ಕಾಜೋಲ್ ಮತ್ತು ಅಜಯ್ ದೇವಗನ್ ಅವರ 27ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಅಜಯ್ಗಾಗಿ ಇಬ್ಬರು ಪ್ರಮುಖ ನಟಿಯರಾದ ರವೀನಾ ಟಂಡನ್ ಮತ್ತು ಕರಿಷ್ಮಾ ಕಪೂರ್ ನಡುವೆ ನಡೆದಿದ್ದ ಜಗಳದ ಹಳೆಯ ಕಥೆಯೊಂದು ಮುನ್ನೆಲೆಗೆ ಬಂದಿದೆ.

ತಾರಾ ಜೋಡಿಗಳು ಸುದೀರ್ಘವಾಗಿ ದಾಂಪತ್ಯ ಜೀವನ ನಡೆಸುವುದು ಬಲು ಅಪರೂಪ ಎನ್ನಬಹುದು. ಚಿತ್ರ ತಾರೆಯರ ಜೋಡಿ ಎಂದರೆ ಅಲ್ಲಿ ಡಿವೋರ್ಸ್ ಎನ್ನುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದ್ದು, ಇದರ ನಡುವೆಯೂ ಕೆಲವು ಜೋಡಿಗಳು ಸುದೀರ್ಘ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಅಂಥವರಲ್ಲಿ ಒಬ್ಬರು ನಟಿ ಕಾಜೋಲ್ ಮತ್ತು ಅಜಯ್ ದೇವಗನ್. ನಿನ್ನೆ ಅರ್ಥಾತ್ ಫೆ.24ರಂದು ಈ ಜೋಡಿ ಮದುವೆಯಾಗಿ 27 ವರ್ಷಗಳು ಕಳೆದಿವೆ. ಈ ಸಂದರ್ಭದಲ್ಲಿ ಇವರ ಕುತೂಲದ ಲವ್ ಸ್ಟೋರಿಯೂ ರಿವೀಲ್ ಆಗಿದೆ.

ಅದೇನೆಂದರೆ, ಅಜಯ್ ದೇವಗನ್ಗಾಗಿ ಇಬ್ಬರು ಬಾಲಿವುಡ್ ನಾಯಕಿಯರು ಫೈಟ್ ನಡೆಸಿರುವ ವಿಚಾರ ಇದಾಗಿದೆ. ಈ ನಾಯಕಿಯರಲ್ಲಿ ಒಬ್ಬರಾಗಿರುವ ರವೀನಾ ಟಂಡನ್ (Raveena Tondon) ಅವರೇ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಹೇಳಿಕೊಂಡಿದ್ದು, ಅದು ಮತ್ತೆ ಮುನ್ನೆಲೆಗೆ ಬಂದಿದೆ.

ತಾವು ಹಾಗೂ ಇನ್ನೋರ್ವ ಕರಿಷ್ಮಾ ಕಪೂರ್ ಹೇಗೆ ಅಜಯ್ ದೇವಗನ್ ಅವರಿಗಾಗಿ ಹೊಡೆದಾಟ ನಡೆಸಿದ್ವಿ ಎನ್ನುವುದನ್ನು ನಟಿ ಹೇಳಿಕೊಂಡಿದ್ದಾರೆ. ಈ ಸಂದರ್ಶನದಲ್ಲಿ ರವೀನಾ ಟಂಡನ್, ಕರಿಷ್ಮಾ ಕಪೂರ್ ಅವರ ಹೆಸರು ಹೇಳದೆ ಓರ್ವ ನಟಿ ನನ್ನನ್ನು 4 ಸಿನಿಮಾದಿಂದ ತೆಗೆದುಹಾಕುವಂತೆ ಮಾಡಿದ್ದಳು ಎಂದು ಆರೋಪಿಸಿದ್ದರು. ಆಕೆ ತನ್ನ ಇನ್ಫ್ಲುಯೆನ್ಸ್ ಬಳಸಿ ನನಗೆ ನಾಲ್ಕು ಸಿನಿಮಾ ಸಿಗದ ಹಾಗೆ ಮಾಡಿದ್ದಳು ಎಂದಿದ್ದರು. ತಮ್ಮ ಬಾಲಿವುಡ್ ಸ್ನೇಹಿತೆಯ ಹೆಸರು ತೆಗೆದುಕೊಂಡಿದ್ದ ನಟಿ, ಜೂಹಿ ಚಾವ್ಲಾ, ಮಾಧುರಿ ದೀಕ್ಷಿತ್, ಶಿಲ್ಪಾ ಶೆಟ್ಟಿ, ಕಾಜೊಲ್, ರಾಣಿ ಮುಖಜರ್ಜಿ, ನೀಲಂ, ಮನೀಷ್ ಕೊಯಿರಾಲಾ (Maneesha Koirala) ಅವರ ಜೊತೆ ಉತ್ತಮ ಬಾಂಧವ್ಯ ಇದೆ ಎಂದು ಹೇಳಿ ಕರಿಷ್ಮಾ ಅವರ ಹೆಸರನ್ನು ಹೇಳದೇ ಆಕೆ ತಮಗೆ ಅನ್ಯಾಯ ಮಾಡಿದುದಾಗಿ ಹೇಳಿದ್ದರು.

