ರಶ್ಮಿಕಾ ಮಂದಣ್ಣ (ರಶ್ಮಿಕಾ ಮಂದಣ್ಣ) ಮತ್ತು ವಿಜಯ್ ದೇವರಕೊಂಡ ಅವರು ಅದ್ಧೂರಿಯಾಗಿ ವಿವಾಹವಾಗುತ್ತಿದ್ದಾರೆ. ನಾಳೆ (ಫೆಬ್ರವರಿ 26)ಕ್ಕೆ ನಡೆಯಲಿರುವ ವಿವಾಹಕ್ಕೆ ಅವರ ಆಪ್ತರು, ಕುಟುಂಬ ಸದಸ್ಯರು ಭಾಗವಹಿಸಿದ್ದಾರೆ. ಮಾರ್ಚ್ 04 ರಂದು ಹೈದರಾಬಾದ್‌ನಲ್ಲಿ ಅದ್ಧೂರಿ ರಿಸೆಪ್ಷನ್ ನಡೆಯಲಿದೆ ಹಲವು ಗಣ್ಯರು, ರಾಜಕಾರಣಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಹಾರೈಸಿದ್ದಾರೆ.
ವಿಜಯ್ ದೇವರಕೊಂಡ ಅವರ ತಂದೆ ಮತ್ತು ತಾಯಿ ಅವರು ಮೋದಿ ಅವರಿಗೆ ಆಹ್ವಾನ ನೀಡಿ ಮದುವೆಗೆ ಆಹ್ವಾನಿಸಿದ್ದರು, ಇದೀಗ ಮೋದಿ ಅವರು ವಿಜಯ್ ದೇವರಕೊಂಡ ಪೋಷಕರ ಹೆಸರನ್ನು ಸೂಚಿಸಿ ಪತ್ರ ಬರೆದು ವಧು-ವರರಿಗೆ ಶುಭ ಹಾರೈಸಿರುವ ಪ್ರಧಾನಿ ಮೋದಿ, ‘ಫೆಬ್ರವರಿ 26, 2026 ರಂದು ನಡೆದ ವಿಜಯ್ ಮತ್ತು ರಶ್ಮಿಕಾ ಅವರ ವಿವಾಹಕ್ಕೆ ನೀವು ನೀಡಿದ ಆಮಂತ್ರಣವನ್ನು ಸ್ವೀಕರಿಸಿ ಬಹಳ ಸಂತೋಷವಾಯಿತು. ಈ ಅತ್ಯಂತ ಹರ್ಷದಾಯಕ ಮತ್ತು ಮಂಗಳಕರ ಸಂದರ್ಭದಲ್ಲಿ ದೇವರಕೊಂಡ ಮತ್ತು ಮಂದಣ್ಣ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು’
ಮುಂದುವರೆದು, ‘ಇದು ವಿಜಯ್ ಮತ್ತು ರಶ್ಮಿಕಾ ಅವರ ಜೀವನದಲ್ಲಿ ಒಂದು ಹೊಸ, ಸುಂದರ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. ‘ಸಖಾ ಸಪ್ತಪದ ಭವ’ ಏಳು ಹೆಜ್ಜೆಗಳನ್ನು ಜೊತೆಯಾಗಿ ನಡೆಯುವ ಮೂಲಕ ಅಂದರೆ ದಂಪತಿಗಳು ಜೀವನಪರ್ಯಂತ ಸ್ನೇಹಿತರಾಗುತ್ತಾರೆ ಎಂಬ ಭಾವನೆಯೊಂದಿಗೆ ಈ ಪಯಣ ಶುರುವಾಗುತ್ತಿದೆ. ವಿಜಯ್ ಆಗಲಿ ಅಥವಾ ರಶ್ಮಿಕಾ ಆಗಲಿ ತಮ್ಮ ಚಲನಚಿತ್ರಗಳ ಚಿತ್ರಕಥೆಗಳಿಗೆ ಹೊಸಬರೇನಲ್ಲ. ಆದರೆ ಪ್ರೀತಿ ಮತ್ತು ಅನುರಾಗದಿಂದ ತುಂಬಿದ ಅವರ ನಿಜ ಜೀವನದ ಈ ದೈವಿಕವಾಗಿ ಬರೆಯಲ್ಪಟ್ಟ ಅಧ್ಯಾಯವು, ಅವರು ಬೆಳ್ಳಿತೆರೆಯ ಮೇಲೆ ಸೃಷ್ಟಿಸಿದ ಮ್ಯಾಜಿಕ್‌ಗಿಂತ ಮಿಗಿಲನ್‌ನಲ್ಲಿ ಸಂಗ್ರಹಗೊಳ್ಳುತ್ತಾರೆ.
ಇದನ್ನೂ ಓದಿ:ಎರಡು ಬಾರಿ ಮದುವೆ ಆಗಲಿದ್ದಾರೆ ರಶ್ಮಿಕಾ-ವಿಜಯ್ ದೇವರಕೊಂಡ: ಕಾರಣ?
‘ಮುಂಬರುವ ದಿನಗಳು, ತಿಂಗಳುಗಳು ಮತ್ತು ವರ್ಷಗಳು ಹಂಚಿಕೊಂಡ ಕನಸುಗಳು ಮತ್ತು ಅವುಗಳ ಸಾಕಾರದಿಂದ ತುಂಬಿರಲಿ. ಪರಸ್ಪರ ಕಾಳಜಿ ಮತ್ತು ಪ್ರೀತಿಯಿಂದ ಅವರ ಜವಾಬ್ದಾರಿಗಳನ್ನು ಹಂಚಿಕೊಳ್ಳಲಿ, ಪರಸ್ಪರರ ಅಪೂರ್ಣತೆಗಳನ್ನು ಒಪ್ಪಿಕೊಳ್ಳಲಿ, ಒಬ್ಬರ ಬಲದಿಂದ ಇನ್ನೊಬ್ಬರು ಕಲಿಯಲಿ ಮತ್ತು ನಿಜವಾದ ಪಾಲುದಾರರಾಗಿ ಜೀವನದ ಪಯಣವನ್ನು ಸಾಗಿಸಲಿ ಎಂದು ಹಾರೈಸುತ್ತೇನೆ. ಈ ಮಹತ್ವದ ಸಂದರ್ಭದಲ್ಲಿ ದಂಪತಿಗಳಿಗೆ ಮತ್ತು ಕುಟುಂಬಗಳಿಗೆ ನನ್ನ ಆಶೀರ್ವಾದಗಳು ಮತ್ತು ಶುಭ ಹಾರೈಕೆಗಳು’ ಎಂದು ನೂತನ ದಂಪತಿಗಳಿಗೆ ಶುಭ ಹಾರೈಸಿದ್ದಾರೆ ಪ್ರಧಾನಿ ಮೋದಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