ಭಾರತ ಮೂಲದ ಅರವಿಂದ್ ಕೆ.ಸಿ. ಓಪನ್​ಎಐನ ನೂತನ ಸಿಪಿಒ; ಯಾವುದಿದು ಹುದ್ದೆ?

ಭಾರತ ಮೂಲದ ಅರವಿಂದ್ ಕೆ.ಸಿ. ಓಪನ್​ಎಐನ ನೂತನ ಸಿಪಿಒ; ಯಾವುದಿದು ಹುದ್ದೆ?


ಸ್ಯಾನ್ ಫ್ರಾನ್ಸಿಸ್ಕೋ, ಫೆಬ್ರುವರಿ 25: ವಿಶ್ವದ ನಂಬರ್ ಒನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಂಸ್ಥೆ ಎನಿಸಿರುವ ಓಪನ್ಎಐನ ಚೀಫ್ ಪೀಪಲ್ ಆಫೀಸರ್ ಹುದ್ದೆಗೆ (ಓಪನ್ಎಐ ಚೀಫ್ ಪೀಪಲ್ ಆಫೀಸರ್) ಭಾರತ ಮೂಲದ ಅರವಿಂದ್ ಕೆ.ಸಿ. (ಅರವಿಂದ್ ಕೆಸಿ) ನೇಮಕವಾಗಿದ್ದಾರೆ. ಓಪನ್‌ಎಐನ ಚಟುವಟಿಕೆ ಮತ್ತು ಬ್ಯುಸಿನೆಸ್ ವಿಸ್ತರಣೆ ಬಹಳ ವೇಗದಲ್ಲಿ ನಡೆಯುತ್ತಿದೆ ಅರವಿಂದ್ ಕೆ.ಸಿ. ಅವರಿಗೆ ಹೊಣೆಗಾರಿಕೆ ಬಹಳ ದೊಡ್ಡದಿದೆ.

ಚೀಫ್ ಪೀಟಲ್ ಆಫೀಸರ್ ಎಂಬುದು ಎಚ್‌ಆರ್‌ಗೆ ಸಂಬಂಧಿಸಿದ ಹುದ್ದೆ. ಮಾನವ ಸಂಪನ್ಮೂಲದ ಹಂಚಿಕೆಯ ಜವಾಬ್ದಾರಿ ಇರುವಂತಹ ಹುದ್ದೆ. ನೇಮಕಾತಿ, ಪ್ರತಿಭಾ ಬಳಕೆ, ಉದ್ಯೋಗಿ ಕ್ಷಮತೆ ಅಭಿವೃದ್ಧಿ ಇತ್ಯಾದಿ ಕಾರ್ಯಗಳನ್ನು ಗಮನಿಸುವುದು ಈ ಹುದ್ದೆಯಲ್ಲಿರುವವರ ಜವಾಬ್ದಾರಿ.

ಓಪನ್ಎಐನಲ್ಲಿ ಈ ಮುಂಚೆ ಚೀಫ್ ಪೀಪಲ್ ಆಫೀಸರ್ ಆಗಿದ್ದ ಜೂಲಿಯಾ ವಿಲ್ಲಾಗ್ರ ಅವರು 2025 ರ ಆಗಸ್ಟ್ನಲ್ಲಿ ಕಂಪನಿ ತರೆದಿದ್ದರು. ಐದಾರು ತಿಂಗಳ ನಂತರ ಹೊಸ ನೇಮಕಾತಿ ಆಗಿದೆ. ಅರವಿಂದ್ ಕೆ.ಸಿ. ಅವರು ಮಹಾರಾಷ್ಟ್ರದ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯಿಂದ ಕೆಮಿಕಲ್ ಎಂಜಿನಿಯರಿಂಗ್ ಮಾಡಿದ್ದಾರೆ. ಅಮೆರಿಕದ ಸಾಂಟಾ ಕ್ಲಾರಾ ಯೂನಿವರ್ಸಿಟಿಯಲ್ಲಿ ಎಂಬಿಎಂ ಮಾಡಿದ್ದಾರೆ. ರೋಬ್ಲಾಕ್ಸ್, ಗೂಗಲ್, ಪಲಂಟಿರ್ ಟೆಕ್ನಾಲಜೀಸ್, ಮೆಟಾ ಪ್ಲಾಟ್ಫಾರ್ಮ್ಸ್ ಮೊದಲಾದ ಕಂಪನಿಗಳಲ್ಲಿ ಹಿರಿಯ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನಿರ್ವಹಣೆ, ಹೀಗೆ ಎರಡು ವಿಭಿನ್ನ ಜವಾಬ್ದಾರಿಗಳನ್ನು ನಿಭಾಯಿಸಿದ ಅನುಭವ ಅವರಿಗಿದೆ.

ಇದನ್ನೂ ಓದಿ: ನಮ್ಮನ್ನು ಕಿತ್ತು ತಿನ್ನುತ್ತಿದ್ದವರು ಇವತ್ತು ಟ್ಯಾರಿಫ್ ಕತ್ತಿದರೆ, ಅವರೂ ಖುಷ್, ನಾವೂ ಖುಷ್: ಡೊನಾಲ್ಡ್ ಟ್ರಂಪ್

ಅರವಿಂದ್ ಕೆ.ಸಿ. ಅವರು ಓಪನ್ ಎಐನ ಚೀಫ್ ಸ್ಟ್ರಾಟಿಜಿ ಆಫೀಸರ್ ಆಗಿರುವ ಜೇಸನ್ ಕ್ವೋನ್ ಅವರಿಗೆ ರಿಪೋರ್ಟ್ ಮಾಡಿಕೊಳ್ಳಲಿದ್ದಾರೆ. ಜಾಗತಿಕವಾಗಿ ಎಐ ಬೂಮ್ ಹೆಚ್ಚುತ್ತಿದೆ, ಆ ಕ್ಷೇತ್ರದಲ್ಲಿ ಪರಿಣಿತರ ಅವಶ್ಯಕತೆ ಬಹಳ ಹೆಚ್ಚಿದೆ. ಎಐ ಪರಿಣಿತರಿಗೆ ಬೇಡಿಕೆ ಬಹಳ ಹೆಚ್ಚಿದೆ. ಈ ಪೈಕಿ ಅರವಿಂದ್ ಕೆ. ಅವರು ಚೀಫ್ ಪೀಪಲ್ ಆಫೀಸರ್ ಆಗಿ ಗುರುತರ ಹೊಣೆಗಾರಿಕೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *