Headlines

ಬೆಂಗಳೂರು ಟ್ರಾಫಿಕ್ ಪೊಲೀಸರಿಂದಲೇ ಕ್ಷಮೆ ಕೇಳಿಸಿದ ಮಹಿಳೆ! ಸರ್ಕಾರಿ ಡ್ಯೂಟಿ ಮಾಡಿದ್ದೇ ತಪ್ಪಾಯ್ತಾ? | Bengaluru Woman Forces Traffic Police To Apologize During Drunk And Drive Check Viral Video Sat

ಬೆಂಗಳೂರು ಟ್ರಾಫಿಕ್ ಪೊಲೀಸರಿಂದಲೇ ಕ್ಷಮೆ ಕೇಳಿಸಿದ ಮಹಿಳೆ! ಸರ್ಕಾರಿ ಡ್ಯೂಟಿ ಮಾಡಿದ್ದೇ ತಪ್ಪಾಯ್ತಾ? | Bengaluru Woman Forces Traffic Police To Apologize During Drunk And Drive Check Viral Video Sat



ಬೆಂಗಳೂರು ಟ್ರಾಫಿಕ್ ಪೊಲೀಸರಿಂದಲೇ ಕ್ಷಮೆ ಕೇಳಿಸಿದ ಮಹಿಳೆ! ಸರ್ಕಾರಿ ಡ್ಯೂಟಿ ಮಾಡಿದ್ದೇ ತಪ್ಪಾಯ್ತಾ? | Bengaluru Woman Forces Traffic Police To Apologize During Drunk And Drive Check Viral Video Sat

ಬೆಂಗಳೂರಿನಲ್ಲಿ ಡ್ರಿಂಕ್ ಅಂಡ್ ಡ್ರೈವ್ ಚೆಕ್ ವೇಳೆ ಮಹಿಳೆಯೊಬ್ಬರು ಹೈಡ್ರಾಮಾ ಸೃಷ್ಟಿಸಿ, ಪೊಲೀಸರಿಂದಲೇ ‘ಸಾರಿ’ ಕೇಳಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಕಾನೂನು ಎಲ್ಲರಿಗೂ ಒಂದೇ ಅಲ್ಲವೇ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. 

ಬೆಂಗಳೂರು (ಫೆ.25): ಸಿಲಿಕಾನ್ ಸಿಟಿಯಲ್ಲಿ ಸಂಚಾರಿ ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಕೆಲವರು ಮಾತ್ರ ಕಾನೂನಿಗಿಂತ ನಾವೇ ದೊಡ್ಡವರು ಎಂಬಂತೆ ವರ್ತಿಸುತ್ತಾರೆ. ಇತ್ತೀಚೆಗೆ ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಇಂತಹದ್ದೇ ಒಂದು ವಿಲಕ್ಷಣ ಘಟನೆ ನಡೆದಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದನ್ನು ತಡೆಯಲು ಪೊಲೀಸರು ನಡೆಸುವ ‘ಡಿಡಿ ಚೆಕ್’ (Drink and Drive Check) ವೇಳೆ ಮಹಿಳೆಯೊಬ್ಬರು ಭಾರಿ ಹೈಡ್ರಾಮಾ ಮಾಡಿದ್ದಲ್ಲದೆ, ಕರ್ತವ್ಯನಿರತ ಪೊಲೀಸ್ ಅಧಿಕಾರಿಯಿಂದಲೇ ಕ್ಷಮೆ ಕೇಳಿಸಿರುವುದು ಈಗ ಚರ್ಚೆಗೆ ಕಾರಣವಾಗಿದೆ.

ಏನಿದು ಘಟನೆ?

ನಗರದ ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಪೊಲೀಸರು ವಾಡಿಕೆಯಂತೆ ಡಿಡಿ ಚೆಕ್ ನಡೆಸುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಮಹಿಳೆಯೊಬ್ಬರನ್ನು ತಡೆದ ಪೊಲೀಸರು, ಮದ್ಯಪಾನ ಮಾಡಿದ್ದಾರೆಯೇ ಎಂದು ಪರೀಕ್ಷಿಸಲು ಮುಂದಾಗಿದ್ದಾರೆ. ಪೊಲೀಸರ ಈ ನಡೆಯಿಂದ ಕೆರಳಿದ ಮಹಿಳೆ, ರಸ್ತೆಯಲ್ಲೇ ಹೈಡ್ರಾಮಾ ಶುರು ಮಾಡಿದ್ದಾರೆ.

ಮಹಿಳೆಯರನ್ನ ಏಕೆ ಚೆಕ್ ಮಾಡ್ತೀರಾ?

