ನವದೆಹಲಿ, ಫೆಬ್ರುವರಿ 25: ಭಾರತದ ಸೋಲಾರ್ ಉತ್ಪನ್ನಗಳು (ಭಾರತೀಯ ಸೌರ ಆಮದುಗಳು) ಮೇಲೆ ಅಮೆರಿಕ ಶೇ. 126ರಷ್ಟು ಪೂರ್ವಭಾವಿ ಸುಂಕಗಳನ್ನು (ಪೂರ್ವಭಾವಿ ಕರ್ತವ್ಯಗಳು) ವಿಧಿಸಿದೆ. ಇತರ ಕೆಲ ದೇಶಗಳ ಮೇಲೂ ವಿವಿಧ ದರಗಳ ಸುಂಕಗಳನ್ನು ಅಮೆರಿಕ ವಿಧಿಸಿದೆ. ಲಾವೋಸ್, ಇಂಡೋನೇಷ್ಯಾ ದೇಶಗಳಿಂದ ರಫ್ತಾಗುವ ಸೋಲಾರ್ ಉತ್ಪನ್ನಗಳ ಮೇಲೆ ಶೇ. 81ರಿಂದ 143ರಷ್ಟು ಸುಂಕವನ್ನು ಅಮೆರಿಕ ಹೇರಿದೆ ಎಂದು ಸಿಎನ್‌ಬಿಸಿ ಟಿವಿ18ನಲ್ಲಿ ವರದಿಯಾಗಿದೆ.
ಸೋಲಾರ್ ಉತ್ಪನ್ನಗಳ ಆಮದು ಮೇಲೆ ಅಮೆರಿಕ ವಿಧಿಸಿರುವ ಸುಂಕಕ್ಕೂ ಅದರ ಪ್ರತಿಸುಂಕ ಕ್ರಮಕ್ಕೂ ಸಂಬಂಧವಿಲ್ಲ. ಸೋಲಾರ್ ಉತ್ಪನ್ನಗಳು ತಯಾರಾದ ದೇಶದಲ್ಲಿ ಸಿಕ್ಕಿರುವ ಸಬ್ಸಿಡಿಗಳೆಷ್ಟು ಎನ್ನುವುದರ ಆಧಾರದ ಮೇಲೆ ಸುಂಕವನ್ನು ವಿಧಿಸಲಾಗಿರುವುದು. ಅಂದರೆ, ಸೋಲಾರ್ ಉತ್ಪನ್ನ ತಯಾರಿಸುವ ಕಂಪನಿಗಳಿಗೆ ಆ ದೇಶದ ಸರ್ಕಾರ ಸಬ್ಸಿಡಿ ನೆರವು ಒದಗಿಸಿದಾಗ, ಉತ್ಪನ್ನದ ಬೆಲೆ ಕಡಿಮೆ ಇರುತ್ತದೆ. ಇದರಿಂದ ಕಡಿಮೆ ಬೆಲೆಗೆ ರಫ್ತು ಮಾಡಲು ಸಾಧ್ಯ. ಅಮೆರಿಕದ ಸೋಲಾರ್ ಉತ್ಪಾದಕರಿಗಿಂತ ಕಡಿಮೆ ಬೆಲೆಗೆ ಒದಗಿಸಲು ಸಾಧ್ಯ. ಈ ಅಂಶವನ್ನು ಪರಿಗಣಿಸಿ ಅಮೆರಿಕದ ವಾಣಿಜ್ಯ ಸಚಿವಾಲಯವು ಸೋಲಾರ್ ಉತ್ಪನ್ನಗಳ ಮೇಲೆ ಅಧಿಕ ಸುಂಕವನ್ನು ಹೇರಲು ನಿರ್ಧರಿಸಿದೆ.
ಇದನ್ನೂ ಓದಿ: ನಮ್ಮನ್ನು ಕಿತ್ತು ತಿನ್ನುತ್ತಿದ್ದವರು ಇವತ್ತು ಟ್ಯಾರಿಫ್ ಕತ್ತಿದರೆ, ಅವರೂ ಖುಷ್, ನಾವೂ ಖುಷ್: ಡೊನಾಲ್ಡ್ ಟ್ರಂಪ್
ಭಾರತದ ಯಾವ್ಯಾವ ಕಂಪನಿಗಳ ಮೇಲೆ ಪರಿಣಾಮ?
ಭಾರತದಲ್ಲಿ ಸೋಲಾರ್ ಉಪಕರಣಗಳನ್ನು ತಯಾರಿಸುವ ಹಲವಾರು ಕಂಪನಿಗಳಿವೆ. ಅವುಗಳ ಮೇಲಿನ ಕೆಲವು ಕಂಪನಿಗಳು ಅಮೆರಿಕನ್ ಮಾರುಕಟ್ಟೆಗೆ ಹೆಚ್ಚು ರಫ್ತು ಮಾಡುತ್ತವೆ. ಅಂಥ ಕಂಪನಿ ವಾರಿ ಎನರ್ಜಿಸ್, ವಿಕ್ರಮ್ ಸೋಲಾರ್ ಲಿಮಿಟೆಡ್, ಪ್ರಿಮಿಯರ್ನರ್ಜೀಸ್ ಲಿಮಿಟೆಡ್ ಇತ್ಯಾದಿ.
ಅಮೆರಿಕದಿಂದ ಸಿಕ್ಕಾಪಟ್ಟೆ ಸುಂಕ ಹೇರಿಕೆ ಕ್ರಮ ಬಂದ ಬೆನ್ನಲ್ಲೇ ಈ ಸೋಲಾರ್ ಕಂಪನಿಗಳ ಷೇರುಗಳು ಬುಧವಾರ ನೆಲಕಚ್ಚಿವೆ. ವಾರಿ ಎನರ್ಜಿಸ್ ಷೇರುಬೆಲೆ ಬೆಳಗಿನ ವಹಿವಾಟಿನಲ್ಲಿ ಶೇ. 10ರಷ್ಟು ಕುಸಿದಿತ್ತು. ಪ್ರೀಮಿಯರ್ ಎನರ್ಜಿಸ್ ಕೂಡ ಶೇ. 10 ಕೆಳಗಿನ ಮಿತಿ ಮುಟ್ಟಿತ್ತು. ವಿಕ್ರಮ್ ಸೋಲಾರ್ನ ಷೇರುಬೆಲೆ ಶೇ. 5 ಹೆಚ್ಚಿನ ಕುಸಿತ ಕಂಡುಬಂದಿದೆ.
ಇದನ್ನೂ ಓದಿ: ಡಿಸೆಂಬರ್ ಕ್ವಾರ್ಟರ್‌ನಲ್ಲಿ ಜಿಡಿಪಿ ಶೇ. 8.1 ಹಿಗ್ಗಿರುವ ಸಾಧ್ಯತೆ: ಎಸ್ಬಿಐ ವರದಿಯಲ್ಲಿ ಅಂದಾಜು
ಎರಡು ವರ್ಷ 9 ಪಟ್ಟು ರಫ್ತು
ಅಮೆರಿಕದ ವಾಣಿಜ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಭಾರತದಿಂದ ಸೋಲಾರ್ ರೋಗ 2024ರಲ್ಲಿ ಆಮದು ಮಾಡಿಕೊಂಡಿರುವುದು 792.6 ಮಿಲಿಯನ್ ಡಾಲರ್ ಮೌಲ್ಯ. 2022ದಕ್ಕೆ 2024ರಲ್ಲಿ ಒಂಬತ್ತು ಪಟ್ಟು ಹೆಚ್ಚು ಆಮದು ನಡೆದಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