲಿನ ರಸ್ತೆಗಳಲ್ಲಿ ಈ ವಯಸ್ಸಾದ ಮಹಿಳೆ ತಮ್ಮ ಆಲ್ಟೋ ಕಾರನ್ನು ವೇಗವಾಗಿ ಚಲಾಯಿಸುತ್ತಾ ಸಾಗಿದ್ದಾರೆ.

ಇದನ್ನೂ ಓದಿ: ಕೇವಲ 2 ವರ್ಷದ ಅನುಭವಕ್ಕೆ ತಿಂಗಳಿಗೆ 13 ಲಕ್ಷ ವೇತನದ ವರ್ಕ್ ಫ್ರಮ್ ಹೋಮ್ ಕೆಲಸ ಗಿಟ್ಟಿಸಿದ ಉದ್ಯೋಗಿ

ಅವರ ಚಾಲನೆಯಲ್ಲಿ ಯಾವುದೇ ಅಳುಕು ಇರಲಿಲ್ಲ, ವೇಗವಾಗಿ ಆತ್ಮವಿಶ್ವಾಸದಿಂದ ಪ್ರತಿಕ್ಷಣವನ್ನು ಎಂಜಾಯ್ ಮಾಡುತ್ತಾ ಅವರು ವಾಹನ ಚಾಲನೆ ಮಾಡುತ್ತಿದ್ದು, ಆ ರಸ್ತೆಗಳು ಬಹಳ ಪರಿಚಯ ವಿರುವಂತೆ ವೇಗವಾಗಿ ಗಾಡಿ ಓಡಿಸುತ್ತಾರೆ. ಹೀಗಾಗಿ ಬ್ಲಾಗರ್ ವಿಶಾಲ್ ಅವರು ಬಹಳ ಕುತೂಹಲದಿಂದ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ. ಅಂತಿಮವಾಗಿ ಕಥುವಾದಲ್ಲಿರುವ ಅವರ ಮನೆಯನ್ನು ಬ್ಲಾಗರ್ ಪತ್ತೆ ಹಚ್ಚಿದ್ದು, ಅವರ ಜೊತೆ ಪಟ್ಟಣದಲ್ಲಿ ಒಂದು ಸಣ್ಣ ರೈಡ್ ಹೋಗಿದ್ದಾರೆ. ಮಾತುಕತೆಯ ವೇಳೆ ಅ ಮಹಿಳೆ ತನ್ನ ವಯಸ್ಸು 90ಕ್ಕಿಂತ ಹೆಚ್ಚಾಗಿದೆ ಎಂದು ಹೇಳುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ: ಟಾಪ್‌ಲೆಸ್ ಕಾರ್ ವಾಶ್ ಅಂತ ಬೋರ್ಡ್ ಹಿಡಿದ ಯುವತಿ: ಓಕೆ ಎಂದು ಬೆಸ್ತು ಬಿದ್ದ ಕಾರು ಚಾಲಕರು: ಆಗಿದ್ದೇನು?

ವೀಡಿಯೋ ನೋಡಿದ ಅನೇಕರು ಅಜ್ಜಿಯ ಈ ಜೀವನೋತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರಿಗೊಂದು ದೊಡ್ಡ ಸಲಾಂ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ ಅಜ್ಜಿ ರಾಕ್ ವ್ಲಾಗರ್ ಶಾಕ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅನೇಕರು ಲೈಸೆನ್ಸ್‌ ಇಲ್ಲದೇ ಗಾಡಿ ಚಲಾಯಿಸುತ್ತಾರೆ ಆದರೆ ಈ ಅಜ್ಜಿ ಬಾಯಲ್ಲಿರುವ ಹಲ್ಲುಗಳೆಲ್ಲಾ ಉದುರಿರುವ ಸಮಯದಲ್ಲೂ ಗಾಡಿ ಚಲಾಯಿಸುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

YouTube video player



Source link

Leave a Reply

Your email address will not be published. Required fields are marked *