ತಮ್ಮನ್ನು ನಿಲ್ಲಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮಹಿಳೆ, ‘ಮಹಿಳೆಯರನ್ನು ಈ ರೀತಿ ರಸ್ತೆಯಲ್ಲಿ ನಿಲ್ಲಿಸಿ ಹೇಗೆ ಡಿಡಿ ಚೆಕ್ ಮಾಡುತ್ತೀರಿ? ನನಗೆ ಬೇರೆ ಕೆಲಸಗಳಿವೆ, ನನ್ನ ಸಮಯ ಏಕೆ ವ್ಯರ್ಥ ಮಾಡುತ್ತೀರಿ?’ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದ್ದಾರೆ. ಅಷ್ಟಕ್ಕೇ ನಿಲ್ಲದ ಅವರು, ಕೂಡಲೇ ತಮ್ಮ ಮೊಬೈಲ್ ತೆಗೆದು ವಿಡಿಯೋ ಚಿತ್ರೀಕರಿಸಲು ಆರಂಭಿಸಿದ್ದಾರೆ. ಪೊಲೀಸರು ತಮ್ಮ ಕರ್ತವ್ಯದ ಭಾಗವಾಗಿ ಇದನ್ನು ಮಾಡುತ್ತಿದ್ದೇವೆ ಎಂದು ತಿಳಿಸಲು ಪ್ರಯತ್ನಿಸಿದರೂ, ಮಹಿಳೆ ಮಾತ್ರ ಯಾವುದನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.

ಪೊಲೀಸ್ ಅಧಿಕಾರಿಯಿಂದಲೇ ಸಾರಿ ಕೇಳಿಸಿದ ಮಹಿಳೆ!

ವಿಡಿಯೋ ಮಾಡುತ್ತಾ ಪೊಲೀಸರ ಮೇಲೆ ಒತ್ತಡ ಹೇರಿದ ಮಹಿಳೆ, ಕೊನೆಗೆ ಪೊಲೀಸ್ ಅಧಿಕಾರಿಯ ಬಳಿ ಕ್ಷಮೆ (Sorry) ಕೇಳುವಂತೆ ಪಟ್ಟು ಹಿಡಿದಿದ್ದಾರೆ. ಸಾರ್ವಜನಿಕವಾಗಿ ಗಲಾಟೆ ದೊಡ್ಡದಾಗಬಾರದು ಹಾಗೂ ಪರಿಸ್ಥಿತಿಯನ್ನು ತಿಳಿಗೊಳಿಸಬೇಕು ಎಂಬ ಉದ್ದೇಶದಿಂದ ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಸಿಬ್ಬಂದಿ ಅನಿವಾರ್ಯವಾಗಿ ಆಕೆಗೆ ‘ಸಾರಿ’ ಕೇಳಿ ಅಲ್ಲಿಂದ ಕಳುಹಿಸಿದ್ದಾರೆ. ನಂತರ ಈ ವಿಡಿಯೋವನ್ನು ಆ ಮಹಿಳೆಯೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

ನೆಟ್ಟಿಗರ ಆಕ್ರೋಶ: ಕಾನೂನು ಎಲ್ಲರಿಗೂ ಒಂದೇ ಅಲ್ವಾ?

ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ‘ಮಹಿಳೆಯರು ಮದ್ಯಪಾನ ಮಾಡಿ ವಾಹನ ಚಲಾಯಿಸುವುದಿಲ್ಲವೇ? ಮದ್ಯದ ಅಮಲಿನಲ್ಲಿ ಅಪಘಾತವಾದರೆ ಯಾರ ಹೊಣೆ?’ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಕರ್ತವ್ಯನಿರತ ಪೊಲೀಸರ ಮೇಲೆ ಈ ರೀತಿ ದರ್ಪ ತೋರುವುದು ಮತ್ತು ಕಾನೂನು ಪಾಲನೆಯಲ್ಲಿ ಲಿಂಗ ತಾರತಮ್ಯ ಮಾಡುವುದು ಎಷ್ಟು ಸರಿ ಎಂಬ ಚರ್ಚೆಗಳು ಶುರುವಾಗಿವೆ.

ಡಿಡಿ ಚೆಕ್ ಎನ್ನುವುದು ಪ್ರತಿಯೊಬ್ಬರ ಸುರಕ್ಷತೆಗಾಗಿ ಇರುವಂತದ್ದು. ಇಂತಹ ಸಂದರ್ಭದಲ್ಲಿ ಪೊಲೀಸರಿಗೆ ಸಹಕರಿಸುವ ಬದಲು, ವಿಡಿಯೋ ಮಾಡಿ ಬೆದರಿಸುವ ತಂತ್ರಗಾರಿಕೆ ಸರಿಯಲ್ಲ ಎಂಬುದು ಅನೇಕರ ಅಭಿಪ್ರಾಯವಾಗಿದೆ.



Source link

Leave a Reply

Your email address will not be published. Required fields are marked *