ಟೀಮ್ ಇಂಡಿಯಾ ಪಾಲಿಗೆ ಯಾರು ಗೆಲ್ಲಬೇಕು? ಯಾರು ಸೋಲಬೇಕು?

ಟೀಮ್ ಇಂಡಿಯಾ ಪಾಲಿಗೆ ಯಾರು ಗೆಲ್ಲಬೇಕು? ಯಾರು ಸೋಲಬೇಕು?


T20 ವಿಶ್ವ ಕಪ್ 2026: T20 ನಿಂದ ಟೀಮ್ ಇಂಡಿಯಾದ ಸ್ಥಿತಿ ಪ್ರಸ್ತುತ ನಿರ್ಣಾಯಕ ಹಂತದಲ್ಲಿದೆ. ಸೂಪರ್ 8 ಮೊದಲ ವಿನ್ಯಾಸ ಸೋತ ನಂತರ, ಸೆಮಿಫೈನಲ್‌ಗೇರಲು ಭಾರತಕ್ಕೆ ಮುಂದಿನ ಪಂದ್ಯಗಳು ಅತ್ಯಂತ ಮುಖ್ಯವಾದವು. ಅದರಂತೆ ಝಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಗೆಲ್ಲಲೇಬೇಕು. ಈ ಗೆಲುವುಗಳ ಭಾರತ ತಂಡ ನೇರವಾಗಿ ಸೆಮಿಫೈನಲ್‌ಗೇರುತ್ತೆ ಎಂದೆನ್ನಿಸುತ್ತದೆ.

ಏಕೆಂದರೆ ಸೆಮಿಫೈನಲ್ ರೇಸ್‌ನಲ್ಲಿ ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಜಂಬಾಬ್ವೆ ತಂಡಗಳಿವೆ. ಹೀಗಾಗಿ ಈ ಮೂರು ತಂಡಗಳ ಮುಂದಿನ ಪಂದ್ಯಗಳು ನಿರ್ಣಾಯಕ. ಅದರಲ್ಲಿ ನೆಟ್ ರನ್ ರೇಟ್‌ನಲ್ಲಿ ಹಿಂದೆ ಉಳಿದಿರುವ ಟೀಮ್ ಇಂಡಿಯಾಗೆ ಎದುರಾಳಿ ತಂಡಗಳ ಫಲಿತಾಂಶಗಳು ಇಲ್ಲಿ ಮುಖ್ಯವಾಗುತ್ತವೆ. ಹಾಗಿದ್ರೆ ಟೀಮ್ ಇಂಡಿಯಾ ಪಾಲಿಗೆ ಯಾರು ಗೆಲ್ಲಬೇಕು? ಯಾರು ಸೋಲಬೇಕು ಎಂದು ನೋಡುವುದಾದರೆ…

  • ಝಿಂಬಾಬ್ವೆ ತಂಡವು ಮುಂದಿನ ಪಂದ್ಯಗಳಲ್ಲಿ ಸೋಲುವುದನ್ನು ಟೀಮ್ ಇಂಡಿಯಾ ಎದುರು ನೋಡಬೇಕು.
  • ವೆಸ್ಟ್ ಇಂಡೀಸ್ ತಂಡ ಸೌತ್ ಆಫ್ರಿಕಾ ವಿರುದ್ಧ ಸೋತರೆ ಟೀಮ್ ಇಂಡಿಯಾ ಹಾದಿ ಸುಗಮ.
  • ಸೌತ್ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ಹಾಗೂ ಜಂಬಾಬ್ವೆ ವಿರುದ್ಧ ಗೆಲ್ಲಬೇಕು.

ಅಂದರೆ ಇಲ್ಲಿ ಸೌತ್ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ ವಿರುದ್ಧ ಗೆದ್ದರೆ ಭಾರತ ತಂಡಕ್ಕೆ ನೆಟ್ ರನ್ ರೇಟ್ ಪರಿಗಣನೆಗೆ ಬರುವುದಿಲ್ಲ. ಏಕೆಂದರೆ ಮುಂದಿನ ಎರಡು ಮ್ಯಾಚ್ಗಳ ಗೆಲುವು ಸೌತ್ ಆಫ್ರಿಕಾ ತಂಡವು 6 ಅಂಕಗಳೊಂದಿಗೆ ಸೆಮಿಫೈನಲ್ ಗೆರಲಿದೆ.

ಇತ್ತ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಹಾಗೂ ಜಂಬಾಬ್ವೆ ವಿರುದ್ಧ ಗೆದ್ದರೆ ಒಟ್ಟು 4 ಅಂಕಗಳನ್ನು ಪಡೆಯಲಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ಅಲಂಕರಿಸಿ ಸೆಮಿಫೈನಲ್‌ಗೇರಬಹುದು.

ಒಂದು ವೇಳೆ ವೆಸ್ಟ್ ಇಂಡೀಸ್ ತಂಡವು ಸೌತ್ ಆಫ್ರಿಕಾ ವಿರುದ್ಧ ಗೆದ್ದರೆ ಭಾರತ ತಂಡವು ಜಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಭಾರೀ ಅಂತರದಿಂದ ಗೆಲುವು ಸಾಧಿಸಬೇಕು. ಏಕೆಂದರೆ ವಿಂಡೀಸ್ ವಿರುದ್ಧ ಸೋತು ಸೌತ್ ಆಫ್ರಿಕಾ ತಂಡ ಝಿಂಬಾಬ್ವೆ ವಿರುದ್ಧ ಗೆದ್ದರೆ 4 ಅಂಕಗಳನ್ನು ಪಡೆಯಲಿದೆ.

ಇದರಿಂದ ಸೆಮಿಫೈನಲ್ ಗೇರಲು ನೆಟ್ ರನ್ ರೇಟ್ ಪರಿಗಣನೆಗೆ ಬರಲಿದೆ. ಹೀಗಾಗಿ ಸೌತ್ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನಡುವಣ ಆಫ್ರಿಕಾ ಪಡೆ ಗೆಲ್ಲುವುದನ್ನು ಟೀಮ್ ಇಂಡಿಯಾ ಎದುರು ನೋಡಲಿದೆ.

ಇನ್ನು ಸೌತ್ ಆಫ್ರಿಕಾ ತಂಡ ವೆ ಇಂಡೀಸ್ ಹಾಗೂ ಝಂಬಾಬ್ವೆ ವಿರುದ್ಧ ಸೋತರೂ ಕೂಡ ಟೀಮ್ ಇಂಡಿಯಾದ ಸೆಮಿಫೈನಲ್ ಹಾದಿ ಸುಗಮ ಪಂದ್ಯ.

ಇದನ್ನೂ ಓದಿ: ಪಾಕಿಸ್ತಾನ ತಂಡಕ್ಕೆ ಸೆಮಿಫೈನಲ್ ಗೇರಲು ಇದೇ ಚಾನ್ಸ್..!

ಇಲ್ಲದಿದ್ದರೆ ಇಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಭಾರೀ ಅಂತರದಿಂದ ಗೆಲ್ಲುವ ಮೂಲಕ ಮಾತ್ರ ಭಾರತ ತಂಡಕ್ಕೆ ಸೆಮಿಫೈನಲ್ ಗೇರಲು ಅವಕಾಶ ಸಿಗಲಿದೆ. ಹೀಗಾಗಿಯೇ ಭಾರತ ತಂಡಕ್ಕೆ ತನ್ನ ಪಂದ್ಯಗಳಲ್ಲದೇ ಎದುರಾಳಿ ಮ್ಯಾಚ್ ಕೂಡ ನಿರ್ಣಾಯಕ. ಈ ನಿರ್ಣಾಯಕ ಪಂದ್ಯಗಳ ಫಲಿತಾಂಶಗಳ ಮೂಲಕ ಟೀಮ್ ಇಂಡಿಯಾ ಸೆಮಿಫೈನಲ್ ಗೇರುತ್ತಾ ಕಾದು ನೋಡಬೇಕಾಗಿದೆ.



Source link

Leave a Reply

Your email address will not be published. Required fields are marked *