ಬಾಗಲಕೋಟೆ, (ಫೆಬ್ರವರಿ 25): ಅಪ್ರಾಪ್ತೆ ಮೇಲೆ ಅಪರಾಧ ಎಸಗಿದ ಆರೋಪದ ಮೇಲೆ ಪೋಕ್ಸೋ ಪ್ರಕರಣದಲ್ಲಿ (ಪೋಕ್ಸೋ ಪ್ರಕರಣ) ಜೈಲು ಪಾಲಾಗಿದ್ದ ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ ‘ಮ್ಯೂಸಿಕ್ ಮೈಲಾರಿ’ಗೆ (ಗಾಯಕ ಸಂಗೀತ ಮೈಲಾರಿ) ಜಾಮೀನು ಸಿಕ್ಕಿದೆ. 2025ರ ಡಿಸೆಂಬರ್ 17ರಂದು ಜೈಲು ಸೇರಿದ್ದ ಮ್ಯೂಸಿಕ್ ಮೈಲಾರಿ ಇಂದು (ಫೆಬ್ರವರಿ 25) ಜಾಮೀನ ಮೇಲೆ ಬಿಡುಗಡೆಯಾಗಿದೆ. ಜೈಲಿನಿಂದ ಆಚೆ ಬರುತ್ತಿದೆಯೇ ಟಿವಿ9ಗೆ ಪ್ರತಿಕ್ರಿಯಿಸಿರುವ ಮೈಲಾರಿ, ಡಾ ಅಂಬೇಡ್ಕರ್ ಅವರ ಸಂವಿಧಾನದೊಳಗೆ ನಾವು ಕಾನೂನಾತ್ಮಕವಾಗಿಯೇ ಹೋರಾಟ ಮಾಡುತ್ತಿದ್ದೇವೆ. ಯಾವುದು ಸರಿ ಯಾವುದು ತಪ್ಪು ಎಂದು ನ್ಯಾಯಾಲಯ ತೀರ್ಮಾನಿಸಿದೆ. ನ್ಯಾಯಾಲಯದ ತೀರ್ಪಿಗೆ,ಕಾನೂನಿಗೆ ನಾನು ತಲೆ ಬಾಗುತ್ತೇನೆ. ಕೋರ್ಟ್ ತೀರ್ಮಾನಕ್ಕೆ ನಾನು ಬದ್ದವಾಗಿರುತ್ತೇನೆ.
ಇನ್ನು ಇದೇ ವೇಳೆ ತಮ್ಮ ಆರ್ಕೆಸ್ಟ್ರಾ ಬಗ್ಗೆ ಮಾತನಾಡಿದ ಮೈಲಾರಿ, ಸದ್ಯಕ್ಕೆ ಏನು ನಿರ್ಧಾರ ಇಲ್ಲ.ಪತ್ನಿಗೆ ಹೆರಿಗೆಯಾಗಿದೆ. ನನ್ನ ತಾಯಿಗೆ ಹುಷಾರಿಲ್ಲ. ಸ್ವಲ್ಪ ಮಾನಸಿಕವಾಗಿ ಬೇಸರವಾಗಿದೆ. ಹೀಗಾಗಿ ಸದ್ಯಕ್ಕೆ ಕಾರ್ಯಕ್ರಮದ ಬಗ್ಗೆ ಯಾವುದೇ ನಿರ್ಧಾರ ಆಯ್ಕೆ. ಸ್ವಲ್ಪ ದಿನ ಆದ ಮೇಲೆ ನೋಡಿ ಎಂದು ಸ್ಪಷ್ಟಪಡಿಸಿದರು.