ಸದ್ಯಕ್ಕೆ ಸಂಜು ಸ್ಯಾಮ್ಸನ್ ಬೇಡ; ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಇರ್ಫಾನ್ ಪಠಾಣ್ ಆರಿಸಿದ ಭಾರತದ ಪ್ಲೇಯಿಂಗ್ XI ಹೀಗಿದೆ

ಸದ್ಯಕ್ಕೆ ಸಂಜು ಸ್ಯಾಮ್ಸನ್ ಬೇಡ; ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಇರ್ಫಾನ್ ಪಠಾಣ್ ಆರಿಸಿದ ಭಾರತದ ಪ್ಲೇಯಿಂಗ್ XI ಹೀಗಿದೆ

ಸದ್ಯಕ್ಕೆ ಸಂಜು ಸ್ಯಾಮ್ಸನ್ ಬೇಡ; ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಇರ್ಫಾನ್ ಪಠಾಣ್ ಆರಿಸಿದ ಭಾರತದ ಪ್ಲೇಯಿಂಗ್ XI ಹೀಗಿದೆ

ಟಿ20 ವಿಶ್ವಕಪ್ ಸೂಪರ್ 8 ಹಂತದಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ಸೆಣಸಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಬದಲಾವಣೆ ಖಚಿತ. ತಿಲಕ್ ಮತ್ತು ಅಭಿಷೇಕ್ ಫಾರ್ಮ್‌ನಲ್ಲಿ ಇಲ್ಲ. ಯಾರನ್ನು ಕೈಬಿಡುತ್ತಾರೆ ಎನ್ನುವ ಕುತೂಹಲವಿದೆ.  ಈ ನಡುವೆ ಇರ್ಫಾನ್ ಪಠಾಣ್ ತಮ್ಮ ಆಯ್ಕೆಯ ಪ್ಲೇಯಿಂಗ್ XI ಪ್ರಕಟಿಸಿದ್ದಾರೆ.

ಜಿಂಬಾಬ್ವೆ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಸಲಹೆ ನೀಡಿದ್ದಾರೆ.

ಸೂರ್ಯನ ದಾಖಲೆ

ಭಾರತದ ಪರ ಟಿ20ಯಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿರುವ ಸೂರ್ಯ, 32 ಪಂದ್ಯಗಳಿಂದ 32ರ ಸರಾಸರಿ ಹಾಗೂ 158.53ರ ಸ್ಟ್ರೈಕ್ ರೇಟ್‌ನಲ್ಲಿ 864 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಆರು ಅರ್ಧಶತಕಗಳು ಸೇರಿವೆ.

ಭಾರತದ ಅಗ್ರ ಮೂವರು ಬ್ಯಾಟರ್‌ಗಳು ಎಡಗೈ ಆಟಗಾರರಾಗಿರುವುದರಿಂದ ಬ್ಯಾಟಿಂಗ್ ಲೈನ್-ಅಪ್‌ನಲ್ಲಿ ಬದಲಾವಣೆ ಅಗತ್ಯವಿದೆ ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಸೂರ್ಯಕುಮಾರ್ ಯಾದವ್ ಮೂರನೇ ಕ್ರಮಾಂಕದಲ್ಲಿ ಮತ್ತು ಅವರ ನಂತರ ತಿಲಕ್ ವರ್ಮಾ ಕಣಕ್ಕಿಳಿದರೆ ಈ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.

ಸೂರ್ಯ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ ಉತ್ತಮ. ಸತತವಾಗಿ ಮೂವರು ಎಡಗೈ ಆಟಗಾರರು ಬರುವುದನ್ನು ತಪ್ಪಿಸಬಹುದು ಎಂದು ಪಠಾಣ್ ಹೇಳಿದ್ದಾರೆ. ಸದ್ಯ ಈಗ ಇಶಾನ್ ಕಿಶನ್, ಅಭಿಷೇಕ್ ಶರ್ಮಾ ಎಡಗೈ ಆರಂಭಿಕರಾಗಿದ್ದು, ತಿಲಕ್ ವರ್ಮಾ ಮೂರನೇ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್ ಆಗಿ ಕಣಕ್ಕಿಳಿಯುತ್ತಿದ್ದಾರೆ.

