How Often Should Couples Have Physical Intimacy ಮಕ್ಕಳಿಗಾಗಿ ಪ್ರಯತ್ನಿಸುತ್ತಿರುವ ಅನೇಕ ದಂಪತಿಗಳಲ್ಲಿ ಸಾಮಾನ್ಯವಾದ ಪ್ರಶ್ನೆ ಪ್ರತಿದಿನ ಸೆ*ಕ್ಸ್ ಮಾಡಿದರೆ ಗರ್ಭಧಾರಣೆ ಸಾಧ್ಯತೆ ಕಡಿಮೆಯಾಗುತ್ತದೆಯಾ? ಅದಕ್ಕೆ ಉತ್ತರ ಇಲ್ಲಿದೆ.

ವೈದ್ಯಕೀಯ ಮಾಹಿತಿಯ ಪ್ರಕಾರ, ಪ್ರತಿದಿನ ಲೈಂಗಿಕ ಸಂಪರ್ಕ ಹೊಂದಿದರೂ ಗರ್ಭಧಾರಣೆಗೆ ಹಾನಿಯಿಲ್ಲ. ಆದರೆ ಅದರಿಂದ ಸಾಧ್ಯತೆ ಹೆಚ್ಚಾಗುತ್ತದೆ ಎನ್ನುವುದೂ ಸತ್ಯವಲ್ಲ. ತಜ್ಞರ ಸಲಹೆ ಪ್ರಕಾರ ಮಹಿಳೆಯ ಮಾಸಿಕ ಚಕ್ರದ ಅವಧಿ ಮೇಲೆ ನಿರ್ಧಾರವಾಗುತ್ತದೆ, ಪ್ರತಿ 2 ಅಥವಾ 3 ದಿನಕ್ಕೊಮ್ಮೆ ಸೆ*ಕ್ಸ್ ಮಾಡುವುದು ಸಾಕು. ಇದರಿಂದ ಅಂಡೋತ್ಸರ್ಗ (ovulation) ಸಮಯದಲ್ಲಿ ಫಾಲೋಪಿಯನ್ ಟ್ಯೂಬ್ನಲ್ಲಿ ಸ್ಪರ್ಮ್ ಈಗಾಗಲೇ ಇರುವ ಸಾಧ್ಯತೆ ಹೆಚ್ಚಾಗುತ್ತದೆ.

ಸಾಮಾನ್ಯವಾಗಿ ಇಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಪರಿಣಾಮ ಇರಬಹುದು, ಪುರುಷನಲ್ಲಿ ಸ್ಪರ್ಮ್ ಕೌಂಟ್ ಕಡಿಮೆ ಇದ್ದರೆ, ಪ್ರತಿದಿನ ಸ್ಖಲನದಿಂದ ಸ್ಪರ್ಮ್ ಪ್ರಮಾಣ ಕಡಿಮೆಯಾಗಬಹುದು. ಸ್ಪರ್ಮ್ ಪುನಃ ಉತ್ಪತ್ತಿಯಾಗಲು ಸಮಯ ಬೇಕಾಗುತ್ತದೆ. ಆದರೂ ಇದು ಸಾಮಾನ್ಯ ದಂಪತಿಗಳಲ್ಲಿ ದೊಡ್ಡ ಸಮಸ್ಯೆಯಾಗುವುದಿಲ್ಲ.

ಕೆಲವರು ಸ್ಪರ್ಮ್ “ಸೇವ್” ಮಾಡಿಕೊಳ್ಳಬೇಕು ಎಂದು ಭಾವಿಸುತ್ತಾರೆ. ಆದರೆ ವೈದ್ಯರು ಹೇಳುವದೇನು ಎಂದರೆ ನಿಖರ ದಿನಕ್ಕೆ ಕಾಯುವುದು ಅವಶ್ಯಕವಿಲ್ಲ, ತುಂಬಾ ಸಮಯ ಗ್ಯಾಪ್ ಕೊಟ್ಟರೂ ಒಳ್ಳೆಯದಲ್ಲ, ಆರೋಗ್ಯಕರ ಸ್ಪರ್ಮ್ಗಾಗಿ ನಿಯಮಿತ ಸಂಪರ್ಕ ಮುಖ್ಯ

ಪ್ರತಿದಿನ ಸೆ*ಕ್ಸ್ ಮಾಡಬೇಕು ಎಂಬ ಒತ್ತಡ ಕೂಡ ಗರ್ಭಧಾರಣೆಗೆ ಅಡ್ಡಿಯಾಗಬಹುದು. ಸಂತೋಷದಿಂದ, ಒತ್ತಡವಿಲ್ಲದೆ ಸಹಜವಾಗಿ ಸಂಪರ್ಕ ಹೊಂದುವುದು ಉತ್ತಮ.

Source link
ಪ್ರೆಗ್ನೆಂಟ್ ಆಗಲು ವಾರಕ್ಕೆ ಎಷ್ಟು ಬಾರಿ ಲೈಂಗಿಕ ಕ್ರಿಯೆ ಮಾಡಬೇಕು ಗೊತ್ತಾ ?