ಈಗಿನ ಕಾಲದಲ್ಲಿ ಎಲ್ಲರೂ ಬ್ಯುಸಿನೇ. ಮನೆಯವರ ಹತ್ರ ಮಾತನಾಡಲು ಸಾಧ್ಯವಾಗದಷ್ಟು ಬ್ಯೂಸಿ. ಯಾರತ್ರ ಕೇಳಿದ್ರು ಸಮಯ ಸಾಕಾಗಲ್ಲ ಎಂದು ಹೇಳ್ತಾರೆ. ಈ ವ್ಯಕ್ತಿಯ ಕೆಲಸ ನೋಡಿದ್ರೆ ನಿಮಗೂ ಕೂಡ ಇವನಷ್ಟು ಬ್ಯೂಸಿ ಯಾರು ಇರಲ್ಲ ಎಂದೆನಿಸಬಹುದು. ಹೌದು, ವ್ಯಕ್ತಿ (ಮನುಷ್ಯ) ಚಲಿಸುವ ಬೈಕ್ನಲ್ಲಿ ಶೇವಿಂಗ್ ಮಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (ಸಾಮಾಜಿಕ ಮಾಧ್ಯಮ) ವೈರಲ್ ಆಗಿದೆ. ನೆಟ್ಟಿಗರು ಈ ದೃಶ್ಯ ನೋಡಿ ಈ ವ್ಯಕ್ತಿಯ ವಿರುದ್ಧ ಗರಂ ಆಗಿದ್ದಾರೆ.
ವಿನೋದ್ ಜೈಶಿ ಹೆಸರಿನ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೈವೇ ರಸ್ತೆಯಲ್ಲಿ ಬೈಕ್ ಓಡಿಸುತ್ತಿದ್ದಾನೆ. ಆದರೆ ಬೈಕ್ ಹ್ಯಾಂಡಲ್ ಹಿಡಿಯುವ ಬದಲು ತನ್ನ ಎರಡೂ ಕೈಗಳನ್ನು ಮುಖದ ಹತ್ತಿರ ಹಿಡಿದು ಶೇವಿಂಗ್ ಮಾಡುತ್ತಿದ್ದಾನೆ. ಬೈಕ್ ತನ್ನ ಪಾಡಿಗೆ ಚಲಿಸುತ್ತಿರುವುದನ್ನು ನೀವಿಲ್ಲಿ ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ಎಲ್ಲಾ ವೈರಲ್ ವಿಡಿಯೋದಲ್ಲೂ ಈ ಹುಡುಗ ಇರಲೇಬೇಕು: ಬಾಲಕನ ಜೀವನ ಬದಲಾಯಿಸಿತು ಒಂದೇ ಒಂದು ನಗು
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಸೇರಿಸಿದ್ದು, ಒಬ್ಬ ಬಳಕೆದಾರ, ಇವನೆಷ್ಟು ಬ್ಯುಸಿ ಇರಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬರು, ಮಲ್ಟಿಟಾಸ್ಕಿಂಗ್ ಕಿಂಗ್ ಇವನೇ ಇರ್ಬೆಕು ಎಂದು ಹೇಳಿದ್ದಾರೆ.. ಮತ್ತೊಬ್ಬರು, ಎನ್ ಧೈರ್ಯ ಗುರು ಇವನಿಗೆ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