ರಶ್ಮಿಕಾ ಮಂದಣ್ಣ ಮದುವೆ: ಬಿಕ್ಕಿ ಬಿಕ್ಕಿ ಅಳ್ತಾ ಹೀಗಂದ್ರಾ ರಕ್ಷಿತ್‌ ಶೆಟ್ಟಿ ತಾಯಿ? | What Rakshit Shetty Mother Told About Rashmika Mandanna Marriage Bni

ರಶ್ಮಿಕಾ ಮಂದಣ್ಣ ಮದುವೆ: ಬಿಕ್ಕಿ ಬಿಕ್ಕಿ ಅಳ್ತಾ ಹೀಗಂದ್ರಾ ರಕ್ಷಿತ್‌ ಶೆಟ್ಟಿ ತಾಯಿ? | What Rakshit Shetty Mother Told About Rashmika Mandanna Marriage Bni



ರಶ್ಮಿಕಾ ಮಂದಣ್ಣ ಮದುವೆ: ಬಿಕ್ಕಿ ಬಿಕ್ಕಿ ಅಳ್ತಾ ಹೀಗಂದ್ರಾ ರಕ್ಷಿತ್‌ ಶೆಟ್ಟಿ ತಾಯಿ? | What Rakshit Shetty Mother Told About Rashmika Mandanna Marriage Bni

ರಶ್ಮಿಕಾ ಮಂದಣ್ಣ- ರಕ್ಷಿತ್‌ ಶೆಟ್ಟಿ ಎಂಗೇಜ್‌ಮೆಂಟ್‌ ಆಗಿದ್ದು, ನಂತರ ಅದು ಮುರಿದು ಬಿದ್ದಿದ್ದು ಕನ್ನಡಿಗರೆಲ್ಲರಿಗೂ ಗೊತ್ತೇ ಇದೆ. ಇದೀಗ ರಶ್ಮಿಕಾ- ವಿಜಯ್‌ ದೇವರಕೊಂಡ ಮದುವೆ ಸಂದರ್ಭದಲ್ಲಿ, ರಕ್ಷಿತ್‌ ಈ ಹಿಂದೆ ನೀಡಿದ್ದ ಪ್ರಬುದ್ಧ ಸ್ಪಷ್ಟೀಕರಣ ಕೂಡ ಜನರ ಗಮನ ಸೆಳೀತಾ ಇದೆ.  

ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಕಡೆಗೂ ತಮ್ಮ ಮದುವೆ ಸುದ್ದಿ ನಿಕ್ಕಿ ಮಾಡಿದ್ದಾರೆ. ʼವಿರೋಶ್‌ʼ ಮದುವೆ ಉದಯಪುರದ ಐಟಿಸಿ ಮೆಮೆಂಟೋ ಹೋಟೇಲ್‌ನಲ್ಲಿ ನಡೀತಿದೆ. ಈಗಾಗಲೇ ನಟಿ ರಶ್ಮಿಕಾ- ನಟ ವಿಜಯ ದೇವರಕೊಂಡ ವಿವಾಹ ಶಾಸ್ತ್ರಗಳು ಆರಂಭವಾಗಿವೆ. ಇಂದು ಸಂಜೆ ಮೆಹಂದಿ ಶಾಸ್ತ್ರ, ನಾಳೆ ಹಳದಿ ಶಾಸ್ತ್ರ ನಡೆದರೇ, ನಾಡಿದ್ದು ಗುರುವಾರ ಸಪ್ತಪದಿ, ತಾಳಿ ಕಟ್ಟುವ ಕಾರ್ಯ ನಡೆಯಲಿದೆ. ನಟಿ ರಶ್ಮಿಕಾ ವಿವಾಹಕ್ಕೆ ಇನ್ನು ಒಂದೇ ದಿನ ಬಾಕಿ ಇದೆ.

ರಶ್ಮಿಕಾ ಮಂದಣ್ಣ- ರಕ್ಷಿತ್‌ ಶೆಟ್ಟಿ ಎಂಗೇಜ್‌ಮೆಂಟ್‌ ಆಗಿದ್ದು, ನಂತರ ಅದು ಮುರಿದು ಬಿದ್ದಿದ್ದು ಕನ್ನಡಿಗರೆಲ್ಲರಿಗೂ ಗೊತ್ತೇ ಇದೆ. ಸಾಕಷ್ಟು ಕನ್ನಡಿಗರು ಇದಕ್ಕಾಗಿಯೇ ರಶ್ಮಿಕಾ ಮೇಲೆ ಸಿಟ್ಟನ್ನೂ ಇಟ್ಟುಕೊಂಡಿದ್ದಾರೆ. ಅದಿರಲಿ. ಈ ನಡುವೆ ಇದೊಂದು ಸುದ್ದಿ ಸೋಶಿಯಲ್‌ ಮೀಡಿಯಾಗಳಲ್ಲಿ ಹರಿದಾಡ್ತಾ ಇದೆ. “ನನ್ನ ಮುದ್ದು ಮಗನ ಕನಸನ್ನು ಕಿತ್ತುಕೊಂಡ ಅವಳ ಜೀವನ ಹೇಗೆ ಹಾಳಾಗುವುದು ನೋಡಿ. ಹೆತ್ತ ತಾಯಿ ಕಣ್ಣೀರ ಶಾಪ ಯಾರನ್ನೂ ಬಿಡಲ್ಲ. ಎಂಗೇಜ್‌ಮೆಂಟ್‌ ಆಗುವ ಮೊದಲೇ ನನಗೆ ಇಷ್ಟ ಇಲ್ಲ ಎಂದಿದ್ದರೆ ನನ್ನ ಮಗನ ಮರ್ಯಾದೆ ಉಳಿಯೋದು. ಅವಳು ಬೆಳೀಬೇಕು ಅಂತ ನನ್ನ ಮಗನ ಜೀವನ ಹಾಳು ಮಾಡಿದ್ಲು. ಕರ್ಮ ಬಿಡಲ್ಲ ನೋಡ್ತಿರಿ. ಹೇಗೆ ಆಡಿಸುತ್ತೆ ಅಟ” ಎಂದು ರಕ್ಷಿತ್‌ ಶೆಟ್ಟಿ ಅಳುತ್ತಾ ಕಣ್ಣೀರಿಟ್ಟರು ಎಂದು ಕೆಲವು ಮೀಮ್‌ಗಳು, ಕೆಲವು ನ್ಯೂಸ್‌ ಪೇಜ್‌ಗಳಲ್ಲಿ ಓಡಾಡ್ತಾ ಇವೆ.

ಆದರೆ ಇದು ನಿಜವಲ್ಲ. ರಕ್ಷಿತ್‌ ತಾಯಿ ಹೀಗೆ ಹೇಳಿಲ್ಲ. ಎಂಗೇಜ್‌ಮೆಂಟ್‌ ಮುರಿದುಬಿದ್ದಾಗಲೇ ಪ್ರಬುದ್ಧವಾಗಿ ಆ ಸನ್ನಿವೇಶವನ್ನು ನಿಭಾಯಿಸಿದ ಫ್ಯಾಮಿಲಿ ಅವರದು. ಸ್ವತಃ ರಕ್ಷಿತ್‌ ಶೆಟ್ಟಿಯೇ ಅ ಸಂದರ್ಭದಲ್ಲಿ ಸಾಕಷ್ಟು ಉದ್ದದ ಸಮಜಾಯಿಷಿಯನ್ನು ಸೋಶಿಯಲ್‌ ಮೀಡಿಯಾದಲ್ಲಿ ಕೊಟ್ಟಿದ್ದರು. ಅದು ಹೀಗಿತ್ತು:

ಪ್ರಬುದ್ಧತೆ ಮೆರೆದ ರಕ್ಷಿತ್‌ ಶೆಟ್ಟಿ

“ಗೌರವಾನ್ವಿತರೇ, ನಾನು ಇತರ ವಿಷಯಗಳ ಮೇಲೆ ಗಮನ ಹರಿಸಲು ಸಾಮಾಜಿಕ ಮಾಧ್ಯಮದಿಂದ ಹೊರಗುಳಿಯುತ್ತೇನೆ ಎಂದು ಘೋಷಿಸಿದ್ದೆ. ಆದರೆ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಲು ನಾನು ಹಿಂತಿರುಗಬೇಕಾಗಿದೆ. ಏಕೆಂದರೆ ಕಳೆದ ಎರಡು ದಿನಗಳಿಂದ ಅದು ಒಬ್ಬ ವ್ಯಕ್ತಿಯು ಪ್ರೀತಿಸಿದ ಮತ್ತು ಬದುಕಿದ ಎಲ್ಲವನ್ನೂ ಅಕ್ಷರಶಃ ಕಸಿದುಕೊಳ್ಳುತ್ತಿದೆ! ರಶ್ಮಿಕಾ ಬಗ್ಗೆ ನೀವೆಲ್ಲರೂ ಅಭಿಪ್ರಾಯಗಳನ್ನು ರೂಪಿಸಿಕೊಂಡಿದ್ದೀರಿ. ನಾನು ನಿಮ್ಮಲ್ಲಿ ಯಾರನ್ನೂ ದೂಷಿಸುವುದಿಲ್ಲ. ಏಕೆಂದರೆ ಅದು ಹಾಗೆ ಚಿತ್ರಿಸಲ್ಪಟ್ಟಿದೆ. ನಾವು ನೋಡುವುದನ್ನು ಮತ್ತು ಹೇಳುವುದನ್ನು ನಾವೆಲ್ಲರೂ ನಂಬುತ್ತೇವೆ. ಆದರೆ ಅದು ನಿಜವಾಗಬೇಕಾಗಿಲ್ಲ. ಹೆಚ್ಚಿನ ಸಮಯ ನಾವು ಬೇರೆ ದೃಷ್ಟಿಕೋನದಿಂದ ಯೋಚಿಸದೆಯೇ ಒಂದು ತೀರ್ಮಾನಕ್ಕೆ ಬರುತ್ತೇವೆ. ನಾನು ರಶ್ಮಿಕಾಳನ್ನು ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ತಿಳಿದಿದ್ದೇನೆ ಮತ್ತು ನಾನು ಅವಳನ್ನು ನಿಮ್ಮೆಲ್ಲರಿಗಿಂತಲೂ ಚೆನ್ನಾಗಿ ತಿಳಿದಿದ್ದೇನೆ. ಇಲ್ಲಿ ಹಲವು ಅಂಶಗಳಿವೆ. ದಯವಿಟ್ಟು ಅವಳನ್ನು ಜಡ್ಜ್‌ ಮಾಡುವುದನ್ನು ನಿಲ್ಲಿಸಿ. ದಯವಿಟ್ಟು ಅವಳನ್ನು ಶಾಂತಿಯಿಂದ ಇರಲು ಬಿಡಿ. ಎಲ್ಲವೂ ಶೀಘ್ರದಲ್ಲೇ ಒಂದು ತೀರ್ಮಾನಕ್ಕೆ ಬರುತ್ತದೆ ಮತ್ತು ನೀವೆಲ್ಲರೂ ವಾಸ್ತವವನ್ನು ತಿಳಿದುಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ. ದಯವಿಟ್ಟು ಯಾವುದೇ ಮಾಧ್ಯಮ ಸುದ್ದಿಗಳನ್ನು ನಂಬಬೇಡಿ. ಅವರಲ್ಲಿ ಯಾರಿಗೂ ನನ್ನಿಂದ ಅಥವಾ ರಶ್ಮಿಕಾ ಅವರಿಂದ ನೇರವಾಗಿ ಮಾಹಿತಿ ನೀಡಿಲ್ಲ. ಅನೇಕರು ತಮ್ಮದೇ ಆದ ಸುದ್ದಿಗಳನ್ನು ಸೃಷ್ಟಿಸುತ್ತಿದ್ದಾರೆ. ಊಹೆಗಳು ವಾಸ್ತವವಲ್ಲ. ಈ ಸಂದೇಶವನ್ನು ಎಲ್ಲರಿಗೂ ತಲುಪಿಸಲು ಈ ಪುಟವನ್ನು ಕೆಲವು ದಿನಗಳವರೆಗೆ ಲೈವ್ ಆಗಿ ಇರಿಸಲಾಗಿದೆ. ನಿಜವಾಗಿಯೂ ಅಗತ್ಯವಿದ್ದಾಗ ನಾನು ಹಿಂತಿರುಗುತ್ತೇನೆ ಮತ್ತು ನಾನು ಸಾಮಾಜಿಕ ಮಾಧ್ಯಮವನ್ನು ಬಿಡುವುದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಸಾಮಾಜಿಕ ಮಾಧ್ಯಮವು ವ್ಯಸನಕಾರಿಯಾಗುತ್ತಿರುವುದರಿಂದ ನಾನು ಕೆಲಸದ ಮೇಲೆ ಮಾತ್ರ ಗಮನ ಹರಿಸಲು ಬಯಸುತ್ತೇನೆ.”

ರಶ್ಮಿಕಾ ಮಂದಣ್ಣ ಅವರ ತಾಯಿ ಕೂಡ ಆ ಸಂದರ್ಭದಲ್ಲಿ “ಈ ಘಟನೆಯಿಂದ ನಮಗೆ ಆಘಾತವಾಗಿದೆ. ಚೇತರಿಸಿಕೊಳ್ಳಲು ನಮಗೆ ಸ್ವಲ್ಪ ಸಮಯ ಬೇಕು. ಇಬ್ಬರೂ ಪ್ರಬುದ್ಧರು, ಅವರ ನಿರ್ಣಯ ಅವರು ತೆಗೆದುಕೊಳ್ಳುತ್ತಾರೆ” ಎಂದಿದ್ದರು. ಸದ್ಯ ರಶ್ಮಿಕಾ ಮದುವೆಗೆ ಶೆಟ್ಟಿ ಟೀಮ್‌ನ ಯಾರೂ ಇನ್ನೂ ಶುಭಾಶಯ ಹೇಳಿಲ್ಲ. ಬಹುಶಃ ಇಷ್ಟರಲ್ಲೇ ಹೇಳಬಹುದು ಬಿಡಿ.

ಫೆಬ್ರವರಿ 26ರಂದು ಉದಯಪುರದಿಂದ ಸುಮಾರು 25 ಕಿಲೋ ಮೀಟರ್‌ ದೂರದಲ್ಲಿರೋ ಐಟಿಸಿ ಅನ್ನೋ ಹೋಟೆಲ್‌ನಲ್ಲಿ ರಶ್ಮಿಕಾ ಮದುವೆ. ಲಕ್ಸುರಿ ಹೋಟೆಲ್‌ ಅದಾಗಿದ್ದು, ಮದುವೆಗೆ ಕೌಂಟ್‌ಡೌನ್‌ ಶುರುವಾಗಿದೆ. ಈಗಾಗ್ಲೇ ಮೆಹಂದಿ ಶಾಸ್ತ್ರ ಶುರು ಆಗಿದೆ.. ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕುಟುಂಬಸ್ಥರು, ಆಪ್ತರು ಹೋಟೆಲ್‌ಗೆ ಆಗಮಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಮದುವೆಗೆ ಕೇವಲ 100 ಜನರಿಗೆ ಮಾತ್ರ ಆಹ್ವಾನ ನೀಡಲಾಗಿದೆಯಂತೆ. ಅದ್ರಲ್ಲಿ 50 ಜನ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಕುಟುಂಬಸ್ಥರು. ಉಳಿದ 50 ಮಂದಿ ರಶ್ಮಿಕಾ ಮತ್ತು ವಿಜಯ್‌ಗೆ ಆಪ್ತರಾಗಿರೋ ಸಿನಿಮಾ ಇಂಡಸ್ಟ್ರಿಯವ್ರು ಅಂತ ಹೇಳಲಾಗ್ತಿದೆ.



Source link

Leave a Reply

Your email address will not be published. Required fields are marked *