Headlines

ವಿಜಯ್ ಮತ್ತು ರಶ್ಮಿಕಾ ಮದುವೆಯ ಆಗಮಿಸುತ್ತಿರುವ ಅತಿಥಿಗಳು: ಪಟ್ಟಿ ಇಲ್ಲಿದೆ

ವಿಜಯ್ ಮತ್ತು ರಶ್ಮಿಕಾ ಮದುವೆಯ ಆಗಮಿಸುತ್ತಿರುವ ಅತಿಥಿಗಳು: ಪಟ್ಟಿ ಇಲ್ಲಿದೆ


ರಶ್ಮಿಕಾ ಮಂದಣ್ಣ (ರಶ್ಮಿಕಾ ಮಂದಣ್ಣ) ಮತ್ತು ವಿಜಯ್ ದೇವರಕೊಂಡ ಮದುವೆ ಆಗುತ್ತಿದೆ. ರಾಜಸ್ಥಾನದ ಉದಯಪುರದ ಸಮೀಪದಲ್ಲಿರುವ ಐಶಾರಾಮಿ ರೆಸಾರ್ಟ್‌ನಲ್ಲಿ ಇವರಿಬ್ಬರ ಮದುವೆ ನಡೆಯುತ್ತಿದೆ. ಒಂದು ವಾರದಿಂದಲೂ ಮದುವೆ ಶಾಸ್ತ್ರಗಳು, ಕಾರ್ಯಕ್ರಮಗಳು ಪ್ರಾರಂಭವಾಗಿದ್ದು, ಇಂದು (ಫೆಬ್ರವರಿ 25) ಮತ್ತು ನಾಳೆ (ಫೆಬ್ರವರಿ 26) ಹಳದಿ, ಮೆಹಂದಿ ಮತ್ತು ಮಾಂಗಲ್ಯಧಾರಣೆಯಂಥಹ ಪ್ರಮುಖ ಕಾರ್ಯಗಳು ನಡೆಯಲಿವೆ. ಈ ಕಾರ್ಯಕ್ರಮಗಳಿಗೆ ಅತಿಥಿಗಳು ಒಬ್ಬೊಬ್ಬರಾಗಿ ಆಗಮಿಸುತ್ತಿದ್ದಾರೆ. ಮದುವೆಗೆ ಅತ್ಯಂತ ಕಡಿಮೆ ಮಂದಿಯನ್ನು ರಶ್ಮಿಕಾ ಮತ್ತು ವಿಜಯ್ ಆಹ್ವಾನಿಸಿದ್ದು ಪಟ್ಟಿ ಇಲ್ಲಿದೆ ನೋಡಿ…

ರಶ್ಮಿಕಾ ಮತ್ತು ವಿಜಯ್ ಅವರ ಕುಟುಂಬದ ಸದಸ್ಯರು, ಅತ್ಯಾಪ್ತ ಸಂಬಂಧಿಗಳು ಕಳೆದ ಒಂದು ವಾರದಿಂದಲೂ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಇನ್ನೂ ಕೆಲವು ಅತ್ಯಾಪ್ತ ಗೆಳೆಯ-ಗೆಳರನ್ನಷ್ಟೇ ಮದುವೆಗೆ ಆಹ್ವಾನಿಸಿದ್ದಾರೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ. ಕೆಲವು ಗೆಳೆಯರು, ಚಿತ್ರರಂಗದ ಕೆಲವು ಪ್ರಮುಖರು ಉದಯಪುರ ತಲುಪಿದ್ದು ಮದುವೆಯಲ್ಲಿ ಭಾಗಿ ಸಹ ಆಗಿದ್ದಾರೆ. ಅಂಥಹವರ ಪಟ್ಟಿ ಇಲ್ಲಿದೆ ನೋಡಿ.

