ಈ ಸಾಫ್ಟ್​ವೇರ್​ ಎಂಜಿನಿಯರ್​ಗೆ ಅತಿಮಾನುಷ ಶಕ್ತಿ ಬಂದಿದ್ಹೇಗೆ? Naa Ninna Bidalaare ಶಂಭು ವಿಡಿಯೋ ವೈರಲ್​

ಈ ಸಾಫ್ಟ್​ವೇರ್​ ಎಂಜಿನಿಯರ್​ಗೆ ಅತಿಮಾನುಷ ಶಕ್ತಿ ಬಂದಿದ್ಹೇಗೆ? Naa Ninna Bidalaare ಶಂಭು ವಿಡಿಯೋ ವೈರಲ್​

ಈ ಸಾಫ್ಟ್​ವೇರ್​ ಎಂಜಿನಿಯರ್​ಗೆ ಅತಿಮಾನುಷ ಶಕ್ತಿ ಬಂದಿದ್ಹೇಗೆ? Naa Ninna Bidalaare ಶಂಭು ವಿಡಿಯೋ ವೈರಲ್​
‘ನಾ ನಿನ್ನ ಬಿಡಲಾರೆ’ ಧಾರಾವಾಹಿಯ ನಿಗೂಢ ಶಂಭು ಪಾತ್ರಧಾರಿ ಸಂತೋಷ್ ಕರ್ಕಿ, ನಿಜ ಜೀವನದಲ್ಲಿ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್. ಅವರ ಅಸಲಿ ರೂಪದಲ್ಲಿ ಅವರನ್ನು ಗುರುತಿಸುವುದು ಕಷ್ಟ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಇವರು ‘ಗರುಡ ಪುರಾಣ’ ಚಿತ್ರದಲ್ಲೂ ನಟಿಸಿದ್ದಾರೆ.
ಹರುಕು-ಮುರುಕು ಡ್ರೆಸ್​. ಕೆದರಿದ ಕೂದಲು, ಕೈಯಲ್ಲಿ ಒಂದು ಕೋಲು. ಇರುವುದು ಸ್ಮಶಾನದಲ್ಲಿ. ಬಾಯಿ ಬಿಟ್ಟರೆ ಚಿತ್ರ- ವಿಚಿತ್ರ ನಿಗೂಢ ಮಾತು. ಭವಿಷ್ಯದ ಬಗ್ಗೆಯೂ ನುಡಿಯುವ ಚಾಣಾಕ್ಷತನ. ದೈವೀ ಭಕ್ತ, ದುಷ್ಟ ಶಕ್ತಿಯನ್ನು ಬಗ್ಗುಬಡಿಸುವ ಮಹಾಜೀವಿ… ಹೀಗೆ ಹೇಳುತ್ತಿದ್ದಂತೆಯೇ, ಸಿರಿಯಲ್​ ಪ್ರಿಯರಿಗೆ ನಾ ನಿನ್ನ ಬಿಡಲಾರೆ (Naa Ninna Bidallare) ಸೀರಿಯಲ್​ ಶಂಭು ವೇಷಧಾರಿ ಕಣ್ಣ ಮುಂದೆ ಬರುತ್ತಾನೆ.

ಶಂಭು ಪಾತ್ರಧಾರಿಯ ರಿಯಲ್​ ಹೆಸರು ಸಂತೋಷ್​ ಕರ್ಕಿ (Shambhu urf Santosh Karki). ಸಾಫ್ಟ್​ವೇರ್​ ಎಂಜಿನಿಯರ್​ ಆಗಿರುವ ಶಂಭು ಅವರು ರಿಯಲ್​ ವೇಷದಲ್ಲಿ ಬಂದರೆ ಗುರುತು ಸಿಗುವುದೇ ಇಲ್ಲ ಬಿಡಿ! ಇದೀಗ ಅವರು, ಉಪ್ಪಿಗಿಂತ ರುಚಿ ಬೇರೆ ಇಲ್ಲ… ಹಿನ್ನೆಲೆಯಲ್ಲಿ ಹಾಕಿರುವ ಮೂರ್ನಾಲ್ಕು ಸೆಕೆಂಡ್​ಗಳ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸೌಂಡ್​ ಮಾಡುತ್ತಿದೆ.

ಸಾಮಾನ್ಯವಾಗಿ, ಯಾವುದೇ ಪಾತ್ರಧಾರಿ ಇದ್ದರೂ, ಅವರು ಯಾವುದೇ ವೇಷದಲ್ಲಿ ಬಂದರೂ ಗುರುತಿಸಬಹುದು. ಆದರೆ ಶಂಭು ಪಾತ್ರ ಅದೆಷ್ಟು ವಿಚಿತ್ರವಾಗಿದೆ ಎಂದರೆ ಸಂತೋಷ್​ ಅವರು ರಿಯಲ್ಲಾಗಿ ಬಂದು ನಾನೇ ಶಂಭು ಎಂದರೂ, ಇಲ್ಲಪ್ಪಾ ಎನ್ನುವವರೇ ಹೆಚ್ಚು.

ಇದಕ್ಕೆ ಈ ಹಿಂದೆ ಜೀ ಕುಟುಂಬ ಅವಾರ್ಡ್ಸ್​ ಕೂಡ ಸಾಕ್ಷಿಯಾಗಿತ್ತು. ಇವರಿಗೆ ಜೀ ಕುಟುಂಬ ಅವಾರ್ಡ್ಸ್​ನಲ್ಲಿ ಬೆಸ್ಟ್​ ಅಪ್ಪ ಪ್ರಶಸ್ತಿ ಬಂದಾಗ, ಅವರ ವಿಟಿ ಒಂದನ್ನು ತೋರಿಸಲಾಗಿತ್ತು. ರಿಯಲ್​ ವೇಷದಲ್ಲಿ ಹೋದಾಗ, ನಾನೇ ಶಂಭು ಎಂದರೂ ಜನರು ನಂಬಿರಲಿಲ್ಲ. ಶಂಭುವಿನ ವೇಷದಲ್ಲಿ ಹೋದಾಗ ಕೆಲವು ಮಹಿಳೆಯರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಿದ್ದರು.

ನಾಟಕಗಳಿಂದಲೂ ಫೇಮಸ್​ ಆಗ್ತಿರೋ ಸಂತೋಷ್​ ಅವರು, ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಇದ್ದಾರೆ. ತಮ್ಮ ರಿಯಲ್​​ ಮತ್ತು ರೀಲ್​ ಫ್ಯಾಮಿಲಿಗಳ ಜೊತೆ ರೀಲ್ಸ್​ ಮಾಡುತ್ತಿರುತ್ತಾರೆ. ಹಲವು ಸಂದರ್ಭಗಳಲ್ಲಿ ಸಂತೋಷ್​ ಅವರು ತಮ್ಮ ನಾ ನಿನ್ನ ಬಿಡಲಾರೆ ಸೀರಿಯಲ್​ ಮಕ್ಕಳು ಹಾಗೂ ಇತರ ಕಲಾವಿದರ ಜೊತೆಯೂ ಶಂಭುವಿನ ವೇಷದಲ್ಲಿಯೇ ರೀಲ್ಸ್​ ಮಾಡಿ ಹಂಚಿಕೊಳ್ಳುವುದು ಇದೆ.

ಅಂದಹಾಗೆ, ಸಿನಿಮಾದಲ್ಲಿಯೂ ಇವರು ಮಿಂಚಿದ್ದಾರೆ. ಸಂತೋಷ್ ಕರ್ಕಿ ಅವರು 2023ರಲ್ಲಿ ಬಿಡುಗಡೆಯಾದ ಕನ್ನಡದ ಅಪರಾಧ ಥ್ರಿಲ್ಲರ್ ಚಲನಚಿತ್ರ "ಗರುಡ ಪುರಾಣ" ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಂಜುನಾಥ್ ಬಿ. ನಾಗಬಾ ನಿರ್ದೇಶನದ ಈ ಚಿತ್ರದಲ್ಲಿ ದಿಶಾ ಶೆಟ್ಟಿ, ಚೆಲುವರಾಜು ಮುಂತಾದವರು ಇದ್ದು, ಕೊಲೆ ರಹಸ್ಯದ ಸುತ್ತ ಕಥೆ ಸಾಗುತ್ತದೆ

Source link

Leave a Reply

Your email address will not be published. Required fields are marked *