Headlines

ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ ‘ಸಿದ್ಧ’ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; ‘ಬಂಡೆ’ ಸುತ್ತ ಚಕ್ರವ್ಯೂಹ! | Karnataka Congress Internal War Siddaramaiah Camp Vs Dk Shivakumar Kpcc President Row Sat

ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ ‘ಸಿದ್ಧ’ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; ‘ಬಂಡೆ’ ಸುತ್ತ ಚಕ್ರವ್ಯೂಹ! | Karnataka Congress Internal War Siddaramaiah Camp Vs Dk Shivakumar Kpcc President Row Sat


ಕರ್ನಾಟಕ ರಾಜಕಾರಣದ ಪಡಸಾಲೆಗಳಲ್ಲಿ ಈಗ ‘ಅಗೋಚರ ಆಟ’ವೊಂದು ಶುರುವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಶೀತಲ ಸಮರ ಈಗ ಹೊಸ ತಿರುವು ಪಡೆದುಕೊಂಡಿದೆ. ಕೆಪಿಸಿಸಿ ಅಧ್ಯಕ್ಷ ಪಟ್ಟದ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ ಬಣ, ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯಕ್ಕೆ ಅಡ್ಡಗಾಲು ಹಾಕಲು ‘ದಲಿತ ಸಿಎಂ’ ಮತ್ತು ‘ಅಹಿಂದ’ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ.

ಡಿಕೆಶಿ ಸುತ್ತ ಸಿದ್ದು ಸೇನೆಯ ತ್ರಿವಳಿ ಚಕ್ರವ್ಯೂಹ!

ಮುಂದಿನ ಮುಖ್ಯಮಂತ್ರಿಯಾಗುವ ಹಂಬಲದಲ್ಲಿರುವ ‘ಕನಕಪುರ ಬಂಡೆ’ ಡಿ.ಕೆ. ಶಿವಕುಮಾರ್ ಅವರಿಗೆ ಸದ್ಯಕ್ಕೆ ಎರಡೆರಡು ಸಂಕಷ್ಟಗಳು ಎದುರಾಗಿವೆ. ಒಂದೆಡೆ ಅವರು ಕಣ್ಣಿಟ್ಟಿರುವ ಸಿಎಂ ಪಟ್ಟಕ್ಕೆ ಬೇಲಿ ಹಾಕಲು ಸಿದ್ದರಾಮಯ್ಯ ಬಣ ‘ದಲಿತ ಸಿಎಂ’ ದಾಳವನ್ನು ಉರುಳಿಸಿದೆ. ಡಾ. ಜಿ. ಪರಮೇಶ್ವರ ಅಥವಾ ಹೆಚ್.ಸಿ. ಮಹದೇವಪ್ಪ ಅವರಂತಹ ಹಿರಿಯ ನಾಯಕರ ಹೆಸರನ್ನು ಮುನ್ನೆಲೆಗೆ ತರುವ ಮೂಲಕ ಡಿಕೆಶಿ ಹಾದಿಯನ್ನು ರೋಧಿಸಲಾಗುತ್ತಿದೆ. ಇನ್ನೊಂದೆಡೆ, ಡಿಕೆಶಿ ಸದ್ಯ ಅಲಂಕರಿಸಿರುವ ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ಕಿತ್ತುಕೊಳ್ಳಲು ಸದ್ದಿಲ್ಲದೆ ‘ಆಪರೇಷನ್ ಅಧ್ಯಕ್ಷ’ ಶುರುವಾಗಿದೆ.

ಸತೀಶ್ ಜಾರಕಿಹೊಳಿ ಎಂಬ ‘ಸಿದ್ಧ’ ವಾರಸುದಾರ!

ಈ ಇಡೀ ಚಕ್ರವ್ಯೂಹದ ಕೇಂದ್ರಬಿಂದುವಾಗಿ ಕಾಣಿಸುತ್ತಿರುವುದು ಸಚಿವ ಸತೀಶ್ ಜಾರಕಿಹೊಳಿ. ಸಿದ್ದರಾಮಯ್ಯ ಅವರ ರಾಜಕೀಯ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ಸಚಿವ ಕೆ.ಎನ್. ರಾಜಣ್ಣ ಈಗಾಗಲೇ ಬಹಿರಂಗವಾಗಿಯೇ ಉತ್ತರಿಸಿದ್ದಾರೆ. ‘ಸತೀಶ್ ಜಾರಕಿಹೊಳಿ ಅವರೇ ಸಿದ್ದರಾಮಯ್ಯ ಅವರ ಅಸಲಿ ವಾರಸುದಾರ’ ಎಂಬ ಹೇಳಿಕೆಯ ಮೂಲಕ ಡಿಕೆಶಿ ಪಾಳಯಕ್ಕೆ ನೇರ ಸವಾಲು ಹಾಕಲಾಗಿದೆ. ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಜಾರಕಿಹೊಳಿಯವರನ್ನು ತರುವ ಮೂಲಕ ಅಹಿಂದ ಮತಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳುವುದು ಸಿದ್ದು ಬಣದ ಮಾಸ್ಟರ್ ಪ್ಲಾನ್ ಆಗಿದೆ.