ಆಕೆ (ಕರಿಷ್ಮಾ ಕಪೂರ್) ನನ್ನ ವಿಚಾರವಾಗಿ ತುಂಬ ಅಭದ್ರತೆಯಿಂದ ಇದ್ದಳು. ನಾಲ್ಕು ಸಿನಿಮಾಗಳಿಂದ ನನ್ನನ್ನು ತೆಗೆದು ಹಾಕುವಂತೆ ಮಾಡಿದ್ದಳು. ನಾನು ಆಕೆಯ ಜೊತೆ ಒಂದು ಸಿನಿಮಾ ಮಾಡಬೇಕಾಗಿ ಬಂತು. ಆ ನಟಿ ನಿರ್ಮಾಪಕರಿಗೂ, ಹೀರೋಗೂ ಕ್ಲೋಸ್ ಆಗಿದ್ದರು. ಈ ತರ ಎಲ್ಲ ಆಗತ್ತೆ, ಆದರೆ ನನ್ನ ಹತ್ರ ಈ ರೀತಿ ಆಟ ಆಡೋಕೆ ಆಗಲ್ಲ ಎಂದು ರವೀನಾ ಹೇಳಿದ್ದರು.

ಅಷ್ಟಕ್ಕೂ ಆಗಿರೋದು ಏನೆಂದರೆ, ರವೀನಾ ಮತ್ತು ಅಜಯ್ ದೇವಗನ್ (Ajay Devagan) ನಡುವೆ ಕುಚ್ ಕುಚ್ ಇತ್ತು. ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದರು. ಆದರೆ ಇದೇ ವೇಳೆ ಅಜಯ್ ಅವರ ಕಣ್ಣು ಕರಿಷ್ಮಾ ಅವರ ಮೇಲೆ ಬಿತ್ತು. ಅವರು ಕರಿಷ್ಮಾ ಜೊತೆ ಡೇಟಿಂಗ್ (Dating) ಮಾಡಲು ಶುರು ಮಾಡಿದರು. ಇದರಿಂದಾಗಿ ಈ ಇಬ್ಬರು ನಟಿಯರ ಮಧ್ಯೆ ಪೈಪೋಟಿ, ಅಸೂಯೆಗಳ ಜಗಳ ಶುರುವಾಗಿತ್ತು.

ಪಾರ್ಟಿಯೊಂದರಲ್ಲಿ (Party) ರವೀನಾ ಮತ್ತು ಕರಿಷ್ಮಾ ಕ್ಯಾಮೆರಾಕ್ಕೆ ಪೋಸ್ ಕೊಡುವ ಸಂದರ್ಭ ಬಂದಾಗ ಇಬ್ಬರೂ ದೂರ ಹೋಗಿದ್ದಾಗಲೇ ಇಬ್ಬರ ನಡುವಿನ ತಿಕ್ಕಾಟದ ಅರಿವಾಗಿತ್ತು. ‘ಅಗತ್ಯ ಬಿದ್ದರೆ ನಾನು ಪೊರಕೆ ಜೊತೆ ಪೋಸ್ ಕೊಡ್ತೀನಿ. ಕರೀಷ್ಮಾ, ನಾನು ಸ್ನೇಹಿತರಲ್ಲ. ಕೆಲಸದ ವಿಷಯ ಬಂದಾಗ ಈ ರೀತಿ ಅಹಂಕಾರದ ಸಮಸ್ಯೆಗೆ ನಾನು ತಲೆಕೆಡಿಸಿಕೊಳ್ಳೋದಿಲ್ಲ" ಎಂದು ರವೀನಾ ಹೇಳಿದ್ದರು. ಈಗ ಎಲ್ಲವೂ ಸ್ಪಷ್ಟವಾಗಿ ಬಹಿರಂಗಗೊಂಡಿದೆ.

Source link
ಇಬ್ಬರು ನಟಿಯರ ಜಗಳದಲ್ಲಿ ಕಾಜೋಲ್ ಪಾಲಾದ ಅಜಯ್ ದೇವಗನ್! Anniversy ದಿನ ರೋಚಕ ಸ್ಟೋರಿ ರಿವೀಲ್