ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಡೆ ಡಾ. ಬಸವರಾಜ ಗುರೂಜಿಅವರು 2026ರ ಕೇತುಗ್ರಸ್ತ ಚಂದ್ರಗ್ರಹಣ ವೃಷಭ ರಾಶಿಯವರ ಮೇಲೆ ಹೇಗಿರಲಿದೆ ಎಂಬುದರ ಕುರಿತು ಮಾಹಿತಿ ನೀಡಲಾಗಿದೆ. ಈ ಗ್ರಹಣವು ವೃಷಭ ರಾಶಿಯವರಿಗೆ ನಾಲ್ಕನೇ ಮನೆಯಲ್ಲಿ (ಸುಖಸ್ಥಾನ) ಸಂಭವಿಸಲಿದೆ. ಈ ಗ್ರಹಣದ ಪ್ರಭಾವ ಕೃತಿಕಾ, ರೋಹಿಣಿ ಮತ್ತು ಮೃಗಶಿರಾ ನಕ್ಷತ್ರದ ವೃಷಭ ರಾಶಿಯವರ ಮೇಲೆ ಹೆಚ್ಚಾಗಿರುತ್ತದೆ. ಅಶಾಂತಿ, ತಂದೆ-ತಾಯಿಗಳ ಬಗ್ಗೆ ಕಾಳಜಿ, ಆಸ್ತಿ ವಿಚಾರದಲ್ಲಿ ಜಾಗ್ರತೆ, ಶಿಕ್ಷಣ ಕ್ಷೇತ್ರದಲ್ಲಿ ಗೊಂದಲಗಳು, ಆರ್ಥಿಕ ಏರಿಳಿತಗಳು ಮತ್ತು ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯವೆಂದು ಗುರೂಜಿ. ಹೂಡಿಕೆಯಿಂದ ಅಲ್ಪ ಲಾಭ, ಹಳೆಯ ಬಾಕಿಯ ಬಗ್ಗೆ ತೊಂದರೆಗಳು, ಪಾಲುದಾರಿಕೆಯಲ್ಲಿ ಅಶುಭ ಫಲ ನಿರೀಕ್ಷಿಸಲಾಗಿದೆ. ನಟರು, ಕಲಾವಿದರು, ಸಾಹಿತಿಗಳು ಶ್ರಮದಿಂದ ಮಾತ್ರ ಅದೃಷ್ಟವನ್ನು ಪಡೆಯುತ್ತಾರೆ.
ಆದಾಗ್ಯೂ, ಮನೆ ಕಟ್ಟುವ ಸೈಟ್, ಕೊಳ್ಳುವ ಯೋಗ, ಶತ್ರುಗಳು ಮಿತ್ರರಾಗುವ ಸಾಧ್ಯತೆ, ಉತ್ತಮ ಸ್ನೇಹಿತರ ಬೆಂಬಲ, ವಿವಾಹ ವಿಷಯಗಳಲ್ಲಿ ಶುಭ, ವಾಹನ ಕೊಳ್ಳುವ ಯೋಗ ಮತ್ತು ರಾಜಕೀಯ ಪ್ರಗತಿಯಂತಹ ಸಕಾರಾತ್ಮಕ ಅಂಶಗಳಿವೆ. ಈ ಸಮಯದಲ್ಲಿ ನಮೋ ನಾರಾಯಣಾಯ ಮಂತ್ರ ಜಪ ಮತ್ತು ತಿರುಪತಿ ವೆಂಕಟೇಶ್ವರ ದರ್ಶನ ಮಾಡುವುದರಿಂದ ಶುಭ ಫಲ ಸಿಗುತ್ತದೆ ಎಂದು ಗುರೂಜಿ ಸಲಹೆ ನೀಡಿದರು.
ಇದನ್ನೂ ಓದಿ: ಮಾ.03 ವರ್ಷದ ಮೊದಲ ಚಂದ್ರಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತಾ?
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