ರಶ್ಮಿಕಾಗೆ ವಾರ್ನಿಂಗ್ ಮಾಡಿದ್ದ ಅತ್ತೆ.. ಅದೊಂದು ಕಂಡೀಷನ್‌ ಒಪ್ಪಿಯೇ ವಿಜಯ್ ಮನೆ ಸೇರಲು ಓಕೆ ಎಂದಿರೋ ರಶ್ಮಿಕಾ ಮಂದಣ್ಣ! | Vijay Deverakonda Mother A Condition For Rashmika Mandanna Before Marriage A Warning To The Future Daughter In Law

ರಶ್ಮಿಕಾಗೆ ವಾರ್ನಿಂಗ್ ಮಾಡಿದ್ದ ಅತ್ತೆ.. ಅದೊಂದು ಕಂಡೀಷನ್‌ ಒಪ್ಪಿಯೇ ವಿಜಯ್ ಮನೆ ಸೇರಲು ಓಕೆ ಎಂದಿರೋ ರಶ್ಮಿಕಾ ಮಂದಣ್ಣ! | Vijay Deverakonda Mother A Condition For Rashmika Mandanna Before Marriage A Warning To The Future Daughter In Law



ರಶ್ಮಿಕಾಗೆ ವಾರ್ನಿಂಗ್ ಮಾಡಿದ್ದ ಅತ್ತೆ.. ಅದೊಂದು ಕಂಡೀಷನ್‌ ಒಪ್ಪಿಯೇ ವಿಜಯ್ ಮನೆ ಸೇರಲು ಓಕೆ ಎಂದಿರೋ ರಶ್ಮಿಕಾ ಮಂದಣ್ಣ! | Vijay Deverakonda Mother A Condition For Rashmika Mandanna Before Marriage A Warning To The Future Daughter In Law

ಈ ಮಾತುಗಳನ್ನು ಕೇಳಿದ ಅಭಿಮಾನಿಗಳು, ಇದು ನೇರವಾಗಿ ರಶ್ಮಿಕಾ ಮಂದಣ್ಣಗೆ ನೀಡಿದ ಸೂಚನೆ ಅಥವಾ ವಾರ್ನಿಂಗ್ ಎಂದು ವಿಶ್ಲೇಷಿಸುತ್ತಿದ್ದಾರೆ. ಆದರೆ, ಅತ್ತೆ ಹೇಳಿದ ಈ ‘ಪ್ರೀತಿಯ ಕಂಡೀಷನ್’ಗೆ ರಶ್ಮಿಕಾ ಈಗಾಗಲೇ ಫುಲ್ ಮಾರ್ಕ್ಸ್ ಪಡೆದಿದ್ದಾರೆ ಎನ್ನಲಾಗುತ್ತಿದೆ. ಮುಂದೇನು,,?

ರಶ್ಮಿಕಾಗೆ ಅತ್ತೆಯ ಕಂಡೀಷನ್!

ಸೌತ್ ಸಿನಿಮಾರಂಗದ ಮೋಸ್ಟ್ ರೋಮ್ಯಾಂಟಿಕ್ ಹಾಗೂ ಹಾಟ್ ಜೋಡಿ ಎನಿಸಿಕೊಂಡಿರುವ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಮತ್ತು ‘ರೌಡಿ ಸ್ಟಾರ್’ ವಿಜಯ್ ದೇವರಕೊಂಡ ಮದುವೆ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಹಲ್‌ಚಲ್ ಸೃಷ್ಟಿಸಿದೆ. ಇವರಿಬ್ಬರ ಕೆಮಿಸ್ಟ್ರಿ ‘ಗೀತಾ ಗೋವಿಂದಂ’ ಚಿತ್ರದಿಂದಲೇ ಶುರುವಾಗಿ, ಈಗ ಹಸೆಮಣೆ ಏರುವ ಹಂತಕ್ಕೆ ಬಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈ ಅದ್ಧೂರಿ ವಿವಾಹಕ್ಕೂ ಮುನ್ನವೇ ವಿಜಯ್ ದೇವರಕೊಂಡ ತಾಯಿ ಮಾಧವಿ ಅವರು ಭಾವಿ ಸೊಸೆ ರಶ್ಮಿಕಾಗೆ ಒಂದು ಬಿಗ್ ಕಂಡೀಷನ್ ಹಾಕಿದ್ದಾರೆ ಎಂಬ ಚರ್ಚೆ ಈಗ ಟಾಲಿವುಡ್ ಅಂಗಳದಲ್ಲಿ ಗುಸುಗುಸು ಎನ್ನಿಸುತ್ತಿದೆ!

ಅಷ್ಟಕ್ಕೂ ಅತ್ತೆ ಹಾಕಿದ ಆ ಕಂಡೀಷನ್ ಏನು?

ಮಗನ ಮದುವೆ ವಿಚಾರ ಬಂದಾಗ ತಾಯಿ ಮಾಧವಿ ಅವರು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ವೈರಲ್ ಆಗಿರುವ ಒಂದು ಹಳೆಯ ವಿಡಿಯೋದಲ್ಲಿ ಮಾಧವಿ ಅವರು ತಮ್ಮ ಮನೆಗೆ ಬರುವ ಸೊಸೆ ಹೇಗಿರಬೇಕು ಎಂಬ ಬಗ್ಗೆ ಮಾತನಾಡಿದ್ದಾರೆ. “ನನಗೆ ಜಾತಿ, ಮತ ಅಥವಾ ಧರ್ಮ ಮುಖ್ಯವಲ್ಲ. ಆದರೆ ನನ್ನ ಮಗನ ವೃತ್ತಿಜೀವನ, ಅವನ ಕೆಲಸದ ಒತ್ತಡ ಮತ್ತು ಜೀವನಶೈಲಿಯನ್ನು ಅರ್ಥಮಾಡಿಕೊಳ್ಳುವ ಗುಣ ಆಕೆಗೆ ಇರಬೇಕು. ನಮ್ಮ ಕುಟುಂಬವನ್ನು ಯಾವುದೇ ಷರತ್ತುಗಳಿಲ್ಲದೆ ಪ್ರೀತಿಸುವ ದೊಡ್ಡ ಗುಣ ಸೊಸೆಯಾಗುವವಳಿಗೆ ಇರಬೇಕು. ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ಅವಳ ಮೇಲಿರುತ್ತದೆ” ಎಂದು ಅವರು ತಿಳಿಸಿದ್ದಾರೆ.

ರಶ್ಮಿಕಾ ಮಂದಣ್ಣಗೆ ಇದು ಅನ್ವಯಿಸುತ್ತದೆಯೇ?

ಈ ಮಾತುಗಳನ್ನು ಕೇಳಿದ ಅಭಿಮಾನಿಗಳು, ಇದು ನೇರವಾಗಿ ರಶ್ಮಿಕಾ ಮಂದಣ್ಣಗೆ ನೀಡಿದ ಸೂಚನೆ ಅಥವಾ ವಾರ್ನಿಂಗ್ ಎಂದು ವಿಶ್ಲೇಷಿಸುತ್ತಿದ್ದಾರೆ. ಆದರೆ, ಅತ್ತೆ ಹೇಳಿದ ಈ ‘ಪ್ರೀತಿಯ ಕಂಡೀಷನ್’ಗೆ ರಶ್ಮಿಕಾ ಈಗಾಗಲೇ ಫುಲ್ ಮಾರ್ಕ್ಸ್ ಪಡೆದಿದ್ದಾರೆ ಎನ್ನಲಾಗುತ್ತಿದೆ. ಏಕೆಂದರೆ, ರಶ್ಮಿಕಾ ಹಲವು ಬಾರಿ ವಿಜಯ್ ಕುಟುಂಬದ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ವಿಜಯ್ ತಾಯಿ ಮತ್ತು ತಂದೆಯೊಂದಿಗೆ ಆಪ್ತವಾಗಿ ಕಾಲ ಕಳೆದಿದ್ದಾರೆ. ಆ ಫೋಟೋಗಳು ಈ ಹಿಂದೆ ಸಖತ್ ವೈರಲ್ ಆಗಿದ್ದವು. ವಿಜಯ್ ದೇವರಕೊಂಡ ತಾಯಿ ಮಾಧವಿ ಅವರ ಮೇಲೆ ರಶ್ಮಿಕಾಗೆ ಅಪಾರ ಗೌರವವಿದ್ದು, ಈಗಾಗಲೇ ಕುಟುಂಬದ ಸದಸ್ಯೆಯಂತೆ ಅವರು ಬೆರೆತುಹೋಗಿದ್ದಾರೆ.

‘ವಿರೋಶ್’ ಮದುವೆಗೆ ಅಭಿಮಾನಿಗಳ ಕೌಂಟ್‌ಡೌನ್!

ವಿಜಯ್ ಮತ್ತು ರಶ್ಮಿಕಾ ಅಭಿಮಾನಿಗಳು ಈ ಜೋಡಿಯನ್ನು ‘ವಿರೋಶ್’ ಎಂದು ಕರೆಯುತ್ತಾ, ಅವರು ಯಾವಾಗ ಅಧಿಕೃತವಾಗಿ ಮದುವೆ ಸುದ್ದಿಯನ್ನು ತಿಳಿಸುತ್ತಾರೆ ಎಂದು ಕಾಯುತ್ತಿದ್ದಾರೆ. ಸದ್ಯಕ್ಕೆ ರಾಜಸ್ಥಾನದ ಉದಯಪುರದಲ್ಲಿ ಮದುವೆಯ ಸಿದ್ಧತೆಗಳು ಗುಟ್ಟಾಗಿ ನಡೆಯುತ್ತಿವೆ ಎಂಬ ವರದಿಗಳಿದ್ದರೂ, ಜೋಡಿ ಮಾತ್ರ ಈ ಬಗ್ಗೆ ತುಟಿಪಿಟಕ್ ಎನ್ನುತ್ತಿಲ್ಲ.

ಒಟ್ಟಿನಲ್ಲಿ, ‘ಗೀತಾ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳಲ್ಲಿ ಬೆಳ್ಳಿತೆರೆಯಲ್ಲಿ ಮ್ಯಾಜಿಕ್ ಮಾಡಿದ್ದ ಈ ಜೋಡಿ, ನಿಜ ಜೀವನದಲ್ಲೂ ಒಂದಾಗುತ್ತಿರುವುದು ಅಭಿಮಾನಿಗಳಿಗೆ ಹಬ್ಬದ ಸಂಭ್ರಮ ತಂದಿದೆ. ಅತ್ತೆಯ ಈ ಪ್ರೀತಿಯ ಷರತ್ತು ಪೂರೈಸಿ, ಕೊಡಗಿನ ಬೆಡಗಿ ಹೈದರಾಬಾದ್‌ನ ರೌಡಿ ಮನೆಯ ಸೊಸೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಮದುವೆಯ ಅಧಿಕೃತ ಘೋಷಣೆಗಾಗಿ ಇಡೀ ಸೌತ್ ಇಂಡಿಯಾ ಕಾಯುತ್ತಿದೆ!



Source link

Leave a Reply

Your email address will not be published. Required fields are marked *