ಪಟ್ಟದ ಬುಡದಲ್ಲೇ ಬಡಬಾಗ್ನಿ ಸ್ಫೋಟ!

ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಈ ಪಟ್ಟದಾಟ ಈಗ ಧಗಧಗಿಸುತ್ತಿದೆ. ಸತೀಶ್ ಜಾರಕಿಹೊಳಿಯವರನ್ನು ‘ಸಾಹುಕಾರ’ ಎಂದು ಕರೆಯುವ ಅವರ ಅಭಿಮಾನಿಗಳು ಮತ್ತು ಸಿದ್ದು ಬೆಂಬಲಿಗರು ಈಗಲೇ ತೆರೆಯ ಮರೆಯಲ್ಲಿ ಲಾಬಿ ಶುರು ಮಾಡಿದ್ದಾರೆ. ಇದು ಕೇವಲ ಒಂದು ಹುದ್ದೆಯ ಬದಲಾವಣೆ ಅಲ್ಲ, ಬದಲಾಗಿ 2028ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಪಕ್ಷದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ರಣತಂತ್ರ.

ಡಿಕೆಶಿ ಮರ್ಮ ಸಂದೇಶ: ಹೋರಾಟಗಾರನಿಗೆ ಸೋಲಿನ ಭಯ ಇಲ್ಲ

ಸಿದ್ದು ಸೇನೆಯ ಈ ಸರಣಿ ದಾಳಿಗಳಿಂದ ಎದೆಗುಂದದ ಡಿ.ಕೆ. ಶಿವಕುಮಾರ್, ತಮ್ಮದೇ ಶೈಲಿಯಲ್ಲಿ ಮರ್ಮ ಸಂದೇಶ ರವಾನಿಸಿದ್ದಾರೆ. “ಹೋರಾಟಗಾರನಿಗೆ ಸೋಲಿನ ಭಯ ಇಲ್ಲ” ಎಂದು ಹೇಳುವ ಮೂಲಕ ತಾನು ಸಿದ್ಧಪಡಿಸಿರುವ ಪ್ರತಿವ್ಯೂಹದ ಬಗ್ಗೆ ಸುಳಿವು ನೀಡಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ತಮಗಿರುವ ಪ್ರಭಾವವನ್ನು ಬಳಸಿ ಈ ಚಕ್ರವ್ಯೂಹವನ್ನು ಭೇದಿಸಲು ಬಂಡೆ ಸಿದ್ಧವಾಗಿದೆ.

ಶಿವ, ಪರಮೇಶ್ವರ, ಮಹಾದೇವ.. ರಾಜತಂತ್ರದ ರಹಸ್ಯ!

ಸಿದ್ದರಾಮಯ್ಯ ಬಣವು ಡಿ.ಕೆ. ಶಿವಕುಮಾರ್ ಅವರನ್ನು ಕಟ್ಟಿಹಾಕಲು ದಲಿತ ಮತ್ತು ಹಿಂದುಳಿದ ವರ್ಗಗಳ ನಾಯಕರನ್ನು ಒಗ್ಗೂಡಿಸುತ್ತಿದೆ. ಈ ರಾಜತಂತ್ರದ ಹಿಂದೆ ಸಪ್ತಸಾಗರದಾಚೆ ನಡೆದ ವಿದೇಶ ಪ್ರವಾಸದ ರಹಸ್ಯಗಳೂ ಇವೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಸ್ತ ಪಾಳೆಯದ ಈ ಅಂತರ್ಯುದ್ಧ ಯಾವ ಸ್ವರೂಪ ಪಡೆದುಕೊಳ್ಳಲಿದೆ ಮತ್ತು ಹೈಕಮಾಂಡ್ ಯಾರ ಕೈ ಹಿಡಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.



Source link

Leave a Reply

Your email address will not be published. Required fields are marked *