ಅಮೆರಿಕದಲ್ಲಿ ಭಾರೀ ಹಿಮಪಾತ: 11,000 ವಿಮಾನಗಳು ಸ್ಥಗಿತ – 4 ಕೋಟಿ ಜನರು ಸಂಕಷ್ಟಕ್ಕೆ | Heavy Snowstorm In The United States 11000 Flights Disrupted

ಅಮೆರಿಕದ ಈಶಾನ್ಯ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತ ಸಂಭವಿಸಿದೆ. ಪರಿಣಾಮ 11,000 ವಿಮಾನಗಳ ಹಾರಾಟ ರದ್ದುಗೊಂಡಿದೆ. ಮತ್ತೊಂದೆಡೆ ಸುಮಾರು 5 ಲಕ್ಷ ಮಂದಿ ವಿದ್ಯುತ್‌ ಸಂಪರ್ಕವಿಲ್ಲದೆ ಕತ್ತಲಿನಲ್ಲಿ ದಿನ ದೂಡುವಂತಾಗಿದೆ.

ವಾಷಿಂಗ್ಟನ್‌: ಅಮೆರಿಕದ ಈಶಾನ್ಯ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತ ಸಂಭವಿಸಿದೆ. ಪರಿಣಾಮ 11,000 ವಿಮಾನಗಳ ಹಾರಾಟ ರದ್ದುಗೊಂಡಿದೆ. ಮತ್ತೊಂದೆಡೆ ಸುಮಾರು 5 ಲಕ್ಷ ಮಂದಿ ವಿದ್ಯುತ್‌ ಸಂಪರ್ಕವಿಲ್ಲದೆ ಕತ್ತಲಿನಲ್ಲಿ ದಿನ ದೂಡುವಂತಾಗಿದೆ.

ವರ್ಜಿನಿಯಾದಿಂದ ಮಸಾಶುಸೆಟ್ಸ್‌ವರೆಗಿನ ಹಲವು ಪ್ರದೇಶಗಳಲ್ಲಿ ಹಿಮಪಾತ

ವರ್ಜಿನಿಯಾದಿಂದ ಮಸಾಶುಸೆಟ್ಸ್‌ವರೆಗಿನ ಹಲವು ಪ್ರದೇಶಗಳಲ್ಲಿ ಹಿಮಪಾತವಾಗಿದ್ದು ಸುಮಾರು 4 ಕೋಟಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯಾಡಳಿತ ಸಾರ್ವಜನಿಕ ಸಾರಿಗೆ ಸೇವೆ ಸ್ಥಗಿತಗೊಳಿಸಿ, ಪ್ರಯಾಣ ನಿಷೇಧ ಹೇರಿದೆ. ಮತ್ತೊಂದೆಡೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

11,000ಕ್ಕೂ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತ

ಇನ್ನು ಫ್ಲೈಟ್‌ಅವೇರ್‌ ಅಂಕಿ ಅಂಶಗಳ ಪ್ರಕಾರ ಸೋಮವಾರ, ಮಂಗಳವಾರ ನ್ಯೂಯಾರ್ಕ್‌ನ ಪ್ರಮುಖ ಮೂರು ವಿಮಾನ ನಿಲ್ದಾಣಗಳಿಂದ 11,000ಕ್ಕೂ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ. ಹಲವು ಕಡೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಮಸಾಶುಸೆಟ್ಸ್, ನ್ಯೂಜೆರ್ಸಿ ಸೇರಿದಂತೆ ವಿವಿಧ ಕಡೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿ ವಿದ್ಯುತ್‌ ಅಭಾವದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

Source link

Leave a Reply

Your email address will not be published. Required fields are marked *