Rashmika-Vijay Wedding; ವಿಜಯ್ ದೇವರಕೊಂಡ ಅತ್ತೆ-ಮಾವ ಯಾರು? ಕೊಡಗಿನ ಬೆಡಗಿಯ ಕಂಪ್ಲೀಟ್ ಡೀಟೇಲ್ಸ್, ನೋಡಿ! | All About Vijay Deverakonda Soon To Be In Laws Rashmika Mandanna Family Amid Their Udaipur Wedding

Rashmika-Vijay Wedding; ವಿಜಯ್ ದೇವರಕೊಂಡ ಅತ್ತೆ-ಮಾವ ಯಾರು? ಕೊಡಗಿನ ಬೆಡಗಿಯ ಕಂಪ್ಲೀಟ್ ಡೀಟೇಲ್ಸ್, ನೋಡಿ! | All About Vijay Deverakonda Soon To Be In Laws Rashmika Mandanna Family Amid Their Udaipur Wedding



Rashmika-Vijay Wedding; ವಿಜಯ್ ದೇವರಕೊಂಡ ಅತ್ತೆ-ಮಾವ ಯಾರು? ಕೊಡಗಿನ ಬೆಡಗಿಯ ಕಂಪ್ಲೀಟ್ ಡೀಟೇಲ್ಸ್, ನೋಡಿ! | All About Vijay Deverakonda Soon To Be In Laws Rashmika Mandanna Family Amid Their Udaipur Wedding

ಮದುವೆಯ ದಿನ ಈ ಜೋಡಿ ಎರಡು ಸಂಪ್ರದಾಯಗಳನ್ನೂ ಗೌರವಿಸಲಿದೆ. ಕೊಡಗಿನ ಹೆಣ್ಣಾಗಿ ರಶ್ಮಿಕಾ ಅವರ ‘ಕೊಡವ’ ಸಂಪ್ರದಾಯ ಹಾಗೂ ವಿಜಯ್ ಅವರ ‘ತೆಲುಗು’ ಸಂಪ್ರದಾಯದಂತೆ ಮದುವೆಯ ವಿಧಿವಿಧಾನಗಳು ನಡೆಯಲಿವೆ. ರಾಜಸ್ಥಾನದಲ್ಲಿ ಮದುವೆ ಮುಗಿದ ನಂತರ ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಅದ್ಧೂರಿ ರಿಸೆಪ್ಷನ್ ಇದೆ.

ರಶ್ಮಿಕಾ-ವಿಜಯ್ ಕಲ್ಯಾಣ, ಕುಟುಂಬದ ಬಗ್ಗೆ ನಿಮಗೇನು ಗೊತ್ತು?

ದಕ್ಷಿಣ ಭಾರತದ ಚಿತ್ರರಂಗದ ಮೋಸ್ಟ್ ರೋಮ್ಯಾಂಟಿಕ್ ಜೋಡಿಗಳಾದ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Deverakonda) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ಈಗ ಹಳೆ ಸುದ್ದಿಯಾದರೂ, ಅವರ ಮದುವೆಯ ಪ್ರತಿಯೊಂದು ಅಪ್‌ಡೇಟ್ ಪಡೆಯಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ವರ್ಷಗಳ ಕಾಲ ತಮ್ಮ ಪ್ರೇಮ ಸಂಬಂಧವನ್ನು ರಹಸ್ಯವಾಗಿಟ್ಟಿದ್ದ ಈ ಜೋಡಿ, ಇದೀಗ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ಅದ್ದೂರಿಯಾಗಿ ವಿವಾಹವಾಗುತ್ತಿದ್ದಾರೆ. ಈ ಸಂಭ್ರಮದ ನಡುವೆ, ವಿಜಯ್ ದೇವರಕೊಂಡ ಅವರ ಅತ್ತೆ-ಮಾವ ಯಾರು? ರಶ್ಮಿಕಾ ಕುಟುಂಬದ ಹಿನ್ನೆಲೆ ಏನು? ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

ರಶ್ಮಿಕಾ ಮಂದಣ್ಣ ಅವರ ಬೆನ್ನೆಲುಬು ಈ ಕುಟುಂಬ!

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರ ತಂದೆ ಮದನ್ ಮಂದಣ್ಣ ಮತ್ತು ತಾಯಿ ಸುಮನ್ ಮಂದಣ್ಣ. ಮದನ್ ಮಂದಣ್ಣ ಅವರು ಕೊಡಗಿನಲ್ಲಿ ಉದ್ಯಮಿಯಾಗಿದ್ದು, ಮಗಳ ಯಶಸ್ಸಿಗೆ ಭದ್ರ ಬುನಾದಿ ಹಾಕಿಕೊಟ್ಟವರು. ಇನ್ನು ತಾಯಿ ಸುಮನ್ ಮಂದಣ್ಣ ಅವರು ರಶ್ಮಿಕಾ ಅವರ ನಿಜವಾದ ‘ಸಪೋರ್ಟ್ ಸಿಸ್ಟಮ್’. ರಶ್ಮಿಕಾ ತಮ್ಮ ಸಿನಿ ಜೀವನದ ಪ್ರತಿಯೊಂದು ಮುಖ್ಯ ನಿರ್ಧಾರವನ್ನೂ ತಾಯಿಯ ಸಲಹೆ ಪಡೆದೇ ತೆಗೆದುಕೊಳ್ಳುತ್ತಾರೆ. ಮಗಳ ವೃತ್ತಿಜೀವನದ ಏರಿಳಿತಗಳಲ್ಲಿ ತಾಯಿ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ. ಇದೀಗ ವಿಜಯ್ ದೇವರಕೊಂಡ ಅವರ ಅತ್ತೆ-ಮಾವನಾಗಿ ಇವರು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ತಂಗಿಯ ಬಗ್ಗೆ ರಶ್ಮಿಕಾಗೆ ಬೇಸರವಿದೆ ಏಕೆ?

ರಶ್ಮಿಕಾ ಅವರಿಗೆ ಶಿಮನ್ ಮಂದಣ್ಣ ಎಂಬ ಮುದ್ದಾದ ತಂಗಿ ಇದ್ದಾರೆ. ವಿಶೇಷವೆಂದರೆ, ರಶ್ಮಿಕಾ ಮತ್ತು ಅವರ ತಂಗಿಯ ನಡುವೆ ಬರೊಬ್ಬರಿ 16 ವರ್ಷಗಳ ವಯಸ್ಸಿನ ವ್ಯತ್ಯಾಸವಿದೆ! ಶಿಮನ್ ಅವರಿಗೆ ಈಗ ಸುಮಾರು 13 ವರ್ಷ ವಯಸ್ಸು. ಒಂದು ಸಂದರ್ಶನದಲ್ಲಿ ರಶ್ಮಿಕಾ ತಮ್ಮ ತಂಗಿಯ ಬಗ್ಗೆ ಭಾವುಕರಾಗಿ ಮಾತನಾಡಿದ್ದರು. “ನನ್ನ ತಂಗಿ ಬೆಳೆಯುವುದನ್ನು ನೋಡಲು ನನಗೆ ಸಾಧ್ಯವಾಗಲಿಲ್ಲ. ಕಳೆದ ಎಂಟು ವರ್ಷಗಳಿಂದ ನಾನು ಕೆಲಸದ ಒತ್ತಡದಲ್ಲಿ ಅವಳಿಂದ ದೂರವಿದ್ದೆ. ಈಗ ಅವಳು ನನ್ನಷ್ಟೇ ಎತ್ತರ ಬೆಳೆದಿದ್ದಾಳೆ, ಅವಳ ಬಾಲ್ಯದ ಆ ಕ್ಷಣಗಳನ್ನು ನಾನು ಮಿಸ್ ಮಾಡಿಕೊಂಡೆ” ಎಂದು ಬೇಸರ ವ್ಯಕ್ತಪಡಿಸಿದ್ದರು.

ಓದಿನಲ್ಲೂ ಈ ಜೋಡಿ ಸೈ!

ನಟನೆ ಮಾತ್ರವಲ್ಲದೆ ಶಿಕ್ಷಣದಲ್ಲೂ ಈ ಜೋಡಿ ಮುಂದಿದೆ. ರಶ್ಮಿಕಾ ಮಂದಣ್ಣ ಕೊಡಗಿನ ಕೂರ್ಗ್ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸೈಕಾಲಜಿ ವಿಷಯಗಳಲ್ಲಿ ಪದವಿ ಪಡೆದಿದ್ದಾರೆ. ಇತ್ತ ವಿಜಯ್ ದೇವರಕೊಂಡ ಪುತ್ತಪರ್ತಿಯ ಸತ್ಯಸಾಯಿ ಹೈಯರ್ ಸೆಕೆಂಡರಿ ಸ್ಕೂಲ್‌ನಲ್ಲಿ ಓದಿದ್ದು, ಹೈದರಾಬಾದ್‌ನ ಬದ್ರುಕಾ ಕಾಲೇಜಿನಲ್ಲಿ ಬಿ.ಕಾಂ ಪದವಿ ಪೂರೈಸಿದ್ದಾರೆ.

ವಯಸ್ಸಿನ ವ್ಯತ್ಯಾಸ ಎಷ್ಟು?

ಅಭಿಮಾನಿಗಳು ಆಗಾಗ ಚರ್ಚಿಸುವ ವಿಷಯವೆಂದರೆ ಅದು ಇವರ ವಯಸ್ಸಿನ ವ್ಯತ್ಯಾಸ. ರಶ್ಮಿಕಾ ಮಂದಣ್ಣ ಏಪ್ರಿಲ್ 5, 1996 ರಂದು ಜನಿಸಿದ್ದು, ಅವರಿಗೆ ಈಗ 29 ವರ್ಷ. ವಿಜಯ್ ದೇವರಕೊಂಡ ಮೇ 9, 1989 ರಂದು ಜನಿಸಿದ್ದು, ಅವರಿಗೆ 36 ವರ್ಷ. ಇಬ್ಬರ ನಡುವೆ 7 ವರ್ಷಗಳ ವಯಸ್ಸಿನ ವ್ಯತ್ಯಾಸವಿದೆ.

ಕೊಡವ ಮತ್ತು ತೆಲುಗು ಸಂಪ್ರದಾಯದ ಮದುವೆ!

ಮದುವೆಯ ದಿನ ಈ ಜೋಡಿ ಎರಡು ಸಂಪ್ರದಾಯಗಳನ್ನೂ ಗೌರವಿಸಲಿದೆ. ಕೊಡಗಿನ ಹೆಣ್ಣಾಗಿ ರಶ್ಮಿಕಾ ಅವರ ‘ಕೊಡವ’ ಸಂಪ್ರದಾಯ ಹಾಗೂ ವಿಜಯ್ ಅವರ ‘ತೆಲುಗು’ ಸಂಪ್ರದಾಯದಂತೆ ಮದುವೆಯ ವಿಧಿವಿಧಾನಗಳು ನಡೆಯಲಿವೆ. ರಾಜಸ್ಥಾನದ ಮದುವೆ ಮುಗಿದ ನಂತರ ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಚಿತ್ರರಂಗದ ಸ್ನೇಹಿತರಿಗಾಗಿ ಅದ್ಧೂರಿ ರಿಸೆಪ್ಷನ್ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಇವರಿಬ್ಬರು ‘ರಣಬಲಿ’ ಎಂಬ ಐತಿಹಾಸಿಕ ಸಿನಿಮಾದಲ್ಲೂ ಒಂದಾಗಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಕೊಡಗಿನ ಅಳಿಯನಾಗಲು ಸಿದ್ಧರಾಗಿರುವ ರೌಡಿ ಸ್ಟಾರ್ ವಿಜಯ್ ಮತ್ತು ರಶ್ಮಿಕಾ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.



Source link

Leave a Reply

Your email address will not be published. Required fields are marked *