ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದ ಉತ್ತರ ಕರ್ನಾಟಕದ ಖ್ಯಾತ ಗಾಯಕ ಮ್ಯೂಸಿಕ್ ಮೈಲಾರಿ ಅಲಿಯಾಸ್ ಮೈಲಾರಪ್ಪ ಮಡಿವಾಳಗೆ ಬಾಗಲಕೋಟೆ ಜಿಲ್ಲಾ ವಿಶೇಷ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಚಾರ್ಜ್ಶೀಟ್ ಸಲ್ಲಿಕೆಯ ನಂತರ, 1 ಲಕ್ಷ ಶ್ಯೂರಿಟಿ ಬಾಂಡ್ ಪಡೆದು ನ್ಯಾಯಾಲಯ ಈ ಆದೇಶ ನೀಡಿದೆ.
ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಉತ್ತರ ಕರ್ನಾಟಕ ಭಾಗದ ಗಾಯಕ ಮ್ಯೂಸಿಕ್ ಮೈಲಾರಿ ಖ್ಯಾತಿಯ ಮೈಲಾರಪ್ಪ ಮಡಿವಾಳರ ಜಾಮೀನು ಲಭ್ಯವಾಗಿದೆ. ಜನಪದ ಹಾಡುಗಳ ಮೂಲಕ ಖ್ಯಾತಿ ಪಡೆದುಕೊಂಡಿದ್ದ ಮೈಲಾರಿ ವಿರುದ್ಧ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾ*ಚಾರದ ಆರೋಪ ಕೇಳಿ ಬಂದಿತ್ತು.

ಈ ಪ್ರಕರಣ ಸಂಬಂಧ ಡಿಸೆಂಬರ್ 14 ರಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯಿಂದ ದೂರು ದಾಖಲಾಗಿತ್ತು. ಮ್ಯೂಸಿಕ್ ಮೈಲಾರಿ ಸೇರಿದಂತೆ 7 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಡಿ. 15 ರಂದು ಮಹಾಲಿಂಗಪುರ ಠಾಣೆಗೆ ಪ್ರಕರಣ ವರ್ಗಾವಣೆಯಾಗಿತ್ತು. ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಮ್ಯೂಸಿಕ್ ಮೈಲಾರಿಯನ್ನು ಪೊಲೀಸರು ಡಿಸೆಂಬರ್ 17ರಂದು ಬಂಧಿಸಿದ್ದರು.

ಸದ್ಯ ಪೊಲೀಸರು ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ. ಚಾರ್ಜ್ಶೀಟ್ ಸಲ್ಲಿಕೆ ಬಳಿಕ ಆರೋಪಿ ಮೈಲಾರಿಗೆ ಬಾಗಲಕೋಟೆ ಜಿಲ್ಲಾ ವಿಶೇಷ ನ್ಯಾಯಾಲಯ 1 ಲಕ್ಷ ಶ್ಯೂರಿಟಿ ಬಾಂಡ್ ಪಡೆದು, ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ. ಇಂದು ಅಥವಾ ನಾಳೆ ಮೈಲಾರಿ ಜೈಲಿನಿಂದ ಹೊರಗೆ ಬರುವ ಸಾಧ್ಯತೆಗಳಿವೆ.

ಅಕ್ಟೋಬರ್ 24, 2025 ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಜಾಗನೂರು ಗ್ರಾಮದಲ್ಲಿ ಹನುಮಂತ ದೇವರ ಓಕುಳಿ ಕಾರ್ಯಕ್ರಮದ ಪ್ರಯುಕ್ತ ಆರ್ಕೆಸ್ಟ್ರಾ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮ್ಯೂಸಿಕ್ ಮೈಲಾರಿಯನ್ನು ಆಹ್ವಾನಿಸಲಾಗಿತ್ತು.

ಇದನ್ನೂ ಓದಿ: ದರ್ಶನ್- ರೇಣುಕಾಸ್ವಾಮಿ ಕೇಸ್: ಪೊಲೀಸರ ವಿರುದ್ಧವೇ ಸುಳ್ಳು ಸಾಕ್ಷ್ಯ ಸೃಷ್ಟಿಸಿರುವ ಆರೋಪ

ಇದೇ ಆರ್ಕೆಸ್ಟ್ರಾದಲ್ಲಿ ನೃತ್ಯ ಮಾಡಲು ಬಂದಿದ್ದ ಬೆಳಗಾವಿ ಮೂಲದ ಅಪ್ರಾಪ್ತ ಬಾಲಕಿಯೂ ಆಗಮಿಸಿದ್ದಳು. ಈ ವೇಳೆ ಮಹಾಲಿಂಗಪುರ ಹೊರವಲಯದ ಲಾಡ್ಜ್ ಒಂದರಲ್ಲಿ ಬಾಲಕಿಯ ಮೇಲೆ ದೌರ್ಜನ್ಯ ಎಸಗಿ, ಕೃತ್ಯದ ವಿಡಿಯೋ ಕೂಡ ಮಾಡಿಕೊಳ್ಳಲಾಗಿತ್ತು ಎಂಬ ಗಂಭೀರ ಆರೋಪ ಮೈಲಾರಿ ಮೇಲಿದೆ.

ಇದನ್ನೂ ಓದಿ: ಲಾಡ್-ಜಕ್ಕಪ್ಪನವರ ಜಟಾಪಟಿ: 120 ಎಕರೆ ಭೂಮಿ ಹುಡುಕಾಟದಲ್ಲಿ ಹೈರಾಣದ್ರು ಅಧಿಕಾರಿಗಳು

Source link
ಪೋಕ್ಸೋ ಕೇಸ್ನಲ್ಲಿ ಅರೆಸ್ಟ್ ಆಗಿದ್ದ ಗಾಯಕ ಮ್ಯೂಸಿಕ್ ಮೈಲಾರಿಗೆ ಷರತ್ತುಬದ್ಧ ಜಾಮೀನು