ತರುಣ್ ಭಾಸ್ಕರ್ ಮತ್ತು ಇಶಾ ರೆಬ್ಬಾ ಅವರು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮದುವೆಯಲ್ಲಿ ಭಾಗಿ ಆಗಿದ್ದಾರೆ. ತರುಣ್ ಭಾಸ್ಕರ್, ವಿಜಯ್ ದೇವರಕೊಂಡ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ‘ಪೆಳ್ಳಿ ಚೂಪುಲು’ ಸಿನಿಮಾದ ನಿರ್ದೇಶಕ. ವಿಜಯ್ ಅವರಿಗೆ ನಾಯಕನಾಗಿ ಅವಕಾಶ ಕೊಟ್ಟ ಮೊದಲ ನಿರ್ದೇಶಕ. ಇಶಾ ರೆಬ್ಬಾ, ವಿಜಯ್ ದೇವರಕೊಂಡ ಪೋಷಕ ಪಾತ್ರಧಾರಿಯಾಗಿ ನಟಿಸಿದ್ದ ‘ಲೈಫ್ ಈಸ್ ಬ್ಯೂಟಿಫುಲ್’ ಸಿನಿಮಾದ ನಾಯಕಿ ಆಗಿದ್ದರು. ತರುಣ್ ಹಾಗೂ ನಟಿ ಇಶಾ ರೆಬ್ಬ ನಡುವೆ ಆಪ್ತ ಸಂಬಂಧವಿದೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆಗೆ ತೆರಳಿದ ಆಶಿಕಾ ರಂಗನಾಥ್

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರ ಇಬ್ಬರಿಗೂ ಆಪ್ತವಾಗಿರುವ ಸ್ಟೈಲಿಸ್ಟ್ ಶ್ರಾವ್ಯ ವರ್ಮಾ ಅವರ ಮದುವೆಯಲ್ಲಿ ಭಾಗಿ ಆಗಿದ್ದರು. ಶ್ರಾವ್ಯಾ ಅವರು ಚಿತ್ರರಂಗದ ಬಲು ಬೇಡಿಕೆಯ ಸ್ಟೈಲಿಸ್ಟ್ ಆಗಿದ್ದಾರೆ. ಕನ್ನಡದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಆಶಿಕಾ ರಂಗನಾಥ್ ಸಹ ರಶ್ಮಿಕಾ-ವಿಜಯ್ ಮದುವೆಯಲ್ಲಿ ಭಾಗಿ ಆಗಿದ್ದಾರೆ. ಆಶಿಕಾ ರಂಗನಾಥ್ ಅವರು ರಶ್ಮಿಕಾರ ಆಪ್ತ ಗೆಳತಿಯಲ್ಲಿ ಒಬ್ಬರು ಎನ್ನುತ್ತಿದ್ದಾರೆ.

ರಶ್ಮಿಕಾರ ಈ ಹಿಂದಿನ ಸಿನಿಮಾ ‘ದಿ ಗರ್ಲ್‌ಫ್ರೆಂಡ್’ ನಿರ್ದೇಶನ ಮಾಡಿರುವ ನಿರ್ದೇಶಕ ರಾಹುಲ್ ರವೀಂದ್ರನ್ ಅವರು ಸಹ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ‘ದಿ ಗರ್ಲ್‌ಫ್ರೆಂಡ್’ ನಿರ್ದೇಶನದ ವೇಳೆ ರಶ್ಮಿಕಾ ಹಾಗೂ ರಾಹುಲ್ ನಡುವೆ ಒಳ್ಳೆಯ ಗೆಳೆತನ ಏರ್ಪಟ್ಟಿದೆ. ಈ ಬಗ್ಗೆ ರಶ್ಮಿಕಾ ಹೇಳಿಕೊಂಡಿದ್ದರು. ಅದೇ ಕಾರಣಕ್ಕೆ ಇದೀಗ ಅವರು ಮದುವೆಗೆ ಆಹ್ವಾನಿಸಲ್ಪಟ್ಟಿದ್ದು, ಮದುವೆಗೆ ಹಾಜರಿ ಹಾಕಿದ್ದಾರೆ.

ಇವರಷ್ಟೇ ಅಲ್ಲದೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಹಾಗೂ ಇನ್ನೂ ಕೆಲವು ಸಿನಿಮಾಗಳ ಸೆಲೆಬ್ರಿಟಿಗಳು ವಿಜಯ್-ರಶ್ಮಿಕಾ ಮದುವೆಯಲ್ಲಿ ಭಾಗವಹಿಸಲಿದ್ದಾರೆ. ಇನ್ನು ವಿಜಯ್ ಅವರ ಕೆಲವು ಕಾಲೇಜು ದಿನಗಳ ಗೆಳೆಯರು ಮತ್ತು ರಶ್ಮಿಕಾ ಅವರ ಕೆಲವು ಅತ್ಯಾಪ್ತ ಗೆಳತಿಯರು ಸಹ ಮದುವೆಯಲ್ಲಿ ಭಾಗಿ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *