Headlines

ತಾಂತ್ರಿಕ ದೋಷದಿಂದಾಗಿ ಅಂಡಮಾನ್ ಸಮುದ್ರದಲ್ಲಿ ಪತನಗೊಂಡ ಏಳು ಜನರಿದ್ದ ಹೆಲಿಕಾಪ್ಟರ್ ಪತನ | Pawan Hans Helicopter Carrying Seven People Crashes Into Sea Due To Technical Fault Mrq

ತಾಂತ್ರಿಕ ದೋಷದಿಂದಾಗಿ ಅಂಡಮಾನ್ ಸಮುದ್ರದಲ್ಲಿ ಪತನಗೊಂಡ ಏಳು ಜನರಿದ್ದ ಹೆಲಿಕಾಪ್ಟರ್ ಪತನ | Pawan Hans Helicopter Carrying Seven People Crashes Into Sea Due To Technical Fault Mrq



ತಾಂತ್ರಿಕ ದೋಷದಿಂದಾಗಿ ಅಂಡಮಾನ್ ಸಮುದ್ರದಲ್ಲಿ ಪತನಗೊಂಡ ಏಳು ಜನರಿದ್ದ ಹೆಲಿಕಾಪ್ಟರ್ ಪತನ | Pawan Hans Helicopter Carrying Seven People Crashes Into Sea Due To Technical Fault Mrq

ಅಂಡಮಾನ್‌ನಲ್ಲಿ ಪವನ್ ಹ್ಯಾನ್ಸ್‌ಗೆ ಸೇರಿದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದಾಗಿ ಸಮುದ್ರದಲ್ಲಿ ಪತನಗೊಂಡಿದೆ. ಪೈಲಟ್‌ನ ಸಮಯಪ್ರಜ್ಞೆಯಿಂದಾಗಿ ಹೆಲಿಕಾಪ್ಟರ್ ಅನ್ನು ಸುರಕ್ಷಿತವಾಗಿ ಸಮುದ್ರದಲ್ಲಿ ಇಳಿಸಲಾಗಿದ್ದು, ಇಬ್ಬರು ಸಿಬ್ಬಂದಿ ಸೇರಿದಂತೆ ಒಟ್ಟು ಏಳು ಪ್ರಯಾಣಿಕರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ.

ಅಂಡಮಾನ್: ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್‌ನಲ್ಲಿ ಹೆಲಿಕಾಪ್ಟರ್ ಸಮುದ್ರದಲ್ಲಿ ಪತನಗೊಂಡಿದೆ. ಪೈಲಟ್ ಸೇರಿದಂತೆ ಒಟ್ಟು ಏಳು ಜನರು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಸಮುದ್ರದಲ್ಲಿ ಕಾಪ್ಟರ್ ಪತನವಾಗಿದ್ದು, ಎಲ್ಲಾ ಏಳು ಜನರನ್ನು ರಕ್ಷಣೆ ಮಾಡಲಾಗಿದೆ. ಪತನಕ್ಕೊಳಗಾಗಿರುವ ಹೆಲಿಕಾಪ್ಟರ್ ಪವನ್ ಹ್ಯಾನ್ಸ್‌ಗೆ ಸೇರಿದೆ.

ಅಂಡಮಾನ್ ಪ್ರದೇಶದಲ್ಲಿ ಹೆಲಿಕಾಪ್ಟರ್ ಹಾರಾಟ ನಡೆಸುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದ ಕೊಂಚವೂ ಗಲಿಬಿಲಿಗೊಳ್ಳದ ಪೈಲಟ್ ಹೆಲಿಕಾಪ್ಟರ್‌ನ್ನು ಸುರಕ್ಷಿತವಾಗಿ ಸಮುದ್ರದಲ್ಲಿ ಇಳಿಸಿದ್ದಾರೆ. ಪೈಲಟ್ ಸಮಯಪ್ರಜ್ಞೆಯಿಂದಾಗಿ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಪವನ್ ಹ್ಯಾನ್ಸ್‌ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ.

ಹೆಲಿಕಾಪ್ಟರ್‌ನ್ನು ಸಮುದ್ರಕ್ಕೆ ಇಳಿಸುವ ಮುನ್ನವೇ ಪೈಲಟ್ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಮಾಹಿತಿ ನೀಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ಮತ್ತು ಪರಿಹಾರ ತಂಡದ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದರು. ಹೆಲಿಕಾಪ್ಟರ್‌ ಪತನವಾಗ್ತಿದ್ದಂತೆ ಸಮುದ್ರದಲ್ಲಿ ಸಿಲುಕಿದ್ದವರನ್ನು ರಕ್ಷಣಾ ತಂಡ ರಕ್ಷಿಸಿದೆ.

ಪವನ್ ಹನ್ಸ್ ಸಂಸ್ಥೆಯಿಂದ ಅಧಿಕೃತ ಹೇಳಿಕೆ ಬಿಡುಗಡೆ

ಇಂದು ಬೆಳಗ್ಗೆ ಸರಿಸುಮಾರು 9:30 ರ ಸುಮಾರಿಗೆ, ಪವನ್ ಹನ್ಸ್ ಹೆಲಿಕಾಪ್ಟರ್ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮಾಯಾಬಂದರ್ ಬಳಿ ಲ್ಯಾಂಡಿಂಗ್ ಅಪಘಾತಕ್ಕೀಡಾಯಿತು. ಹೆಲಿಕಾಪ್ಟರ್ ಪೋರ್ಟ್ ಬ್ಲೇರ್ ನಿಂದ ಹೊರಟಿತ್ತು. ಇಬ್ಬರು ಸಿಬ್ಬಂದಿ ಸೇರಿದಂತೆ ಐವರು ಪ್ರಯಾಣಿಕರನ್ನು ಹೆಲಿಕಾಪ್ಟರ್ ಹೊತ್ತೊಯ್ಯುತ್ತಿತ್ತು. ಪೈಲಟ್ ಹೆಲಿಕಾಪ್ಟರ್ ಅನ್ನು ಅಂಡಮಾನ್ ಸಮುದ್ರದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಯಾರಿಗೂ ಗಾಯಗಳಾಗಿಲ್ಲ ಎಂದು ಪವನ್ ಹನ್ಸ್ ಹೇಳಿದೆ.

ಇದನ್ನೂ ಓದಿ: ನೇಪಾಳದಲ್ಲಿ ತ್ರಿಶೂಲಿ ನದಿಗುರುಳಿದ ಬಸ್ 18 ಜನ ಸಾವು

Scroll to load tweet…

ಒಂದು ದ್ವೀಪದಿಂದ ಮತ್ತೊಂದು ದ್ವೀಪಕ್ಕೆ ಹೆಲಿಕಾಪ್ಟರ್ ಸೇವೆ

ಸಮುದ್ರದಿಂದ ರಕ್ಷಣೆ ಮಾಡಲಾದ ಏಳು ಜನರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಹೆಲಿಕಾಪ್ಟರ್‌ನಲ್ಲಿನ ತಾಂತ್ರಿಕ ದೋಷ ಕಾರಣ ಏನು? ಟೇಕಾಫ್‌ಗೂ ಮುನ್ನ ಎಲ್ಲಾ ರೀತಿಯ ಪರಿಶೀಲನೆ ನಡೆಸಲಾಗಿತ್ತಾ ಎಂಬುದರ ಬಗ್ಗೆ ಪವನ್ ಹನ್ಸ್ ಸಂಸ್ಥೆ ಆಂತರಿಕ ತನಿಖೆಗೆ ಆದೇಶ ನೀಡಿದೆ. ಪವನ್ ಹನ್ಸ್ ಸಂಸ್ಥೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸೇರಿದಂತೆ ದೂರದ ಮತ್ತು ದ್ವೀಪ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ಸೇವೆಗಳನ್ನು ನೀಡುತ್ತದೆ. ಪೋರ್ಟ್ ಬ್ಲೇರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಡುವೆ ಸಂಪರ್ಕವನ್ನು ಒದಗಿಸುತ್ತದೆ.

ಇದನ್ನೂ ಓದಿ: ಗಂಟೆಗೆ 1670 KM ವೇಗದಲ್ಲಿ ಭೂಮಿ ತಿರುಗುವ ಅದ್ಭುತ ದೃಶ್ಯ ಸೆರೆ, ಆದ್ರೂ ಅನಭವಕ್ಕೆ ಬರ್ತಿಲ್ಲ ಏಕೆ?

Scroll to load tweet…

Scroll to load tweet…



Source link

Leave a Reply

Your email address will not be published. Required fields are marked *