ಕನ್ನಡ ಕಿರುತೆರೆ ಸೀರಿಯಲ್ ಕ್ಷೇತ್ರದಲ್ಲಿ ‘ಉದಯ ಟಿವಿ’ (ಉದಯ ಟಿವಿ) ಪರಂಪರೆ ದೊಡ್ಡದು. ಹೊಸ ಥರದ ಕೌಟುಂಬಿಕ ಕಥೆಗಳಿಂದ ನೋಡುಗರ ಮನ ಗೆಲ್ಲುತ್ತಿರುವ ಉದಯ ವಾಹಿನಿ ಈಗ ಹೊಸ ಧಾರಾವಾಹಿ ‘ಕೃಷ್ಣವಂಶಿ’ ಮೂಲಕ ಮತ್ತೊಂದು ಭಾವನಾತ್ಮಕ ಪ್ರಪಂಚಕ್ಕೆ ವೀಕ್ಷಕರನ್ನು ಕರೆದೊಯ್ಯಲು ಸಜ್ಜಾಗಿದೆ. ಮಾರ್ಚ್ 2 ರಿಂದ ಸೋಮವಾರದಿಂದ ಶನಿವಾರ ರಾತ್ರಿ 9.30ಕ್ಕೆ ಪ್ರಸಾರ ಆರಂಭ ‘ಕೃಷ್ಣವಂಶಿ’ (ಕೃಷ್ಣ ವಂಶಿ) ಧಾರಾವಾಹಿಯು ಒಂದು ವಿಶೇಷವಾದ ಕಥೆಯನ್ನು ಕಾಣುತ್ತಿದೆ. ಆ ಬಗ್ಗೆ ಉಯಯ ವಾಹಿನಿ ಮಾಹಿತಿ ಹಂಚಿಕೊಂಡಿದೆ.
ನಾಚಿಕೆ ಸ್ವಭಾವದ ಹುಡುಗ ಕೃಷ್ಣ, ವಾಚಾಳಿ ಹುಡುಗಿ ವಂಶಿಯ ಮಧ್ಯೆ ಅರಳುವ ಪ್ರೀತಿಯ ಕಥಾಹಂದರ ಈ ಧಾರಾವಾಹಿಯಲ್ಲಿದೆ. ಒಳ್ಳೆಯ ಹುಡುಗಿ ವಂಶಿ ಮಾತಿನ ಮಲ್ಲಿ. ನಾಚಿಕೆ ಹುಡುಗ ಕೃಷ್ಣ ಹೆಚ್ಚು ಓದಿದವನಲ್ಲ. ಅಣ್ಣನ ಹೋಟೆಲ್ ನಡೆಸುತ್ತಿರುತ್ತಾನೆ. ವಂಶಕ್ಕೆ ಕೃಷ್ಣನ ನಾಚಿಕೆ ಸ್ವಭಾವವೇ ಇಷ್ಟವಾಗುತ್ತದೆ. ಕೃಷ್ಣನಿಗೂ ನಾಚಿಕೆಯ ನಡುವೆ ಪ್ರೀತಿ ಅರಳುತ್ತದೆ. ಇಬ್ಬರ ಪ್ರೀತಿಗೆ ಅನೇಕ ಸಲ ಅಗ್ನಿಪರೀಕ್ಷೆ ಎದುರಾಗುತ್ತದೆ. ಅಲ್ಲಿಂದ ಕಥೆ ಆರಂಭ.
ಇದರ ಜೊತೆಗೆ ತಂದೆಯ ಮಮತೆಯ ಕಥೆ ಕೂಡ ಇದೆ. ತಂದೆ ದೊರೆಸ್ವಾಮಿಗೆ ತನ್ನ ಮಗಳು ವಂಶಿಯೇ ಪ್ರಪಂಚ. ಮಗಳು ಮದುವೆಯಾಗಿ ದೂರ ಹೋಗುವ ಕಲ್ಪನೆಯೇ ಅವರಿಗೆ ಅಸಹನೀಯ. ಮನೆ ಅಳಿಯನಾಗಲು ಒಪ್ಪುವಂಥ ಹುಡುಗನನ್ನೇ ಮಗಳು ಮದುವೆಯಾಗಲಿ ಎಂಬ ಆಸೆ ಅವರದ್ದು. ಆದರೆ ವಂಶಿಯ ಕನಸು ಬೇರೆ ಕಡೆಗೆ ಸಾಗುತ್ತದೆ.
ವಂಶಿ ಪ್ರೀತಿಯಿಂದ ಕೂಡಿದ ಅವಿಭಕ್ತ ಕುಟುಂಬದಲ್ಲಿ ಅಪ್ಪನ ಮನೆಯವರೆಲ್ಲರ ಜೊತೆ ಗಂಡನ ಮನೆಯಲ್ಲಿ ಒಟ್ಟಿಗೇ ಬದುಕುವ ಕನಸು ಹೊತ್ತಿದ್ದಾಳೆ. ಅವಳ ಆಶಯ ಮತ್ತು ಪ್ರೀತಿ ಒಟ್ಟೊಟ್ಟಿಗೆ ಸಾಗಲು ಕಷ್ಟಪಡಬೇಕಾಗಿದೆ. ವಂಶಿ ಕನಸು ನನಸಾಗುತ್ತಾ? ಕೃಷ್ಣ ಮತ್ತು ವಂಶೀಯರ ಪ್ರೀತಿ ಯಶಸ್ವಿಯಾಗುತ್ತಾ ಎನ್ನುವುದೇ ಮುಂದಿನ ಕಥಾಹಂದರ ಎಂದು ಉದಯ ವಾಹಿನಿ.
ಇದನ್ನೂ ಓದಿ: 35 ವರ್ಷಗಳ ಹಿಂದಿನ ಉಪೇಂದ್ರ ಧಾರಾವಾಹಿಯ ಕ್ಲಿಪ್ ವೈರಲ್; ಆಗ ಉಪ್ಪಿ ಹೇಗಿದ್ರು ನೋಡಿ
ನಾಯಕ ಕೃಷ್ಣನ ಪಾತ್ರದಲ್ಲಿ ರೋಹನ್ ಎ. ಅಭಿನಯಿಸುತ್ತಿದ್ದಾರೆ. ನಾಯಕಿ ವಂಶಿ ಪಾತ್ರವನ್ನು ಶಾರದಾ ಪುಂಡಿ ಮಾಡುತ್ತಿದ್ದಾರೆ. ಗಿರಿಜಾ ಲೋಕೇಶ್, ಹಂಸ, ವಿಜಯ್, ಹನುಮಂತೇಗೌಡ, ರಜಿನಿ ಟಿ.ಡಿ, ಸಿದ್ದಾರ್ಥ್ ಮಾಧ್ಯಮಿಕ, ಸಿಂಧೂ ಪಿ, ಸಂದೀಪ್ ಎಸ್.ಆರ್, ಪುಷ್ಪ ಅನಿಲ್ ಕುಮಾರ್, ಸುಕೃತಾ ನಾಗ್ ನಟರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.