Headlines

Bhagyalakshmi: ಕೊನೆಗೂ ಹೀಗೆ ಆಗೋಯ್ತಾ? ಆದಿ ಬಿಟ್ಟು ತಾಂಡವ್​ ಜೊತೆಗೇ ಬಂದುಬಿಟ್ಟಳಾ ಭಾಗ್ಯ?

Bhagyalakshmi: ಕೊನೆಗೂ ಹೀಗೆ ಆಗೋಯ್ತಾ? ಆದಿ ಬಿಟ್ಟು ತಾಂಡವ್​ ಜೊತೆಗೇ ಬಂದುಬಿಟ್ಟಳಾ ಭಾಗ್ಯ?

Bhagyalakshmi: ಕೊನೆಗೂ ಹೀಗೆ ಆಗೋಯ್ತಾ? ಆದಿ ಬಿಟ್ಟು ತಾಂಡವ್​ ಜೊತೆಗೇ ಬಂದುಬಿಟ್ಟಳಾ ಭಾಗ್ಯ?
ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ತಾಂಡವ್ ಬದಲಾದವನಂತೆ ಮರಳಿ ಬಂದಿದ್ದು, ಭಾಗ್ಯಳನ್ನು ಕ್ಷಮಿಸುವಂತೆ ಕೇಳುತ್ತಿದ್ದಾನೆ. ಭಾಗ್ಯ ಆಕಸ್ಮಿಕವಾಗಿ ತಾಂಡವ್‌ಗೆ ಸಹಾಯ ಮಾಡಿದ್ದು ಆದಿಗೆ ಆಘಾತ ನೀಡಿದೆ. ಇವರಿಬ್ಬರು ಒಂದಾಗುತ್ತಾರೆ ಎಂಬ ಗುಂಡಣ್ಣನ ಪೋಸ್ಟ್ ಅಭಿಮಾನಿಗಳಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.
ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ (Bhagyalakshmi Serial) ಸದ್ಯ ಆದಿ ಮತ್ತು ಭಾಗ್ಯ ಒಂದಾಗುವ ಹೊತ್ತಿನಲ್ಲಿಯೇ ತಾಂಡವ್​ ಎಂಟ್ರಿ ಕೊಟ್ಟಿದ್ದಾನೆ. ತಾನು ಬದಲಾಗಿದ್ದೇನೆ. ನನ್ನನ್ನು ಕ್ಷಮಿಸಿ ಎಂದು ಭಾಗ್ಯ ಸೇರಿದಂತೆ ಎಲ್ಲರ ಬಳಿ ಗೋಗರೆಯುತ್ತಿದ್ದಾನೆ.

ಗಂಡ ಏನು ಮಾಡಿದ್ರೂ ಸರಿ, ಅದನ್ನು ಸಹಿಸಿಕೊಂಡು ಹೋಗಬೇಕು, ಹೇಗೋ ಈಗ ಒಳ್ಳೆಯವನಾಗಿದ್ದಾನೆ ಎನ್ನುವುದು ಭಾಗ್ಯಳ ಅಮ್ಮ ಸುನಂದಾ ಮಾತು. ಜೊತೆಗೆ ಭಾಗ್ಯ ಮಗಳು ತನ್ವಿ ಕೂಡ ಅಪ್ಪನ ಪರ. ಆದರೆ ಕುಸುಮಾ, ಭಾಗ್ಯ ಸೇರಿದಂತೆ ಯಾರೂ ತಾಂಡವ್​ ಮಾತು ಕೇಳಲು ತಯಾರು ಇಲ್ಲ.

ಇದರ ನಡುವೆಯೇ, ತಾಂಡವ್​ ಏನೋ ತರಕಾರಿ ಕಟ್​ ಮಾಡಲು ಹೋಗಿ ಬೆರಳು ಕಟ್ ಮಾಡಿಕೊಂಡಾಗ, ಅಲ್ಲಿರುವ ಭಾಗ್ಯಳೇ ಹೋಗಿ ಅವನ ಕೈಗೆ ಬ್ಯಾಂಡೇಜ್​ ಕಟ್ಟಿದ್ದಾಳೆ. ಇದನ್ನು ನೋಡಿ ಆದಿಗೆ ಶಾಕ್​ ಆಗಿದೆ. ತಾಂಡವ್​ಗೆ ಭಾಗ್ಯಳ ಮೇಲೆ ಮತ್ತೆ ಲವ್​ ಶುರುವಾಗಿದೆ.

ಇದರ ನಡುವೆಯೇ ಭಾಗ್ಯ ಮಗ ಗುಂಡಣ್ಣ ಉರ್ಫ್​ ನಿಹಾರ್​ ಗೌಡ ಒಂದು ಪೋಸ್ಟ್​ ಶೇರ್​ ಮಾಡಿಕೊಂಡಿದ್ದು, ಅದರಲ್ಲಿ ಭಾಗ್ಯ, ತಾಂಡವ್​ ಜೊತೆ ಇಬ್ಬರು ಮಕ್ಕಳನ್ನು ನೋಡಬಹುದು.

ಇದನ್ನು ನೋಡಿದ ನೆಟ್ಟಿಗರು ಪ್ಲೀಸ್​ ಹೀಗೆ ಮಾಡಬೇಡ ಭಾಗ್ಯ. ತಾಂಡವ್​ನನ್ನು ನಂಬಬೇಡ. ನಿನಗಾಗಿ ಇರುವವನು ಆದಿ. ಆದಿಯ ಕೈ ಬಿಡಬೇಡ ಎನ್ನುತ್ತಿದ್ದಾರೆ.

ನಿಹಾರ್​ ಗೌಡ ಈ ಫೋಟೋ ಸುಮ್ಮನೇ ಶೇರ್​ ಮಾಡಿಕೊಂಡಿದ್ದರೂ, ಇದು ಸೀರಿಯಲ್​ನಲ್ಲಿ ಹೀಗೆ ಆಗತ್ತಾ ಎಂದು ಕೆಲವರು ಸಂಶಯ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಶ್ರೇಷ್ಠಾಗೆ ಬುದ್ಧಿ ಬಂದು ತಾಂಡವ್​ ಜೊತೆ ಬರುತ್ತಾಳೆ. ಭಾಗ್ಯ ಮತ್ತು ಆದಿ ಒಂದಾಗ್ತಾರೆ ಎನ್ನುತ್ತಿದ್ದಾರೆ.

Source link

Leave a Reply

Your email address will not be published. Required fields are marked *