‘ನಮ್ಮ ಬದುಕು ಹಾಳು ಮಾಡಬೇಡಿ’: ದಾವಣಗೆರೆಯಲ್ಲಿ ಪ್ಲಾಟಿನಮ್-ಮ್ಯಾಂಗನೀಸ್ ಶೋಧಕ್ಕೆ ರೈತರ ತಕರಾರು

‘ನಮ್ಮ ಬದುಕು ಹಾಳು ಮಾಡಬೇಡಿ’: ದಾವಣಗೆರೆಯಲ್ಲಿ ಪ್ಲಾಟಿನಮ್-ಮ್ಯಾಂಗನೀಸ್ ಶೋಧಕ್ಕೆ ರೈತರ ತಕರಾರು


ದಾವಣಗೆರೆಯಲ್ಲಿ ಪ್ಲಾಟಿನಂ-ಮ್ಯಾಂಗನೀಸ್ ಶೋಧಕ್ಕೆ ರೈತರ ತಕರಾರು

ದಾವಣಗೆರೆ, ಫೆಬ್ರವರಿ 25: ಜಿಲ್ಲೆಯ ಚನ್ನಗಿರಿ (ದಾವಣಗೆರೆ) ತಾಲೂಕಿನ ಉಬ್ರಾಣಿ ಹೋಬಳಿ ಯೋಜನೆ ಪ್ಲಾಟಿನಂ ಹಾಗೂ ಮ್ಯಾಂಗನೀಸ್ ಖನಿಜ ನಿಕ್ಷೇಪಗಳಿರುವ ಸಾಧ್ಯತೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆ ಖನಿಜವೇಷಣೆಗೆ ವಿರೋಧ ವ್ಯಕ್ತವಾಗಿದ್ದು, ರೈತರಿಂದ ತೀವ್ರವಾಗಿದೆ.

ಖನಿಜಾನ್ವೇಷಣೆ ಮುಂದುವರಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ

ಉಬ್ರಾಣಿ ಹೋಬಳಿಯ ಅರಣ್ಯ ಪ್ರದೇಶದ ಗುಡ್ಡಗಳು ಹಾಗೂ ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ಪ್ಲಾಟಿನಂ ಮತ್ತು ಮ್ಯಾಂಗನೀಸ್ ಅದಿರು ಲಭ್ಯವಿರಬಹುದೇ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಈ ಕುರಿತು ಅಭಿಪ್ರಾಯ ಸಂಗ್ರಹಿಸಲು ಹೊನ್ನಾಳಿ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ ಅವರ ನೇತೃತ್ವದಲ್ಲಿ ಚನ್ನಗಿರಿಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ ರೈತರು ಖನಿಜವೇಷಣೆಗೆ ಕಠಿಣ ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ದಾವಣಗೆರೆ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧ: ಇಡೀ ರಾತ್ರಿ ದೇಗುಲದ ಆವರಣದಲ್ಲೇ ಕಾದು ಕುಳಿತ ಡಿಸಿ, ಎಸ್ ಪಿ

ನೆಲ್ಲಿಹಂಕಲು, ಕಗ್ಗಿ, ಮುಗಳಿಹಳ್ಳಿ, ತಾವರೆಕೆರೆ, ಉಬ್ರಾಣಿ, ಹನಮಂತಾಪುರ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳ ನಿರ್ಮಾಣ ನಿಕ್ಷೇಪಗಳಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದೇ ಪ್ರದೇಶದಲ್ಲಿ 2006ರಲ್ಲಿ ಕೂಡ ಶೋಧ ಕಾರ್ಯ ಕೈಗೊಳ್ಳಲು ಸಾಕಷ್ಟು ಮುಂದಾಗಿದೆ, ರೈತರ ತೀವ್ರ ವಿರೋಧದ ಹಿನ್ನೆಲೆ ಯೋಜನೆ ಕೈಬಿಡಲಾಗಿದೆ. ಮತ್ತೆ ಇದೇ ವಿಚಾರವಾಗಿ ನಡೆದ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ ರೈತರು, ನಾವು ಅಡಿಕೆ ತೋಟ ಮಾಡಿಕೊಂಡು ನೆಮ್ಮದಿಯಾಗಿ ಜೀವನ ನಡೆಸುತ್ತೇವೆ. ಪ್ಲಾಟಿನಂ ಮತ್ತು ಮ್ಯಾಂಗನೀಸ್ ಹೆಸರಿನಲ್ಲಿ ನಮ್ಮ ಭೂಮಿ ಹಾಗೂ ಜೀವನ ಹಾಳು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಖನಿಜಾನ್ವೇಷಣೆ ಮುಂದುವರಿದರೆ ಉಗ್ರ ಹೋರಾಟ ನಡೆಸುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *