ಬೀದರ್, ಫೆಬ್ರವರಿ 25: ಜನಸಾಮಾನ್ಯರು ಕರೆಂಟ್ ಬಿಲ್ (ಕರೆಂಟ್ ಬಿಲ್) ಕಟ್ಟುವುದು ತಡವಾದರೆ ಕನೆಕ್ಷನ್ ಕಟ್ ಮಾಡುತ್ತಾರೆ. ಆದರೆ ಬೀದರ್ನ ಬ್ರಿಮ್ಸ್ ಆಸ್ಪತ್ರೆ 1.70 ಕೋಟಿ ರೂ ಜೆಸ್ಕಾಂಗೆ ಹಣ ಕಟ್ಟಿಲ್ಲ. ಹಣ ಕಟ್ಟಿ ಅಂತಾ ನೋಟಿಸ್ ಮೇಲೆ ನೋಟಿಸ್ ಕೊಟ್ಟರು ಬ್ರಿಮ್ಸ್ ಆಡಳಿತ ಮಂಡಳಿ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಜೆಸ್ಕಾಂ ಇಲಾಖೆ ಈ ತಾರತಮ್ಯ ನೀತಿಗೆ ಗಡಿ ಜಿಲ್ಲೆಯ ಬೀದರ್ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
1 ಕೋಟಿ 70 ಲಕ್ಷ 80 ಸಾವಿರ ರೂ ಬಿಲ್ ಬಾಕಿ
ಬೀದರ್ನ ಪ್ರತಿಷ್ಠಿತ ಬ್ರಿಮ್ಸ್ ಆಸ್ಪತ್ರೆಯ ಕರೆಂಟ್ ಬಿಲ್ ಬಾಕಿ ಇಟ್ಟುಕೊಂಡಿರುವ ಮೊತ್ತ ಕೇಳಿದರೆ ಶಾಕ್ ಆಗುವುದು ಗ್ಯಾರಂಟಿ. ಬರೋಬ್ಬರಿ 1 ಕೋಟಿ 70 ಲಕ್ಷ 80 ಸಾವಿರ ರೂ ಕರೆಂಟ್ ಬಿಲ್ ಬಾಕಿ ಇದೆ. ಸುಮಾರು 10 ವರ್ಷದಿಂದ ಕರೆಂಟ್ ಬಿಲ್ ಬಾಕಿ ಇತ್ತು, ಹಣ ಕಟ್ಟಿ ಎಂದು ಜೆಸ್ಕಾಂನವರ ನೋಟಿಸ್ ಕೂಡ ಕರೆಂಟ್ ಬಿಲ್ ಕಟ್ಟುತ್ತಿಲ್ಲ.
ಇದನ್ನೂ ಓದಿ: ಫುಟ್ಪಾತ್ ಮೇಲೆಯೇ ಟ್ರಾನ್ಸ್ಫಾರ್ಮರ್ಗಳ ಸ್ಥಾಪನೆ; ಜನರ ಜೀವದ ಜೊತೆ ಆಟ ಆಡುತ್ತಿದೆಯಾ ಬೆಸ್ಕಾಂ?
ಇನ್ನು ಜೆಸ್ಕಾಂನವರು ಹೆಸರಿಗೆ ಮಾತ್ರ ನೋಟಿಸ್ ಕೊಟ್ಟು ನಮಗೂ ಆ ಹಣಕ್ಕೂ ಸಂಬಂಧವೇ ಇಲ್ಲದವರಂತೆ ವರ್ತಿಸುತ್ತಿದ್ದಾರೆ. ಜನ ಸಾಮಾನ್ಯರು ಒಂದು ತಿಂಗಳ ಕರೆಂಟ್ ಬಿಲ್ ಕಟ್ಟದೆ ಹೋದರೆ ಅವರ ಮನೆಯ ಕರೆಂಟ್ ಕಟ್ ಮಾಡುತ್ತಾರೆ, ಆದರೆ ಒಮ್ಮೆ ಬ್ರಿಮ್ಸ್, ಜೆಸ್ಕಾಂಗೆ ಕರೆಂಟ್ ಬಿಲ್ ಕಟ್ಟಿಲ್ಲ. ಹಣ ವಸೂಲಿ ಮಾಡುವಂತೆ ಅಂಬ್ರೇಷ್ ಕೆಂಚಾ ಎಂಬ ನಿವಾಸಿ ಜೆಸ್ಕಾಂಗೆ ಒತ್ತಾಯಿಸಿದ್ದಾರೆ.
