
ಅಲ್ಲದೆ, ನೀವು ಹಳೆಯ ಚಿನ್ನವನ್ನು ಮಾರುವುದು ಅಥವಾ ಹೊಸ ಒಡವೆಗಳನ್ನು ಮಾಡಿಸಿಕೊಳ್ಳುವುದು ನೀವು ಹೋಗುವ ಅಂಗಡಿ ಮತ್ತು ಪ್ರದೇಶದ ಮೇಲೆ ಅವಲಂಬಿತವಾಗಿರುತ್ತದೆ. ಕೆಲವರು ಹೆಚ್ಚು ಕಡಿತ (Wastage) ಮಾಡಿದರೆ, ಇನ್ನು ಕೆಲವರು ಕಡಿಮೆ ಮಾಡುತ್ತಾರೆ. ಒಂದು ವೇಳೆ ನೀವು ಈ ಹಿಂದೆ ಚಿನ್ನ ಖರೀದಿಸಿದ ಅಂಗಡಿಗೇ ಹೋದರೆ, ಅವರು ಕಡಿತವನ್ನು ಸ್ವಲ್ಪ ಕಡಿಮೆ ಮಾಡುವ ಸಾಧ್ಯತೆ ಇರುತ್ತದೆ.
ಮಾರುಕಟ್ಟೆ ತಜ್ಞರ ಪ್ರಕಾರ, ಹಳೆಯ ಚಿನ್ನವನ್ನು ಮಾರಿ ನಗದು ಪಡೆಯುವುದಕ್ಕಿಂತ, ಅದನ್ನು ನೀಡಿ ಹೊಸ ಚಿನ್ನದ ಒಡವೆಗಳನ್ನು ಖರೀದಿಸುವುದು ಹೆಚ್ಚು ಲಾಭದಾಯಕವಾಗಿದೆ.