ಬ್ಯಾಟಿಂಗ್‌ನಲ್ಲಿ ಕೆಳ ಕ್ರಮಾಂಕಕ್ಕೆ ಬಲ ತುಂಬುವ ಸಾಮರ್ಥ್ಯವೂ ಅಕ್ಷರ್‌ಗೆ ಇದೆ ಎಂದು ಪಠಾಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸೂಪರ್ 8ರ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಕ್ಷರ್ ಆಡಿರಲಿಲ್ಲ. ಅಕ್ಷರ್ ಬದಲಿಗೆ ವಾಷಿಂಗ್ಟನ್ ಸುಂದರ್‌ಗೆ ಮಣೆ ಹಾಕಲಾಗಿತ್ತು.

ತಂಡದಲ್ಲಿ ಅಕ್ಷರ್ ಪಟೇಲ್ ಇರಬೇಕು ಎಂದು ಪಠಾಣ್ ಒತ್ತಿ ಹೇಳಿದ್ದಾರೆ. ಎಡಗೈ ಬ್ಯಾಟರ್‌ಗಳ ವಿರುದ್ಧ ಉತ್ತಮವಾಗಿ ಬೌಲ್ ಮಾಡುವ ಸಾಮರ್ಥ್ಯವಿರುವ ಅನುಭವಿ ಆಟಗಾರ ಅಕ್ಷರ್ ಪಟೇಲ್ ಎಂದು ಪಠಾಣ್ ಹೇಳಿದ್ದಾರೆ.

ಕುಲ್ದೀಪ್ ಅವರನ್ನು ವಾಪಸ್ ಕರೆತರಬೇಕು ಎಂದೂ ಪಠಾಣ್ ಕಿವಿಮಾತು ಹೇಳಿದ್ದಾರೆ. ‘ವೆಸ್ಟ್ ಇಂಡೀಸ್ ವಿರುದ್ಧದ ದೊಡ್ಡ ಪಂದ್ಯಕ್ಕೂ ಮುನ್ನ ಜಿಂಬಾಬ್ವೆ ವಿರುದ್ಧ ಕುಲ್ದೀಪ್‌ಗೆ ಅವಕಾಶ ನೀಡುವುದು ಉತ್ತಮ’ ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.
’ತಂಡದ ಮ್ಯಾನೇಜ್‌ಮೆಂಟ್ ಸಂಜು ಅವರನ್ನು ತೆಗೆದುಕೊಳ್ಳುವ ಬಗ್ಗೆಯೂ ಯೋಚಿಸುತ್ತಿರಬಹುದು. ಆದರೆ ತಂಡದಲ್ಲಿ ಹೆಚ್ಚು ಪ್ರಯೋಗಗಳು ಬೇಡ. ಪ್ಲೇಯಿಂಗ್ XIನಲ್ಲಿ ಅಕ್ಷರ್ ಪಟೇಲ್ ಅವರನ್ನು ಸೇರಿಸಿಕೊಳ್ಳುವ ಒಂದು ಬದಲಾವಣೆ ಸದ್ಯಕ್ಕೆ ಸಾಕು’ ಎಂದು ಪಠಾಣ್ ಸ್ಪಷ್ಟಪಡಿಸಿದ್ದಾರೆ.ಸೂಪರ್ 8ರ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿದ್ದರಿಂದ ಭಾರತ ಈಗ ತೀವ್ರ ಒತ್ತಡದಲ್ಲಿದೆ. ಸೋಮವಾರ ವೆಸ್ಟ್ ಇಂಡೀಸ್ ತಂಡ ಜಿಂಬಾಬ್ವೆಯನ್ನು ಸೋಲಿಸಿದ್ದರಿಂದ ಭಾರತದ ಸೆಮಿಫೈನಲ್ ಆಸೆ ಮತ್ತಷ್ಟು ಕಠಿಣವಾಗಿದೆ.

Source link

Leave a Reply

Your email address will not be published. Required fields are marked *