ಕೋಟ್ಯಂತರ ರೂ ವಿದ್ಯುತ್ ಬಿಲ್ ಬಾಕಿ ಉಳಿದಿದ್ದು, ವಸೂಲಿಗಾಗಿ ಜೆಸ್ಕಾಂ ಸರಣಿ ನೋಟಿಸ್ ನೀಡಿದೆ. ಆದರೂ ಬಿಲ್ ಮೊತ್ತ ಪಾವತಿಯಾಗದಿರುವುದು ಜೆಸ್ಕಾಂ ಆಡಳಿತವನ್ನು ಹೈರಾಣಾಗಿಸಿದೆ. ಇನ್ನೊಂದೆಡೆ ಸರ್ಕಾರಿ ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆ ವದಂತಿ ಬಗ್ಗೆ ಬೆಸ್ಕಾಂ ಎಂಡಿ ಸ್ಪಷ್ಟನೆ
ಜನರು ಕೂಡ ಜೆಸ್ಕಾಂ ಇಲಾಖೆ ಇಬ್ಬಗೆ ನೀತಿಯಿಂದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, ಬಾಕಿ ಮೊತ್ತವನ್ನು ವಸೂಲಿ ಮಾಡಿ ಸರಕಾರದ ಬೊಕ್ಕಸವನ್ನು ತುಂಬಿಸಿ ಎಂದು ಜನರು ಜೆಸ್ಕಾಂ ಇಲಾಖೆಯ ಅಧಿಕಾರಿಗಳು ಮನವಿ ಮಾಡುತ್ತಿದ್ದಾರೆ. ಲೋಡ್ ಶೆಡ್ಡಿಂಗ್ ನಿಂದ ಜನತೆ ಮತ್ತು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಜೆಸ್ಕಾಂಗೆ ಬಾಕಿ ಬರಬೇಕಿರುವ ಹಣ ಪಾವತಿಯಾದರೆ ವಿದ್ಯುತ್ ಖರೀದಿಗೆ ಅನುಕೂಲ. ಈಗಲಾದರೂ ಇತ್ತ ಗಮನ ಹರಿಸಿ ಕ್ರಮಕೈಗೊಳ್ಳಬೇಕು ಎಂದು ಜನರು ಕಾಣುತ್ತಿದ್ದಾರೆ.
ಮಾತನಾಡಲು ಅಧಿಕಾರಿಗಳು ಹಿಂದೇಟು
ಜೆಸ್ಕಾಂಗೆ ಈಗ ಬರಬೇಕಿರುವ ಹಣದಲ್ಲಿ ಸದ್ಯಕ್ಕೆ ಅರ್ಧ ಹಣ ಪಾವತಿ ಆದರೂ ಸಾಕು ಎನ್ನಲಾಗುತ್ತಿದೆ. ಇದರಿಂದ ವಿದ್ಯುತ್ ಖರೀದಿ ಮತ್ತು ಸಮರ್ಪಕ ಪೂರೈಕೆಗೆ ಅನುಕೂಲವಾಗುತ್ತದೆ. ಈ ಬಗ್ಗೆ ಜೆಸ್ಕಾಂ ಅಧಿಕಾರಿಗಳು ಮಾತನಾಡಲು ಹಿಂದೇಟು ಹಾಕಿದ್ದಾರೆ. ಒಟ್ಟಿನಲ್ಲಿ ಬ್ರಿಮ್ಸ್ ಆಸ್ಪತ್ರೆಯಿಂದ ಬರಬೇಕಾಗಿರುವ ಬಹಳಷ್ಟು ರೂ ಹಣವನ್ನ ಬ್ರಿಮ್ಸ್, ಜೆಸ್ಕಾಂಗೆ ಪಾವತಿ ಮಾಡಿದರೆ ಎಲ್ಲರಿಗೂ ಒಳ್ಳೆಯದಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.